ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್ ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್ ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ…
ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ ದಕ್ಷಿಣ ಭಾರತದಲ್ಲೇ ಇದೆ ಈ ಅಪಾಯಕಾರಿ ಡ್ಯಾಮ್. ಅದು ಯಾವಾಗ ಬೇಕಿದ್ದರೂ ಒಡೆದು ಹೋಗಬಹುದು.

ಹೀಗೆ ಮನುಕುಲದ ವಿನಾಶಕ್ಕೆ ಕಾದುಕುಳಿತ ಆಧುನಿಕ ಯಮಧರ್ಮರಾಯ ನಂತಿರುವ ಈ ಡ್ಯಾಮ್ ನಮ್ಮ ಪಕ್ಕದಲ್ಲೇ ಇರುವ ಕೇರಳ ರಾಜ್ಯದಲ್ಲಿದೆ. ಇದು ಒಡೆದು ಹೋದರೆ ಸಂಪೂರ್ಣವಾಗಿ ಜಲಸಮಾಧಿ ಆಗುವುದು ಗ್ಯಾರಂಟಿ. ಜಲ ರಾಕ್ಷಸನಂಟಿರುವ ಈ ಡ್ಯಾಮ್ ಹೆಸರೇ ಮುಲ್ಲಪೆರಿಯಾರ್.
ಒಂದು ವೇಳೆ ಹಾಗೆ ಏನು ಹಾಗೇನಾದ್ರೂ ಆದ್ರೆ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಜಲಪ್ರಳಯವೇ ನಡೆದು ಹೋಗುತ್ತೆ. ಇದು ಗೊತ್ತಿದ್ದರೂ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ಜನರು ಮಾತ್ರ ಈ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಈ ಅಣೆಕಟ್ಟು ನೂರಾರು ವರ್ಷಗಳಿಂದ ನಿರ್ಮಾಣವಾಗಿದೆ. ಇದು ಕೇರಳ ರಾಜ್ಯದಲ್ಲಿದ್ದರೂ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಾತರ ತಮಿಳುನಾಡಿನ ಜನ. ಈ ವಿಷಯದಲ್ಲಿ ನಿಮಗೆ ಒಂದು ಕನ್ಫ್ಯೂಸ್ ಆಗುತ್ತಿರುವುದು ಗ್ಯಾರೆಂಟಿ. ಏಕೆಂದರೆ ಮುಲ್ಲಪೆರಿಯಾರ್ ಡ್ಯಾಮ್ ಇರುವುದು ಕೇರಳದಲ್ಲಿ ಇದರ ನೀರನ್ನು ಬಳಸುತ್ತಿರುವುದು ತಮಿಳುನಾಡಿನ ಜನ. ಇದು ಹೇಗೆಂದು ನಿಮಗೆ ಕನ್ಫ್ಯೂಸ್ ಆಗದೆ ಇರಲ್ಲ. ಇದಕ್ಕೆ ಮೂಲ ಕಾರಣ ಈ ಪೆರಿಯಾರ್ ನದಿ ಕೇರಳದ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಹುಟ್ಟುತ್ತದೆ. ಈ ನದಿಗೆ ಅಡ್ಡವಾಗಿ ಇಡುಕ್ಕಿ ಜಿಲ್ಲೆಯ ತೇಕಡಿ ಬಳಿ ಒಂದು ಡ್ಯಾಮನ್ನು ಕಟ್ಟಿದ್ದಾರೆ.

ಹೀಗಾಗಿ ಇದಕ್ಕೆ ಮುಲ್ಲಪೆರಿಯಾರ್ ಅಣೆಕಟ್ಟು ಎಂದು ಹೆಸರಿಡಲಾಗಿದೆ. ಕೇರಳ ರಾಜ್ಯದಲ್ಲಿ ಅತಿ ಉದ್ದವಾದ ನದಿಯಾಗಿರುವ ಪೆರಿಯಾರ್, ತನ್ನ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಸುಮಾರು 244 ಕಿಲೋಮೀಟರ್ ಗಳ ವರೆಗೂ ಹರಿಯುತ್ತದೆ. ಒಟ್ಟು 5398 ಚದುರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಪೈಕಿ 5284 ಚದುರ ಕಿಲೋಮೀಟರ್ ಕೇರಳದಲ್ಲಿದ್ದರೆ, ಉಳಿದ 114 ಚದುರ ಕಿಲೋಮೀಟರ್ ಗಳಷ್ಟು ಜಲಾನಯನ ಪ್ರದೇಶ ತಮಿಳುನಾಡಿನಲ್ಲಿದೆ. ಇದು ಬರೀ 114 ಚದುರ ಕಿಲೋಮೀಟರ್ ಅಂತ ನಿಮಗೆ ಅನ್ನಿಸಬಹುದು. ಆದ್ರೆ ನಾವು ಹೇಳಿದ್ದು ಇದು ಜಲಾನಯನ ಪ್ರದೇಶ.

ಆದರೆ ಈ ಡ್ಯಾಮ್ ನ ಸಂಪೂರ್ಣ ಲಾಭವನ್ನು ತಮಿಳುನಾಡಿನ ಜನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬ್ರಿಟಿಷರು. ಈಗಿನ ಕೇರಳ ರಾಜ್ಯ ಬ್ರಿಟಿಷರ ಕಾಲದಲ್ಲಿ ತಿರುವನಂತಪುರ ರಾಜನ ಆಳ್ವಿಕೆಯಲ್ಲಿತ್ತು. ಆಗ ಇಡೀ ತಮಿಳುನಾಡನ್ನು ಮದ್ರಾಸ್ ರಾಜ್ಯ ಎಂಬ ಹೆಸರಲ್ಲಿ ಬ್ರಿಟಿಷರು ಆಳುತ್ತಾ ಇದ್ದರು. ಇದೇ ಮದ್ರಾಸ್ ಪ್ರಾಂತ್ಯಕ್ಕೆ ನಮ್ಮ ಕರ್ನಾಟಕದ ಕೆಲವು ಭಾಗಗಳು ಕೂಡ ಸೇರಿದ್ದವು. ಹೀಗಾಗಿ ತಮಿಳುನಾಡಿನ ಜನಕ್ಕೆ ನೀರು ಕೊಡಲೆಂದು ಬ್ರಿಟಿಷರು ಈ ಮುಲ್ಲಪೆರಿಯಾರ್ ಅಣೆಕಟ್ಟನ್ನು ಆಗ ಕಟ್ಟಿದ್ದರು.
ಇವತ್ತು ಅದು ಕೇರಳಿಗರ ಪಾಲಿಗೆ ಮರಣ ಮೃದಂಗ ವಾಗಿದೆ. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅಂತ ಅಂದರೆ, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ವಿವಾದದ ಮೂಲ ಕಾರಣ ಬ್ರಿಟಿಷರು. ಅಂದಿನ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ನಡುವೆ ಸಾವಿರ 1924ರಲ್ಲಿ ಆದ ಒಪ್ಪಂದವೇ ಮೂಲ ಕಾರಣ.

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ ವಾಗಿದ್ದು 1895. ಸಮುದ್ರ ಮಟ್ಟಕ್ಕಿಂತಲೂ ಸುಮಾರು 2890 ಅಡಿ ಎತ್ತರವಿದ್ದು, ಅರಬ್ಬಿ ಸಮುದ್ರದಿಂದ ಸುಮಾರು 130 ಕಿಲೋಮೀಟರ್ ಅಂತರದಲ್ಲಿದೆ. ಈ ಡ್ಯಾಮ್ ನಲ್ಲಿ ಸುಮಾರು 13ಟಿಎಂಸಿ ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ. ಸದ್ಯಕ್ಕೆ ಡ್ಯಾಮ್ನ ಹಿತದೃಷ್ಟಿಯಿಂದ ಸೆಂಟ್ರಲ್ ವಾಟರ್ ಕಮಿಷನ್ ಆದೇಶದಂತೆ ನೀರಿನ ಸಂಗ್ರಹಣೆಯ ಮಟ್ಟವನ್ನು 142 ಅಡಿಗಳಿಗೆ ನಿಯಂತ್ರಿಸಲಾಗಿದೆ.
ಈ ಡ್ಯಾಮ್ ಕಟ್ಟಿದಾಗ ಇದರ ಆಯಸ್ಸು ಐವತ್ತು ವರ್ಷಕ್ಕೆ ಎಂದು ಹೇಳಲಾಗಿತ್ತು. ಸುಣ್ಣ ಮತ್ತು ಗಾರೆಯನ್ನು ಬಳಸಿ ಕಟ್ಟಿರುವ ಈ ಡ್ಯಾಮ್ ನ ಭವಿಷ್ಯ ಹೆಚ್ಚು ಕಾಲ ಇರುವುದಿಲ್ಲ ಎಂದು, ಸ್ವತಹ ನಿರ್ಮಾಣ ಮಾಡಿದ ಬ್ರಿಟಿಷರಿಗೆ ನಂಬಿಕೆ ಇರಲಿಲ್ಲ. ಈ ಡ್ಯಾಮ್ ಪಕ್ಕದಲ್ಲೇ ಇನ್ನೊಂದು ಚಿಕ್ಕ ಡ್ಯಾಮ್ ಇದೆ. ಈ ಮುಲ್ಲಪೆರಿಯಾರ್ ಡ್ಯಾಮ್ ನಲ್ಲಿ ಸಂಗ್ರಹಿಸಿದ ನೀರನ್ನು ಈ ಚಿಕ್ಕ ಡ್ಯಾಮ್ ಮೂಲಕ ತಮಿಳುನಾಡಿಗೆ ಬಿಡಲಾಗುತ್ತದೆ.
ಕೇವಲ ಐವತ್ತು ವರ್ಷಗಳ ಕಾಲ ಅವದಿಗೆ ಅಂತ ಕಟ್ಟಿರುವ ಈ ಡ್ಯಾಮ್, ಈಗಾಗಲೇ ನೂರಿಪ್ಪತ್ತು ನಾಲ್ಕು ವರ್ಷಗಳನ್ನು ಕಳೆದಿದೆ. ಡ್ಯಾಮ್ ನಿರ್ಮಾಣಕ್ಕೆ ಬಳಸಿರುವ ಸುರುಕಿ ಕಳಚಿ ಬೀಳುತ್ತಿದ್ದು ಯಾವಾಗ ಬೇಕಾದರೂ ಮುಲ್ಲಪೆರಿಯಾರ್ ಒಡೆದು ಹೋಗಬಹುದೆಂಬ ಆತಂಕ ಎದುರಾಗಿದೆ. ನೀವು ಒಮ್ಮೆ ಯೋಚನೆ ಮಾಡಿ, ಒಂದು ವೇಳೆ 13 ಟಿಎಂಸಿ ನೀರು ಇರುವ ಈ ಆಣೆಕಟ್ಟು ಒಡೆದು ಹೋದರೆ, ಅದರ ಪಕ್ಕದಲ್ಲಿರುವ ಜನರ ಜೀವನದ ಕಥೆ ಏನಾಗುತ್ತೆ? ಯಾವ ಮಟ್ಟದಲ್ಲಿ ವಿನಾಶ ಸಂಭವಿಸಬಹುದು. ಅದು ಜಲಪ್ರಳಯಕ್ಕೆ ಸಮವಾದ ಅಂತೆ.

ಹೀಗಾಗಿ ಕೇರಳಿಗರು ಆತಂಕಕ್ಕೀಡಾಗಿದ್ದಾರೆ. ಒಂದು ವೇಳೆ ಈ ಡ್ಯಾಮ್ ಒಡೆದು ಹೋದರೆ ಕೇರಳದ ಕೊಚ್ಚಿನ್ ಸೇರಿದಂತೆ ಹಲವು ನಗರಗಳು ಕೊಚ್ಚಿ ಹೋಗುತ್ತವೆ. ಇದು ಕೇರಳದ ಹಲವಾರು ಜನಪರ ಸಂಘಟನೆಗಳ ಆತಂಕ ಮತ್ತು ಆಂದೋಲನಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಡ್ಯಾಮಿನಿಂದ ಕೆಲವೇ ಅಂತರದಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಎರಡು ಭೂಕಂಪನ ಕೇಂದ್ರಗಳು ಪತ್ತೆಯಾಗಿರುವುದು ಜನರ ಆತಂಕಕ್ಕೆ ಮತ್ತಷ್ಟೂ ಕಾರಣವಾಗಿದೆ.
ನೀವು ಹೇಳಬಹುದು ಡ್ಯಾಮ್ ಹಳೆಯದಾಗಿದೆ, ತಾನೇ ಹೊಸದಾಗಿ ಕಟ್ಟಬಹುದು ಅಂತ. ಆದರೆ ಇಲ್ಲೇ ಇರುವುದು ಪ್ರಾಬ್ಲಮ್. ಯಾಕಂದ್ರೆ ಈ ಡ್ಯಾಮ್ ಕೇರಳ ರಾಜ್ಯದಲ್ಲಿ ಇದ್ದರೂ, ಇದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಮಾತ್ರ ತಮಿಳುನಾಡು ಮತ್ತು ಸಂಪೂರ್ಣ ಅಧಿಕಾರ ಇರುವುದು ತಮಿಳುನಾಡಿನ ರಾಜ್ಯಕ್ಕೆ ಮಾತ್ರ. ಇದಕ್ಕೆ ಮೂಲ ಕಾರಣ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದ ನಂತರ ತಮಿಳುನಾಡು ಮತ್ತು ಕೇರಳದ ನಡುವೆ ಆದ ಒಪ್ಪಂದ.
ತಮ್ಮ ರಾಜ್ಯದಲ್ಲಿರುವ ಅಣೆಕಟ್ಟಿನ ನೀರನ್ನು ತಮಿಳುನಾಡು ಬಳಸುತ್ತಿರುವುದರ ಬಗ್ಗೆ ಕೇರಳಿಗರಿಗೆ ಆಕ್ರೋಶವಿಲ್ಲ. ಆದರೆ ಡ್ಯಾಮ್ ನ ನವೀಕರಣಕ್ಕೆ ತಮಿಳುನಾಡು ಸರ್ಕಾರ ಒಪ್ಪದೇ ಇರುವುದೇ ಕೇರಳಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿ ಒಂದು ಪ್ರಶ್ನೆ ಮೂಡಬಹುದು? ಹೊಸ ಆಣೆಕಟ್ಟು ಕತ್ತೋದಕ್ಕೆ ತಮಿಳುನಾಡಿನ ಸರ್ಕಾರ ಏಕೆ ಅಡ್ಡಿ ಮಾಡುತ್ತಿದೆ ಎಂದು. ಇಲ್ಲಿ ಒಂದು ಪ್ರಾಬ್ಲಮ್ ತಮಿಳುನಾಡಿನ ಸರ್ಕಾರಕ್ಕಿದೆ. ಅದು ಏನ್ ಎಂದರೆ ಒಂದು ವೇಳೆ ಮುಲ್ಲಾ ಪೇರಿಯಾರ ಡ್ಯಾಮನ್ನು ನವೀಕರಣ ಮಾಡೋದಕ್ಕೆ ಅವಕಾಶ ಕೊಟ್ಟರೆ, ತಮಿಳುನಾಡಿನ ಸರ್ಕಾರದ ಕೈಯಿಂದ ಆಣೆಕಟ್ಟು ಎಲ್ಲಿ ತಪ್ಪಿ ಹೋಗುತ್ತೋ ಎಂಬ ಭಯ ತಮಿಳುನಾಡಿ.ಹೀಗಾಗಿಯೇ ತಮಿಳುನಾಡಿನ ಸರ್ಕಾರ ಯಾರಿಗೆ ಏನಾದ್ರೂ, ನಮಗೆ ಏನು? ನಾವು ಚೆನ್ನಾಗಿದ್ದರೆ ಸಾಕು. ನೀರ್ ಬಂದ್ರ ಸಾಕು ಎಂಬ ಮನಸ್ಥಿತಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಸಂಪ್ರದಾಯದಲ್ಲಿ ಹಲವಾರು ಆಚರಣೆಗಳಿವೆ. ಹಲವು ಸಂಪ್ರದಾಯಗಳು ಇವೆ. ಇವುಗಳೆಲ್ಲವೂ ಹಲವಾರು ಕಾಲದಿಂದಲೂ ಬೆಳೆದುಕೊಂಡು ಬಂದಿವೆ. ಹಿಂದೂ ಧರ್ಮದವರು ಮಾಡುವ ಪ್ರತಿಯೊಂದು ಆಚರಣೆಗಳಿಗೂ ಸಹ ಅದರದ್ದೇ ಆದ ಒಂದು ಹಿನ್ನೆಲೆ ಇದೆ, ಹಾಗೆಯೆ ಇವುಗಳಲ್ಲಿ ಒಂದಾದ ಗಂಡಸರು ಕಟ್ಟುವ ಉಡುದಾರವು ಸಹ ಒಂದಾಗಿದೆ. ಈ ಉಡುದಾರಕಟ್ಟುವುದರ ಹಿಂದೆ ಹಲವು ಕಾರಣಗಳಿವೆ ಬನ್ನಿ ಆ ಕಾರಣಗಳೇನು ಎಂದು ತಿಳಿಯೋಣ… ಉಡದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಯಾಕೆಂದರೆ ಹಿಂದೂಗಳಲ್ಲಿ ಪ್ರತಿ ಪುರುಷರನೂ ಇದನ್ನು ಧರಿಸಬೇಕು. ಚಿಕ್ಕಮಕ್ಕಳಿಗೆ ಉಡದಾರ…
ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಫೆಬ್ರವರಿ, 2019) ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳಪುನಶ್ಚೇತನಕ್ಕೆ ಒಳ್ಳೆಯ…
ಥೈಲ್ಯಾಂಡ್ ಮೂಲದ ಈ ಯುವಕನ ವಿಷಯದಲ್ಲಿ ಇದೇ ನಡೆದಿದೆಯಾ..? ಎಂದರೆ… ಅದಕ್ಕೆ ಉತ್ತರ ಹೌದು ಎಂದೇ ಅನ್ನಿಸುತ್ತದೆ..! ಬೇಕಿದ್ದರೆ ಆತನ ಕಥೆಯನ್ನು ನೀವೂ ಓದಿ..!
ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್ ಲ್ಯಾಂಡ್ನ ಕೈನ್ಸ್ರ್ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಈ ಸ್ಟೋರಿನಾ ಮೊದಲ ಬಾರಿ ನೋಡಿದವರಿಗೆ ಇದು ವಿಚಿತ್ರ ಎನ್ನಿಸಬಹುದು. ಆದ್ರೆ ಈ ಜೋಡಿಯ ಕೆಲಸದ ಹಿಂದೆ ಒಂದೊಳ್ಳೆ ಸಂದೇಶವಿದೆ. ಅದೇನು ಅನ್ನೋದನ್ನ ಈ ಸ್ಟೋರಿಯಲ್ಲಿ ಓದಿ. ಮುಂಬೈನ ಖಾಂಡಿವಾಲಿ ಸ್ಟೇಷನ್ನಲ್ಲಿ ವಿದ್ಯಾವಂತರಾದ, ಒಳ್ಳೆ ಕಂಪನಿಯಲ್ಲಿ ಒಳ್ಳೆ ಸಂಬಳಕ್ಕೆ ಕೆಲಸ ಮಾಡುವ ಜೋಡಿಯೊಂದು ಫೂಟ್ಪಾತ್ನಲ್ಲಿ ತಿಂಡಿ ಮಾರುತ್ತಾರೆ. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯ ಒಳಗೆ ಫೂಟ್ಪಾತ್ನಲ್ಲಿ ತಿಂಡಿ ಮಾರಿ, ಇವರು ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಎಂಬಿಎ ಮಾಡಿರುವ ಈ ಜೋಡಿ ತಿಂಡಿ ಮಾಡೋ…