ಆಧ್ಯಾತ್ಮ, ದೇವರು-ಧರ್ಮ

ಸರ್ಪಗಳಿಗೆ ಅವರ ತಾಯಿಯೇ ಕೊಟ್ಟ ಶಾಪ ಏನು ಗೊತ್ತಾ?ಸರ್ಪ ಮತ್ತು ಗರುಡಗಳು ಹುಟ್ಟಿದ್ದು ಹೇಗೆ ಗೊತ್ತಾ? ಈ ಲೇಖನ ಓದಿ ಶೇರ್ ಮಾಡಿ…

8581

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸರ್ಪಗಳ ತಾಯಿ ಯಾರೂ? ಅವಳು ತನ್ನ ಮಕ್ಕಳಿಗೆ ಶಾಪ ಕೊಡಲು ಕಾರಣವೇನು ? ಇವೆಲ್ಲದರ ಬಗ್ಗೆ ತಿಳಿಯುವ ಕುತೂಹಲ ಇದೆಯಲ್ಲವೇ! ಹಾಗಾದ್ರೆ ಮುಂದೆ ಓದಿ….

ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ  ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು. ವಿನತೆಗೆ ಅರುಣ ಮತ್ತು ಗರುಡ ಎಂಬ ಮಕ್ಕಳಾದವು. ಅರುಣನು ಸೂರ್ಯನ ಸಾರಥಿಯದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು. ವಿನತೆಯ ಮಗನಾದ್ದರಿಂದ ಗರುಡನಿಗೆ ವೈನತೆಯ ಎಂದೂ ಹೆಸರಿದೆ.

ಹೀಗಿರುವಾಗ ದೇವತೆಗಳು ರಾಕ್ಷಸರು ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆದರು . ಆಗ ಕ್ಷೀರಸಾಗರದಿಂದ ಉದ್ಬವವಾದ ಅನೇಕ ವಸ್ತುಗಳಲ್ಲಿ ಉಚ್ಚೈಶ್ರವನ್ನು ಎಂಬ ಕುದುರೆಯೂ ಒಂದು. ಆ ಕುದುರೆಯೂ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡುವ ಸಲುವಾಗಿ ಮೂರು ಲೋಕದಿಂದಲೂ ಜೀವಿಗಳು ಬರುತ್ತಿದ್ದರು.

ಕದ್ರು ಮತ್ತು ವಿನಯತೆಯರಿಗೂ ಆ ಕುದರೆಯನ್ನು ಕಾಣುವ ತವಕ ಉಂಟಾಯಿತು. ಆ ಕುದುರೆ ಹೇಗಿದೆಯೂ ಎಂದು ಅವರಿಬ್ಬರೇ ಚರ್ಚಿಸಿದರು. ವಿನತೆಯು ‘’ಕುದುರೆ ಪೂರ್ತಿ ಬೆಳ್ಳಗಿದೆಯಂತೆ. ಒಂದೇ ಒಂದು ಕಪ್ಪು ಚುಕ್ಕೆಯು ಇಲ್ಲವಂತೆ’’ – ಎಂದಳು. ಕದ್ರುವು, ‘’ ಅದು ಹೇಗೆ ಸಾಧ್ಯ ? ಇನ್ನೇನು ಇಲ್ಲದಿದ್ದರೂ ಅದರ ಬಾಲವಾದರು ಕಪ್ಪಗಿರಬೇಕಲ್ಲವೇ ?’’ – ಎಂದಳು. ವಿನತೆ ‘’ಇಲ್ಲ ಬಾಲವೂ ಬೆಳ್ಳಗಿದೆಯಂತೆ’’ ಎಂದಳು. ಕದ್ರು ‘’ಸಾಧ್ಯವೇ ಇಲ್ಲ, ಬೇಕಾದರೆ ಪಂದ್ಯ ಕಟ್ಟೋಣ’’ – ಎಂದಳು. ‘’ಏನು ಪಂದ್ಯ ?’’ – ಎಂದಾಗ ‘’ಕುದುರೆಯೂ ಪೂರ್ತಿ ಬೆಳ್ಳಗಿದ್ದರೆ, ಜೀವನಪೂರ್ತಿಯಾಗಿ ನಾನು ನಿನ್ನ ಸೇವಕಿಯಗಿರುತ್ತೇನೆ. ಕುದುರೆಯೂ ಬಾಲ ಕಪ್ಪಾಗಿದ್ದರೆ ನೀನು ನನ್ನ ಸೇವಕಿಯಗಿರಬೇಕು ‘’ ಎಂದಳು. ವಿನತೆ ಇದಕ್ಕೆ ಒಪ್ಪಿದಳು. ಇಬ್ಬರೂ ಕುದುರೆಯನ್ನು ನೋಡಿ ಬರುವುದೆಂದು ನಿಶ್ಚಯಿಸಿದರು.

ವಿನೋದವಾಗಿ ಶುರುವಾದ ಮಾತು ತುಂಬ ದೊಡ್ಡದಾಗಿ ಹೋಯಿತು ಕದ್ರುವಿಗೂ ಕುದುರೆಯೂ ಬಾಲ ಕಪ್ಪಾಗಿದೆ ಎಂದು ನಂಬಿಕೆಯಿಲ್ಲ. ಎಲ್ಲರೂ ಕುದುರೆಯೂ  ಪೂರ್ಣ ಬೆಳ್ಳಗಿದೆ ಎನ್ನುತ್ತಿದ್ದಾರೆ. ಆದರೆ ಯಾವುದೋ ಭಂಡ ಧೈರ್ಯದಿಂದ ಪಂದ್ಯ ಕಟ್ಟಿದ್ದಳು ಈಗ ಹೇಗಾದರೂ ಮಾಡಿ ಫಂದ್ಯದಲ್ಲಿ ಬೇಕೆಂದು ಯೋಚಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆದಳು ಶೇಷ, ವಾಸುಕಿ, ತಕ್ಷಕ, ಕಾರ್ಕೋಟಕ ಮೊದಲಾದ ಸರ್ಪಗಳು ತಾಯಿಯ ಬಳಿಗೆ ಬಂದವು. ಕದ್ರುವು ತನಗೂ ವಿನತೆಗೂ ನಡೆದ ಮಾತುಕತೆಗಳನ್ನು ವಿವರಿಸಿದಳು ‘’ನೀವೆಲ್ಲರೂ ಹೋಗಿ ಆ ಕುದುರೆಯ ಬಾಲವನ್ನು ನಿಮ್ಮ ಶರೀರದಿಂದ ಮುಚ್ಚಿಬಿಡಿ. ಅದು ಕಪ್ಪಾಗಿ ಕಾಣುತ್ತದೆ. ನಾನು ಪಂದ್ಯದಲ್ಲಿ ಗೆದ್ದಂತಾಗುತ್ತದೆ’’ – ಎಂದಳು.

ಸರ್ಪಗಳು ‘’ಅಮ್ಮಾ ! ನಾವು ಈ ರೀತಿ ಮೋಸ ಮಾಡುವುದು ತಪ್ಪಲ್ಲವೇ ?’’ ಎಂದೂ ಕೇಳಿದವು. ಕದ್ರುವು ಕೂಪಗೊಂಡವು ‘’ನನ್ನ ಮಾತಿಗೆ ಎದುರುತ್ತರ ನೀಡುವಿರಾ ? ನನ್ನ ಮಾತಿಗೆ ಎದುರುತ್ತದೆ ನೀಡುವಿರಾ ? ನನ್ನ ಮಾತು ಮೀರಿದರೂ ಅಗ್ನಿಕುಂಡದಲ್ಲಿ ಬಿದ್ದು ಸಾಯುವಂತಾಗಲಿ’’ – ಎಂದು ಶಾಪ ಕೊಟ್ಟಳು. ಸರ್ಪಗಳು ದುಃಖ – ಭಯಗಳಿಂದ ತಾಯಿಯು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವನ್ನು ಹಿಡಿದುಕೊಂಡವು. ಅನಂತರ ಕದ್ರು ಮತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯ ಬಾಲವೂ ಮಾತ್ರ ಕಪ್ಪಾಗಿತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯೂ ಬಾಲವೂ ಮಾತ್ರ ಕಪ್ಪಾಗಿತ್ತು. ವಿನತೆಯು ತನ್ನ ಸೋಲನೋಪ್ಪಿಕೊಂಡು ಕದ್ರುವಿನ  ಸೇವಕಿಯಾದಳು. ಇಲ್ಲಿ ಓದಿ:-ಆ ದಿನ ಈ ಯಾಗವೇನಾದರೂ ನಡೆದಿದ್ದರೆ, ಸರ್ಪಗಳ ವಂಶವೇ ಇರುತ್ತಿರಲಿಲ್ಲ..!

ಹೀಗೆ ವಿನತೆಯು ಕದ್ರುವಿನ  ಸೇವಕಿಯದ್ದರಿಂದ ವಿನತೆಯು ಮಗನಾದ ಗರುಡನು ಸಹ ಕದ್ರು ಮತ್ತು ಅವಳ ಮಕ್ಕಳು ಹೇಳಿದಂತೆ ಮದುತ್ತಿರಬೇಕಾಯಿತು. ಸರ್ಪಗಳ ಗರುಡನನ್ನು ತಮ್ಮ ಸೇವಕನಂತೆ ಹಿನಾಯವಾಗಿ ನಡೆಸಿಕೊಳ್ಳಲಾರಂಬಿಸಿದವು. ಇದರಿಂದ ಗರುಡನ ಮನಸ್ಸಿಗೆ ಬಹಳ ದುಃಖವಾಯಿತು. ಹೇಗಾದರೂ ಮಾಡಿ ತನ್ನ ಮತ್ತು ತನ್ನ ತಾಯಿಯ ದಾಸ್ಯವನ್ನು   ಹೋಗಲಾಡಿಸಬೇಕು ಎಂದು ಅವನು ಯೋಚಿಸಿದನು.

ಗರುಡನು ಸರ್ಪಗಳ ಬಳಿಗೆ ಹೋಗಿ ‘’ಅಯ್ಯಾ ! ನಾನು ನಿಮಗೆ ಏನ್ ಏನು ಕೆಲಸವನ್ನು ಮಾಡಿಕೊಟ್ಟರೆ ನಮ್ಮ ತಾಯಿಯ ದಾಸ್ಯವು ಹೋಗುತ್ತದೆ ತಿಳಿಸಿ’’  ಎಂದು ಕೇಳಿದನು. ಅದಕ್ಕೆ ಸರ್ಪಗಳ ತಮ್ಮ ತಾಯಿಯಿಂದ ತಮಗೆ ಬಂದ ಶಾಪವನ್ನು ನೆನೆಪಿಸಿಕೊಂಡು ‘’ ದೇವಲೋಕದಿಂದ ಅಮೃತವನ್ನು ತಂದದುಕೊಟ್ಟರೆ ನಿಮ್ಮ ಭಂಧವಿಮೊಚನೆಯಾಗುವುದು’’ – ಎಂದು ತಿಳಿಸಿದವು.

ಕೂಡಲೇ  ಗರುಡನು ಆಕಾಶಕ್ಕೆ ಚಿಮ್ಮ್ಕಿದನು. ತನ್ನ ವಿಶಾಲವಾದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ವಯುವೆಗದಿಂದ ದೇವಲೋಕದ ಕಡೆ ಹಾರಿದನು. ಅವನು ಹಾರಿದ ರಭಸಕ್ಕೆ ದೊಡ್ಡ ದೊಡ್ಡ ವೃಕ್ಷಗಳು ಬಿದ್ದುಹೊದವು. ಪರ್ವತಗಳು ಅಲ್ಲಾಡಿ ಹೋದವು. ಅಂತಹ ವೇಗದಿಂದ ಗರುಡನು ದೇವಲೋಕಕ್ಕೆ ಬಂದನು.

ಗರುಡನು ಅಮೃತವನ್ನು ಕೊಂಡೊಯ್ಯಲು ಬರುತ್ತಿರುವನೆಂದು ತಿಳಿದ ದೇವೆಂದ್ರನು ಸೈನ್ಯವು  ಗರುಡನ ಮೇಲೆ ಎರಗಿತು. ಆದರೆ ಗರುಡನು ಒಂದೇ ಕ್ಷಣದಲ್ಲಿ ಆ ಸೈನ್ಯದ ಧಾಳಿಯನ್ನು ನಿವರಿಸಿಕೊಂಡನು. ದೇವಲೋಕದ ಅಮೃತದ ಕುಂಭವನ್ನು ತೆಗೆದುಕೊಂಡು ಹೋಗಿ ಸರ್ಪಗಳ ಮುಂದಿಟ್ಟನು. ಹೀಗೆ ಸರ್ಪಗಳ ಕೋರಿಕೆಯನ್ನು ಈಡೇರಿಸಿ ಅವನು ತನ್ನ ತಾಯಿ ವಿನತೆಯ ದಾಸ್ಯವನ್ನು ಹೋಗಲಾಡಿಸಿದನು.

ಅಮೃತಕುಂಭವನ್ನು ತರುವ ಸಮಯದಲ್ಲಿ ಗರುಡನು ಪ್ರದರ್ಶಿಸಿದ ವಾಯುವೆಗವನ್ನು ಕಂಡು ಮಹಾವಿಷ್ಣುವಿಗೆ ಬಹಳ ಆನಂದವಾಯಿತು. ಅವನು ಗರುಡನನ್ನು ಕುರಿತು ‘’ಅಯ್ಯಾ ! ನೀನು ನನ್ನ ವಾಹನವಾಗಿರು’’ ಎಂದು ಕೇಳಿಕೊಂಡನು. ಗರುಡನು ಅದಕ್ಕೆ ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಗರುಡನು ವಿಷ್ಣುವಾಹನನಾದನು.

ಸರ್ಪಗಳೆನೋ ಕದ್ರುವು ಹೇಳಿದಂತೆ ಕುದುರೆಯ ಬಾಲವನ್ನು ಹಿಡಿದು ಪಂದ್ಯದಲ್ಲಿ ಅವಳನ್ನು ಗೆಲ್ಲಿಸಿದುವು. ಆದರೆ ಅವಳು ಆ ಮುಂಚೆ ಅವರಿಗೆ ಕೊಟ್ಟಿದ್ದ ಶಾಪ ಮಾತ್ರ ಹಾಗೆಯೇ ಇತ್ತಲ್ಲ. ಆ ಶಪದಿಂದಾಗುವ ದುಷ್ಪರಿಣಾಮವನ್ನು ತಪ್ಪಿಸಿಕೊಳ್ಳುವುದು ಹೇಗೆಂದು ಅವರೆಲ್ಲ ಯೋಚಿಸಿದರು. ಗರುಡನೇನೋ ಅವರಿಗೆ ಅಮೃತವನ್ನು ತಂದುಕೊಟ್ಟಿದ್ದನು. ಆದರೆ ಇಂದ್ರನು ಅಪಹರಿಸಿಕೊಂಡು ಹೋದುದರಿಂದ ಅವರಿಗೆ ಅದು ದಕ್ಕಿರಲಿಲ್ಲ.

ಆಗ ಏಳಪತ್ರನೆಂಬ ಸರ್ಪವು ‘’ನಾವು ಈಗಲೇ ಸೂಕ್ತವಾದ ಸಂಬಂಧವನ್ನು ಹುಡುಕಿ, ನಮ್ಮ ತಂಗಿ ಜರತ್ಕ್ರಾರುವಿನ ಮದುವೆಯನ್ನು ಮಾಡಿಬಿಡೊಣ. ಅವಳ ಹೊಟ್ಟೆಯಲ್ಲಿ ಹುಟ್ಟುವ ಮಗನು ಬೇರೆ ವಂಶಕ್ಕೆ ಸೇರುವುದರಿಂದ, ಅವನಿಗೆ ನಮ್ಮ ತಾಯಿಯ ಶಾಪದ ಭೀತಿ ಇರುವುದಿಲ್ಲ. ಅವನು ಯಾವುದಾದರೂ ಯೋಜನೆಯಿಂದ ನಮಗೊದಗಿರುವ ದುರವಸ್ತೆಯನ್ನು ತಪ್ಪಿಸಲು ಯತ್ನಿಸಬಹುದು’’- ಎಂದನು ಸರ್ಪಗಳ ಜರತ್ಕಾರವನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಮುಂದೆ ಜರತ್ಕಾರು ಅಸ್ತೀಕ ಎಂಬ ಮಗನಿಗೆ ಜನ್ಮ ಕೊಟ್ಟಳು. ಆಸ್ತಿಕನು ಸಕಲ ವಿದ್ಯಾಪಾರಂಗತನಾಗಿ ಬೆಳೆದನು’’

ಉಗ್ರಶ್ರವ ಸೌತಿಗಳು ಇಷ್ಟು ಕಥೆಯನ್ನು ಹೇಳಿ ಮತ್ತೆ ಜನಮೇಜಯ  ಸರ್ಪಯಾಗದ ಬಗ್ಗೆ ಹೇಳಲಾರಂಭಿಸಿದರು.

About the author / 

Editors Pick

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ, ಸ್ಪೂರ್ತಿ

    3 ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನ ಸಮಾಧಿ ಮಾಡಿದ, ಕಾರಣ ಮಾತ್ರ ಶಾಕಿಂಗ್.

    ಭೂಮಿಯ ಮೇಲೆ ಇರುವ ಅತ್ಯಮೂಲ್ಯ ಜೀವ ಅಂದರೆ ಅದೂ ಮಾನವ, ಇನ್ನು ಮನುಷ್ಯ ಸತ್ತು ಹೋದಾಗ ಆತನನ್ನ ಮಣ್ಣಿನಲ್ಲಿ ಸಮಾಧಿ ಮಾಡುತ್ತಾರೆ ಅಥವಾ ಆತನನ್ನ ಸುಟ್ಟು ಹಾಕುತ್ತಾರೆ. ಸ್ನೇಹಿತರೆ ಇಲ್ಲೊಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ತನ್ನ ಮೂರೂ ಕೋಟಿ ಬೆಲೆ ಬಾಳುವ ಐಷಾರಾಮಿ ಕರಣ ಮಣ್ಣಿನಲ್ಲೂ ಹೂತು ಮುಂದಾಗಿದ್ದಾನೆ, ಹಾಗಾದರೆ ಆ ಕಾರನ್ನ ಹೂತು ಹಾಕಲು ನಿರ್ಧರಿಸಲು ಕಾರಣ ಏನು ಮತ್ತು ಅದನ್ನ ನೋಡಿದ ಅಲ್ಲಿನ ಜನರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…

  • ಉಪಯುಕ್ತ ಮಾಹಿತಿ

    ರಾವಣ ಸಾಯೋಕೆ ಮುಂಚೆ ಲಕ್ಶ್ಮಣನಿಗೆ ಕಲಿಯುಗದ ಬಗ್ಗೆ ಹೇಳಿದ ಘೋರ ಸತ್ಯ. ಏನದು ಗೊತ್ತಾ?

    ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನಿಂದ ಅಮೂಲ್ಯವಾದ ಪಾಠಗಳನ್ನು ಕಲಿತು ಕೊಂಡು ಬಾ ಎಂದು ಹೇಳಿದ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ರಾವಣ ಸಾಯುವ ಮುನ್ನ ಲಕ್ಷ್ಮಣನಿಗೆ  ರಾವಣ ಯೋಧ ಮಾತ್ರವಲ್ಲ, ಸರ್ವೋಚ್ಚ ವಿದ್ವಾಂಸನು ಆಗಿದ್ದ ಬ್ರಾಹ್ಮಣ ಕುಲದಲ್ಲಿ ಜನಿಸಿದ…

  • ಸುದ್ದಿ

    ಮಣ್ಣು ಮಾಡಲು ತೆರಳುವಾಗ ಕಣ್ಣು ಬಿಟ್ಟು ಅತ್ತ ಕಂದಮ್ಮ,.ನಂತರ ಏನಾಯ್ತು..?

    ಆಲ್ದೂರು ಸಮೀಪದ ಹಳಿಯೂರು ಕಾಲೊನಿ ವಾಸಿ ಲೋಕೇಶ್‌, ಸರಿತಾ ಅವರ 3 ತಿಂಗಳ ಮಗು ಆರವ್‌ನನ್ನು ಜಾಂಡೀಸ್‌ ಕಾಯಿಲೆ ಕಾರಣ ಹಾಸನದ ಮಣಿ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಮಣಿ ಆಸ್ಪತ್ರೆಯವರು ಮಗುವಿನ ಪೋಷಕರಿಂದ ಹಣ ಕಟ್ಟಿಸಿಕೊಂಡು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ ಹಸ್ತಾಂತರಿಸಿಬಿಟ್ಟರು. ಮಗುವಿನ ಅಂತ್ಯಕ್ರಿಯೆ ನಡೆಸಲು ತಾಯಿ ಸರಿತಾ ಅವರ ತವರು ಮನೆ ಮೂಡಿಗೆರೆ ಸಮೀಪದ ಭಾರತಿ ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು…

  • ಜ್ಯೋತಿಷ್ಯ

    ವಾಯುಪುತ್ರ ಹನುಮಂತನನ್ನ ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಮಾರ್ಚ್, 2019) ಬಾಕಿಯಿರುವ ಮನೆಯ ಕೆಲಸ ಮುಗಿಸಲು ನಿಮ್ಮ ಸಂಗಾತಿಯ ಜೊತೆ ಏರ್ಪಾಡುಗಳನ್ನು ಮಾಡಿ. ನಾಳೆ…

  • Cinema

    ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಬರುತ್ತಿರುತ್ತಾರೆ ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ. ಕೆಲ ದಿನಗಳ ಹಿಂದೆ ಸ್ವತಃ ರಜನಿ ಅವರೇ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರು.

  • ಸುದ್ದಿ

    ‘2020ರ ಮಾರ್ಚ್ ಒಳಗೆ ಏರ್ ಇಂಡಿಯಾ ಹಾಗು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮಾರಾಟಕ್ಕೆಂದು ಕೇಂದ್ರ ಸರಕಾರದ ನಿರ್ಧಾರ..!

    ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟ ಪ್ರಕ್ರಿಯೆ 2020ರ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾಗಿ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಮಾತನಾಡಿ, ಸರ್ಕಾರದಿಂದ ನಡೆದ ಅಂತರರಾಷ್ಟ್ರೀಯ ರೋಡ್ ಷೋಗಳಲ್ಲಿ ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರು ‘ಸಾಕಷ್ಟು ಆಸಕ್ತಿ’ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಮಾರಾಟಕ್ಕೆ ಮುಂದಾದಾಗ ಹೂಡಿಕೆದಾರರಿಂದ ಸಕಾರಾತ್ಮಕವಾದ ಸ್ಪಂದನೆ ಬಂದಿರಲಿಲ್ಲ….