ಸುದ್ದಿ

ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ರಮ್ಯಾ.!ಆ ದೂರಿನಲ್ಲಿ ಏನಿದೆ ಗೊತ್ತಾ..?

232

ಮಾಜಿ ಸಂಸದೆ ನಟಿ ರಮ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ, ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಫೇಸ್ಬುಕ್ ಖಾತೆ ಮೂಲಕ ಬ್ಯಾಡ್ಜ್, ಟೀ ಶರ್ಟ್, ಫೋನ್ ಕವರ್, ಟೋಪಿ ಮೊದಲಾದ ಉಚಿತ ಉಡುಗೊರೆಗಳಿಗಾಗಿ ನರೇಂದ್ರ ಮೋದಿಯವರಿಗೆ ವೋಟ್ ಮಾಡಿ ಎಂದು ಮತದಾರರಿಗೆ ಆಮಿಷ ಒಡ್ಡಲಾಗಿದೆ. ಅಲ್ಲದೆ ವೆಬ್ ಸೈಟ್ ಒಂದರ ಮೂಲಕ ಈ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ ಎಂದು ರಮ್ಯಾ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಪ್ರತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ರಮ್ಯಾ, ಇಂತಹ ಫೇಸ್ಬುಕ್ ಪೇಜ್ ಗಳು ಹಾಗು ವೆಬ್ಸೈಟ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳನ್ನು ನಿರ್ವಹಿಸಿದವರಿಗೆ ನೀಡಿದ ಸಂಬಳ ಸೇರಿದಂತೆ ಎಲ್ಲ ಖರ್ಚುಗಳನ್ನು ನರೇಂದ್ರ ಮೋದಿ ಅವರ ವೈಯಕ್ತಿಕ ಚುನಾವಣಾ ವೆಚ್ಚಕ್ಕೆ ಸೇರಿಸುವಂತೆ ಆಗ್ರಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ, ಜ್ಯೋತಿಷ್ಯ

    ಊಟದ ನಂತರ ಹೀಗೆ ಮಾಡಿದರೆ ದಾರಿದ್ಯ ಆವರಿಸಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಬರುತ್ತದೆ..!

    ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ.  ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ  ಪದ್ಧತಿಗಳಿವೆ. ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು…

  • inspirational

    ನೀರೊಳಗಿರುವ ಟೈಟಾನಿಕ್ ಹಡಗನ್ನು ಮೇಲೆತ್ತುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ ಏಕೆ? ರೋಚಕ ಸತ್ಯವನ್ನು ತಿಳಿಯಿರಿ.

    ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು….

  • ಸುದ್ದಿ

    ನೀವೆಂದಾದರೂ ಸಮುದ್ರದ ತೀರದಲ್ಲಿ ಈ ತರಹದ ಮೊಟ್ಟೆಗಳನ್ನು ಕಂಡಿದ್ದೀರಾ..? ಏನಿದು ಗೊತ್ತೇ..?

    ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ. ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು…

  • ಗ್ಯಾಜೆಟ್

    ನಿಮ್ಗೆ ವಾಟ್ಸ್ಯಾಪ್ ಇಲ್ಲದೆ ನಿದ್ದೆ ಬರೋದಿಲ್ಲ ಅಂತ ಗೊತ್ತು..!ಆದ್ರೆ ಇದ್ರಿಂದ ನಿಮ್ಗೆ ಏನೆಲ್ಲಾ ಬಾರಿ ನಷ್ಟ ಆಗುತ್ತಿದೆ ಗೊತ್ತಾ..?

    ಇಲ್ಲ, ನಾನು ವಾಟ್ಸ್ಯಾಪ್ ಯೂಸ್‌ಮಾಡ್ತಿಲ್ಲ… ಹಾಗಂತ ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.

  • bank, ಬ್ಯಾಂಕ್, ಸಾಲ, ಹಣ

    ಮುದ್ರಾ ಯೋಜನೆ ಬಗ್ಗೆ ತಿಳಿಯಿರಿ, ಸ್ವಯಂ ಉದ್ಯೋಗಿಗಳಾಗಿ

    ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ’ ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿಸ್ತಾ ಇದ್ದೀವಿ. ಇಂಥಾ ಯೋಜನೆಗಳು ಅರ್ಹರಿಗೆ ತಲುಪಲೇ ಬೇಕು ಅಂತಾದ್ರೆ ನಾವು ನೀವು ಎಲ್ಲರೂ.., ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕು..! ಫ್ರೆಂಡ್ಸ್, ಸರಿ.., ಯೋಜನೆ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡ್ತಾ ಇದ್ದೀವಿ..ಪ್ರತಿಯೊಬ್ಬರಿಗೂ ಈ ಮಾಹಿತಿ ಮುಟ್ಟಿಸುವ ಕೆಲಸವನ್ನು ನೀವು ಮಾಡೇ ಮಾಡ್ತೀರ ಅನ್ನೋ ನಂಬಿಕೆ ನಮಗಿದೆ.

  • ದೇಶ-ವಿದೇಶ

    ಅಮೇರಿಕಾವನ್ನು ಧ್ವಂಸ ಮಾಡುವುದಾಗಿ, ಬಹಿರಂಗವಾಗಿ ಸವಾಲು ಹಾಕಿದ ಈ ಸರ್ವಾಧಿಕಾರಿ!

    ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು, ಇದೆ ಸಮಯದಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.