ಸಿನಿಮಾ

ಮೊದಲ ಬಾರಿಗೆ ತನ್ನ ಅಭಿಮಾನಿ ಮೇಲೆಯೇ ಗರಂ ಆದ ದಾಸ ದರ್ಶನ್..!ಕಾರಣ ಏನು ಗೊತ್ತಾ..?

227

ಮಾಸ್ಟರ್ ಹಿರಣ್ಣಯ್ಯನವರ ಅಗಲಿಕೆಯ ಕಂಬನಿ ಮಿಡಿದಿರುವ ದರ್ಶನ್ ‘ಗಜ’ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ. ಅನೇಕ ಕಲಾವಿದರು ಮಾಸ್ಟರ್ ಹಿರಣ್ಣಯ್ಯ ಅವರ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತೆಯೇ ನಟ ದರ್ಶನ್ ಕೂಡ ಹಿರಣ್ಣಯ್ಯ ಅವರ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.

ಕನ್ನಡ ರಂಗಭೂಮಿಯ ಹಿರಿಯ ಕಲಾವಿದರಾದ ಮಾಸ್ಟರ್ ಹಿರಣಯ್ಯ ಅವರು ವಿಧಿವಶರಾಗಿದ್ದಾರೆ. ದುಃಖ ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ‘ಗಜ’ ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ಹೇಳಿದ್ದಾರೆ.

ಹಿರಣ್ಣಯ್ಯ ಅವರ ಅಂತಿಮ ದರ್ಶನ ಪಡೆದು ದರ್ಶನ್ ವಾಪಸ್ ತೆರಳುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಡಿ ಬಾಸ್ ಎಂದು ಘೋಷಣೆ ಕೂಗಲು ಮುಂದಾಗಿದ್ದು, ಇದರಿಂದ ಕೋಪಗೊಂಡ ದರ್ಶನ್ ಸುಮ್ಮನಿರುವಂತೆ ತಿಳಿಸಿದ್ದಾರೆ. ಅಭಿಮಾನಿ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    Human Brain: ಆಲೋಚಿಸಿದ್ರೆ ಸಾಕು, ಅದು ಅಕ್ಷರವಾಗಿ ಬದಲಾಗುತ್ತೆ…ಮೆದುಳಿನ ವಿಶಿಷ್ಟ ಶಕ್ತಿ ಬಳಸಿ ಬರೆದ ಸ್ಟ್ರೋಕ್​​ ರೋಗಿ !

    ಕತ್ತಿನ ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯನ್ನು ಹೊಂದಿರುವ 65 ವರ್ಷದ ವೃದ್ಧರೊಬ್ಬರು ಕೈ ಚಲನೆಯನ್ನು ಊಹಿಸಿಕೊಳ್ಳುವ ಮೂಲಕ ಬರವಣಿಗೆಯನ್ನು ಸಾಧಿಸಿದ್ದಾರೆ. ಬ್ರೈನ್‌ ಕಂಪ್ಯೂಟರ್ ಇಂಟರ್ಫೇಸ್ (BCI) ಸಾಧನವನ್ನು ಬಳಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಮೆದುಳು ಪಠ್ಯದ ಮೂಲಕ ಸಂವಹನವನ್ನು ಸಾಧಿಸಿದೆ. ಅಮೆರಿಕದ ನರವಿಜ್ಞಾನಿಗಳು ಈ ಸಾಧನೆಯನ್ನು ಸಂಶೋಧನಾ ಸಹಯೋಗಿ ಬ್ರೈನ್‌ಗೇಟ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದಾರೆ. ಬ್ರೈನ್‌ ಕಂಪ್ಯೂಟರ್ ಇಂಟರ್ಫೇಸ್ ಎನ್ನುವ ಸಾಧನವು ಮೆದುಳಿನ ಮೇಲೆ ಚಿಪ್‌ಗಳಿಂದ ಕಾರ್ಯ ನಿರ್ವಹಿಸುತ್ತದೆ. ಅದು ಬಳಕೆದಾರರು ಯೋಚಿಸಿದಾಗ ಮೆದುಳಿನ ಚಟುವಟಿಕೆಯನ್ನು ಪತ್ತೆ ಮಾಡುತ್ತದೆ ಮತ್ತು ಅದನ್ನು…

  • ಸುದ್ದಿ

    ಬಿಹಾರದಲ್ಲಿ ಹಣ್ಣಿನ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ…..

    ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 165 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ. ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ. ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು…

  • ಸುದ್ದಿ

    ಥ್ರೆಡ್ಡಿಂಗ್ ನಂತರ ಉಂಟಾಗುವ ಮೊಡವೆಗಳ ಪರಿಹಾರಕ್ಕೆ ಇಲ್ಲಿದೆ ಸುಲಭ ‘ಉಪಾಯ’…!

    ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ.ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಮೊಡವೆಗಳು ಏಳುತ್ತವೆ. ಒಂದು ಮಾಡಲು ಹೋಗಿ ಇನ್ನೊಂದಾಯ್ತು ಅಂತಾ ಗೊಣಗ್ತಾರೆ. ಇನ್ನು ಈ ಬಗ್ಗೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ…

  • ಸುದ್ದಿ

    ‘ಪಾರ್ಲೆ’ ಉದ್ಯೋಗಿಗಳ ಕೆಲಸಕ್ಕೆ ಕುತ್ತು : 10 ಸಾವಿರ ಕಾರ್ಮಿಕರಿಗೆ ಸಂಕಷ್ಟ……!

     ಏಳೆಂಟು ದಶಕಗಳ ಇತಿಹಾಸ ಹೊಂದಿರುವ ದೇಶದ ಅತ್ಯಂತ ದೊಡ್ಡ ಬಿಸ್ಕತ್ ತಯಾರಿಕಾ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಉದ್ಯೋಗ ನಷ್ಟ ಉಂಟಾಗಿರುವ ವರದಿಯ ಬೆನ್ನಲ್ಲೇ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪಾರ್ಲೆ ಬಿಸ್ಕತ್ ಸಂಸ್ಧೆ ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ ಎಂದು ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ. ಜಿಎಸ್ ಟಿ ಕಡಿತಗೊಳಿಸುವಂತೆ ನಾವು…

  • ಸುದ್ದಿ

    ಜಾರಿಯಾಯ್ತು ಕೇಂದ್ರ ಸರ್ಕಾರದ ಹೊಸ ರೂಲ್ಸ್ ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ, ಇಲ್ಲಿದೆ ನೋಡಿ ಮಾಹಿತಿ,.!

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…

  • ಸುದ್ದಿ

    ಇನ್ಮುಂದೆ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌,.!

    ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…