ಸುದ್ದಿ

ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ ‘ಎಂಡೆಮೊಲ್’: ಈ ಸಲ ಇತಿಹಾಸವನ್ನು ಸೃಷ್ಟಿಸಿದ ತೆಲುಗು ಬಿಗ್ ಬಾಸ್,.!

59

ಭಾರತ ಜನಪ್ರಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ತುಂಬಾನೇ ಮುಖ್ಯವಾದುದು. ಹಾಲಿವುಡ್ ನಿಂದ ಭಾರತಕ್ಕೆ ಬಂದಿರುವ ಈ ಶೋ 2006ರಲ್ಲಿ ಮೊದಲ ಸಲ ಹಿಂದಿಯಲ್ಲಿ ಆರಂಭವಾಯಿತು. ಅದಾದ ಬಳಿಕ ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗಿದೆ. ಹಿಂದಿಯಲ್ಲಿ 13ನೇ ಆವೃತ್ತಿ, ಕನ್ನಡದಲ್ಲಿ 7ನೇ ಆವೃತ್ತಿ, ತೆಲುಗು, ತಮಿಳು, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಬಂದಿದೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಯಾವ ಶೋಗೂ ಸಿಗದ ಟಿ.ಆರ್.ಪಿ ತೆಲುಗಿಗೆ ಸಿಕ್ಕಿದೆ.

ಈ ಮಾಹಿತಿಯನ್ನ ಖುದ್ದು ಬಿಗ್ ಬಾಸ್ ಶೋ ಹಕ್ಕು ಹೊಂದಿರುವ ಎಂಡೆಮೊಲ್ ಬಹಿರಂಗಪಡಿಸಿದೆ. ಅಷ್ಟಕ್ಕೂ, ತೆಲುಗು ಬಿಗ್ ಬಾಸ್ ನಿರ್ಮಿಸಿರುವ ಆ ದಾಖಲೆ ಏನು? ಮುಂದೆ ಓದಿ….
ಅತಿ ಹೆಚ್ಚು TRP ಪಡೆದ ಫೈನಲ್ ಎಪಿಸೋಡ್  ಬಿಗ್ ಬಾಸ್ ಎಲ್ಲ ಭಾಷೆಗಳನ್ನು ಒಳಗೊಂಡಂತೆ ಇದುವರೆಗೂ ಯಾವ ಫೈನಲ್ ಎಪಿಸೋಡ್ ಗೂ ಸಿಗದಷ್ಟು ಟಿ.ಆರ್.ಪಿ ಪಡೆದಿದೆ ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಫೈನಲ್. ಎಂಡೆಮೊಲ್ ಪ್ರಕಟ ಮಾಡಿರುವ ಪ್ರಕಾರ, 4.5 ಗಂಟೆಯಲ್ಲಿ 18.29 ಟಿ.ಆರ್.ಪಿ ರೇಟಿಂಗ್ ಪಡೆದುಕೊಂಡಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ ಅಂತೆ.

ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ 13 ಆವೃತ್ತಿ ನಡೆಯುತ್ತಿದೆ. ಸಲ್ಮಾನ್ ಹಾಗೂ ಹಿಂದಿ ಬಿಗ್ ಬಾಸ್ ಗೆ ಹೆಚ್ಚು ವೀಕ್ಷಕರಿದ್ದಾರೆ. ಈ ಕಡೆ ಕನ್ನಡದಲ್ಲಿ ಸುದೀಪ್ ನಡೆಸಿಕೊಡುತ್ತಿರುವ ಕನ್ನಡ ಬಿಗ್ ಬಾಸ್ ಹಾಗೂ ಆ ಕಡೆ ಕಮಲ್ ಹಾಸನ್ ನಡೆಸಿಕೊಡುತ್ತಿರುವ ತಮಿಳು ಬಿಗ್ ಬಾಸ್ ಗೂ ಹೆಚ್ಚು ವೀಕ್ಷಕರಿದ್ದಾರೆ. ಆದರೆ, ಫೈನಲ್ ಎಪಿಸೋಡ್ ಗಳನ್ನ ಲೆಕ್ಕಾಚಾರಕ್ಕೆ ತೆಗೆದುಕೊಂಡಾಗ, ನಾಗಾರ್ಜುನ ಸಾರಥ್ಯದ ತೆಲುಗು ‘ಕಿಂಗ್’ ಎನಿಸಿಕೊಂಡಿದೆ. ವಿಶೇಷ ಅಂದ್ರೆ ನಾಗಾರ್ಜುನ ಬಿಗ್ ಬಾಸ್ ಹೋಸ್ಟ್ ಮಾಡಿದ್ದು ಇದೇ ಮೊದಲ ಸಲ.

ಫೈನಲ್ ನಲ್ಲಿ ಏನು ಸ್ಪೆಷಲ್ ಇತ್ತು : ತೆಲುಗು ಬಿಗ್ ಬಾಸ್ ಫೈನಲ್ ದಿನ ಅಂತಹದ್ದೇನಿತ್ತು ವಿಶೇಷ ಎಂದು ಗಮನಿಸಿದ್ರೆ, ಅಂದು ಫೈನಲ್ ವೇದಿಕೆ ಮೆಗಾಸ್ಟಾರ್ ಚಿರಂಜೀವಿ ಎಂಟ್ರಿಕೊಟ್ಟಿದ್ದರು. ಚಿರು ಎಂಟ್ರಿಯಿಂದ ಶೋಗೆ ಮತ್ತಷ್ಟು ಟಿ.ಆರ್.ಪಿ ಲಭಿಸಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಗ್ನಿಸಾಕ್ಷಿ ಖ್ಯಾತಿಯ ನಟಿ ಪ್ರಿಯಾಂಕಾರಿಗೆ ಒಂದೇ ಒಂದು ಆಸೆ ಇದೆಯಂತೆ, ಏನದುಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ. “ಬಾಲೊಂದು ನಂದಾದೀಪ” (ಚೆಂಡಿನಾಟ) ಟಾಸ್ಕನ್ನು ನೀಡಿದರು ಬಿಗ್ ಬಾಸ್. ಈಗಾಗಲೆ ಹಲವಾರು…

  • ವಿಸ್ಮಯ ಜಗತ್ತು

    ಈ ಊರಿನ ಜನ ಸೂರ್ಯನನ್ನ ನೋಡೋದು 40 ದಿವಸಕ್ಕೆ ಒಂದೇ ಸಲ ಅಂತೆ..!ಯಾವ ಊರು ಗೊತ್ತಾ..?

    ಈ ನಗರವು ಪೋಲಾರ್ ವೃತ್ತದ ಆಚೆಗೆ ಕಾಣ ಸಿಗುವಂತದ್ದು, ಈ ನಗರದ ಹೆಸರು ಮುರ್ಮ್ಯಾನ್ಸ್ಕ್ಬೆ (Murmansk) ಇದು ರಷ್ಯಾ ದೇಶದ ನಾರ್ತ್ ಪೋಲ್ ನಲ್ಲಿ ಕಂಡುಬರುವ ಒಂದು ನಗರ.

  • ಸುದ್ದಿ

    ಇಲ್ಲಿದೆ ನೋಡಿ ಮದ್ಯ ಪ್ರಿಯರಿಗೊಂದು ಸಿಹಿಸುದ್ದಿ…!

    ಗೋವಾ ಪ್ರವಾಸಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.  ಅಚ್ಚರಿ ಪಡಬೇಡಿಇದು ನಿಜ…. ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು.  ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ…

  • ಸ್ಪೂರ್ತಿ

    ಮಕ್ಕಳಿಗೆ ಹಳ್ಳಿ ಸೊಗಡಿನ ಅರಿವು ಮೂಡಿಸಲು ಸುನಿತಾ ಮಂಜುನಾಥ್ ರವರು ತಮ್ಮ ಶಾಲೆಯಲ್ಲಿ ಮಾಡಿದ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್…

    ಸುನಿತಾ ಮಂಜುನಾಥ್ ರವರ ನೂತನ ಪ್ರಯತ್ನದ ಫಲವಾಗಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ತುಂಬಾ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು..

  • ಸಿನಿಮಾ

    ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ!ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿಕೊಂಡ ನಟಿಯ ಸಹೋದರಿ..

    ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಅವರ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ಟಾಪ್ ನಟಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಅವರ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿದ್ದು, ಇದ್ದ ಹಣವನ್ನೆಲ್ಲ ಖರ್ಚು ಮಾಡಲಾಗಿದೆ. ಈಗ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ಸಹೋದರಿ ಉಷಾದೇವಿ…

  • inspirational

    ಮಕ್ಕಳ ತಂದೆ ತಾಯಿಯರಿಗೆ ರಾಜ್ಯ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್.! ಈ ಮಾಹಿತಿ ನೋಡಿ.

    ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಬಂದಿದೆ, ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಹೊಸ ಆದೇಶವನ್ನ ಜಾರಿಗೆ ತಂದಿದ್ದು ಇದು ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಂತಸವನ್ನ ತಂದಿದೆ. ಹಾಗಾದರೆ ರಾಜ್ಯ ಶಿಕ್ಷಣ ಇಲಾಖೆಯು ಜಾರಿಗೆ ತಂದಿರುವ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ…