ಸಿನಿಮಾ

ಸಿನಿಮಾಗಳಲ್ಲಿ ನಮ್ಮ ಸ್ಟಾರ್‌‍ಗಳು ಹಾಕಿಕೊಳ್ಳುವ ಬಟ್ಟೆಗಳನ್ನು ಸಿನಿಮಾ ಮುಗಿದ ಬಳಿಕ ಏನು ಮಾಡುತ್ತಾರೆಂದು ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

289

ಸಿನಿಮಾಗಳಲ್ಲಿ ಸ್ಟಾರ್‌‍ಗಳು ಬಳಸುವ ಬಟ್ಟೆಗಳೆಂದರೆ ಅಭಿಮಾನಿಗಳಿಗೆ ತುಂಬಾ ಕ್ರೇಜ್ ಇರುತ್ತದೆ. ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಹಾಕಿಕೊಂಡರೆ ಇನ್ನಷ್ಟು ಕ್ರೇಜ್ ಬೆಳೆಯುತ್ತದೆ. ಸದ್ಯಕ್ಕೆ ಹೀರೋಗಳು ಸಹ ಟ್ರೆಂಡ್ ಸೆಟ್ ಮಾಡಬೇಕೆಂಬ ಉದ್ದೇಶದಿಂದ ಟ್ರೆಂಡಿ ಬಟ್ಟೆಗಳನ್ನು ಹಾಕಿಕೊಂಡು ಅವಕ್ಕೆ ಕ್ರೇಜ್ ತರುತ್ತಿರುತ್ತಾರೆ. ಆಗಿನ ಕಾಲದಲ್ಲಿ ಆರತಿ, ಭಾರತಿ, ಕಲ್ಪನಾರ ಸೀರೆ ಅವರಿಟ್ಟುಕೊಳ್ಳುವ ಕುಂಕುಮವನ್ನು ಫಾಲೋ ಆಗುತ್ತಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ ಮೀಡಿಯಂ ಹೀರೋ ಸಹ ಒಂದೊಂದು ಸಿನಿಮಾಗೆ 10 ಲಕ್ಷಕ್ಕೂ ಹೆಚ್ಚು ಬಟ್ಟೆಗಳನ್ನು ಖರ್ಚು ಮಾಡಿಸುತ್ತಿದ್ದಾನೆ.

ಹೀರೋಯಿನ್ ಸಂಗತಿಗೆ ಬಂದರೆ ಕಾಜಲ್‌ಗಾದರೆ ಒಂದು ಸಿನಿಮಾಗೆ 35 ರಿಂದ 40 ಲಕ್ಷಗಳ ವರೆಗೆ ಬಟ್ಟೆಗೇ ಖರ್ಚಾಗುತ್ತದೆ. ಇದೆಲ್ಲಾ ಸರಿ ಸಿನಿಮಾಗಾಗಿ ಇಷ್ಟೆಲ್ಲಾ ದುಡ್ಡು ಸುರಿದು ಬಟ್ಟೆಗಳನ್ನು ಕೊಳ್ಳುತ್ತಿದ್ದಾರಲ್ಲ, ಸಿನಿಮಾ ಮುಗಿದ ಮೇಲೆ ಈ ಬಟ್ಟೆಗಳನ್ನು ಏನು ಮಾಡುತ್ತಾರೆ? ಕೆಲವು ಮಂದಿ ನಿರ್ಮಾಪಕರು ಗೋಡೌನ್‌ನಲ್ಲಿ ಬಿಸಾಕುತ್ತಾರೆ. ಇನ್ನೂ ಕೆಲವು ನಿರ್ಮಾಪಕರು ಸೆಕೆಂಡ್ಸ್‌ನಲ್ಲಿ ಮಾರುತ್ತಾರೆ. ಸುಮಾರು 50 ಲಕ್ಷದ ಬಟ್ಟೆಗಳನ್ನು 5 ಲಕ್ಷಕ್ಕೆಲ್ಲಾ ಮಾರಿದ ಸಾಕಷ್ಟು ಉದಾಹರಣೆಗಳಿವೆ.

ಅದೇ ರೀತಿ ಸ್ಟಾರ್ ಹೀರೋ ಆದರೆ ಸುಮಾರು 30 ರಿಂದ 40 ಲಕ್ಷಗಳ ತನಕ ಬಟ್ಟೆಗಳಿಗೇ ಖರ್ಚಾಗುತ್ತದೆ. ಹಾಗಾಗಿ ನಿರ್ಮಾಪಕರು ಹೀರೋಗಳ ಜತೆಗೆ ಬಟ್ಟೆಗಳಿಗಾಗಿ ಪ್ಯಾಕೇಜ್ ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೈನರ್‌ಗಳಿಗೆ ಬಜೆಟ್ ತಿಳಿಸಿ ಅಷ್ಟರೊಳಗೆ ಮುಗಿಸಬೇಕೆಂದು ಹೇಳುತ್ತಿದ್ದಾರೆ. ಡಿಸೈನರ್‌‍ಗಳು ಫಾರಿನ್‌ನಿಂದ ಬ್ರಾಂಡ್ಸ್ ತರಿಸಿ ಡಿಸೈನ್ ಮಾಡುತ್ತಿದ್ದಾರೆ.

ಕೆಲವು ಸಿನಿಮಾ ಕಾಸ್ಟ್ಯೂಮ್ಸ್‌ನವರು ಕೊಂಡು ಬ್ಯಾಕ್ ಗ್ರೌಂಡ್ ಕಲಾವಿದರಿಗೆ ಬಾಡಿಗೆಗೆ ನೀಡುತ್ತಿರುತ್ತಾರೆ. ಇನ್ನು ದೊಡ್ದ ದೊಡ್ದ ಜಾಕೆಟ್, ಶೂಸ್‍ನಂತಹವನ್ನು ಮುಂಬೈನಲ್ಲಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುತ್ತಿರುತ್ತಾರೆ. ಹೀರೋಯಿನ್ ಸೀರೆಗಳಾದರೂ ಅಷ್ಟೇ.

ಒಂದು ವೇಳೆ ಯಾವುದಾದರೂ ಡ್ರೆಸ್ ಇಷ್ಟವಾದರೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀರೋಯಿನ್ ಸೀರೆ, ಒಡವೆ, ಚಪ್ಪಲಿ ಎಲ್ಲವನ್ನೂ ಸೆಕೆಂಡ್ಸ್‌ನಲ್ಲಿ ಮಾರುತ್ತಾರೆ.ಒಂದು ವೇಳೆ ದೊಡ್ಡ ನಿರ್ಮಾಪಕನಾಗಿದ್ದು ಸದಾ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೆ ಗೋಡೌನ್‌ನಲ್ಲಿ ಇಟ್ಟುಕೊಂಡು ಅದನ್ನು ಪೋಷಕ ಕಲಾವಿದರಿಗೆ ಉಪಯೋಗಿಸುತ್ತಿತ್ತಾನೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು

    ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಸರಕಾರದಿಂದ ಸಂದೇಶ ಬರಲಿದೆ ಹಾಗೂ ಈ ಲಿಂಕ್ ಮುಖಾಂತರ ತಿಳಿದುಕೊಳ್ಳಬಹುದು 8147500500  ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು ಈ ಲಿಂಕ್ ತೆರೆದು ರೇಷನ್ ಕಾರ್ಡ್ ನಂಬರ್ ಹಾಕಿದರೆ ದಿನಾಂಕ ಸ್ಥಳ ಮತ್ತು ಸಮಯವನ್ನು ತಿಳಿಯ ಬಹುದು ಅಥವಾ 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ…

  • ಸಿನಿಮಾ

    ಕೊನೆಗೂ ತಮ್ಮ ಮಗಳ ಫೋಟೋವನ್ನು ಬಹಿರಂಗ ಮಾಡಿದ ಯಶ್ ರಾಧಿಕಾ ಪಂಡಿತ್ ದಪತಿ..ಯಾವ ಹೆಸರು ಇಟ್ಟಿದ್ದಾರೆ ನೋಡಿ…

    ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…

  • ಸುದ್ದಿ

    ಈ ಯುವಕ ಪ್ರತಿದಿನ ಒಂದು ಬೀಯರ್ ಒಂದು ವರ್ಷ ಕುಡಿದನು ನಂತರ ಏನಾಗಿದೆ ನೀವೆ ನೋಡಿ.

    ಈ ಯುವಕ ಪ್ರತಿದಿನ ಒಂದು ಬೀಯರ್ ಒಂದು ವರ್ಷ ಕುಡಿದನು ನಂತರ ಏನಾಗಿದೆ ನೀವೆ ನೋಡಿ.ಯಾರಾದರೂ ನಮಗೆ ಬಿಯರ್ ಒಳ್ಳೆಯದು ಎಂದರೆ ಆಶ್ಚರ್ಯವಾಗುತ್ತದೆ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರ ಅಪರಾಧ ಎನ್ನುವುದು ಗೊತ್ತೇ ಇದೆ ಇನ್ನೂ ದಿನವಿಡೀ ಕೆಲಸ ಮಾಡಿ ಸಂಜೆ ಹೊತ್ತಿಗೆ ಬಿಯರ್ ಕುಡಿಯುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ ಯಾವುದೇ ಅಲ್ಕೋಲ್ ಆದರೂ ಸರಿ ಹೆಚ್ಚಾಗಿ ಕುಡಿದರೆ ಆರೋಗ್ಯಕ್ಕೆ ಹಾಗೂ ಕಿಡ್ನಿ ಪ್ರಾಬ್ಲಮ್ ಆಗುತ್ತದೆ ಬಿಯರ್ ಅನ್ನು ಆಗಾಗ ಕುಡಿದರೆ ಒಳ್ಳೆಯದು ಎಂದು ಹೇಳುತ್ತಾರೆ ಒಬ್ಬ ಯುವಕ ತುಂಬಾ…

  • ರಾಜಕೀಯ

    ಚಾಮುಂಡೇಶ್ವರಿ ಕ್ಷೇತ್ರದ ವಿಧಾಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಲು ಇದೇ ಕಾರಣ ಎಂದ ದೇವೇಗೌಡರು..?

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಾಭವಗೊಂಡಿದ್ದರು. ಇದಕ್ಕೆ ಜೆಡಿಎಸ್ ನಾಯಕರೇ ಕಾರಣವೆಂಬುದನ್ನು ಹಲವು ಸಂದರ್ಭಗಳಲ್ಲಿ ಸಿದ್ದರಾಮಯ್ಯ ಪರೋಕ್ಷವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಚಾಮುಂಡೇಶ್ವರಿಯಲ್ಲಿನ ಸಿದ್ದರಾಮಯ್ಯನವರ ಸೋಲಿನ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮಾತನಾಡಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯನವರ ಸೋಲಿಗೆ ಜಿ.ಟಿ. ದೇವೇಗೌಡ ಕಾರಣರಲ್ಲ. ಅಲ್ಲದೇ ತಾವೂ ಅಲ್ಲಿಗೆ ಪ್ರಚಾರಕ್ಕೆ ತೆರಳಿರಲಿಲ್ಲ ಎಂದಿದ್ದಾರೆ. ಜನತೆಯ ವಿರೋಧದ ಕಾರಣಕ್ಕೆ ಸಿದ್ದರಾಮಯ್ಯ ಸೋಲಬೇಕಾಯಿತು ಎಂದು ದೇವೇಗೌಡ ವಿಶ್ಲೇಷಿಸಿದ್ದಾರೆ….

  • ಸುದ್ದಿ

    ರಾತ್ರಿಸಮಯ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

    ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ. ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ ‘ಸ್ಯಾನ್ ಡೈಗೊ ಸ್ಟೇಟ್’ ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ…