ಆರೋಗ್ಯ, ಉಪಯುಕ್ತ ಮಾಹಿತಿ

ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2968

ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ.  ನೀವು ಇಡೀ ದಿನ ಸಂತೋಷವಾಗಿರುತ್ತೀರಿ.

ಕೆಟ್ಟದಾಗಿ ದಿನ ಶುರುವಾದ್ರೆ ದಿನವಿಡೀ ಏನೋ ಸರಿ ಇಲ್ವಲ್ಲ ಅನ್ನೋಹಾಗೆ ಮಾಡುತ್ತೆ. ರಾತ್ರಿ ನಿದ್ದೆ ಸರಿಯಾಗ್ ಆದ್ರೆ ಬೆಳಿಗ್ಗೆ ಹರ್ಷವಾಗಿರ್ತೀವಿ. ನಿದ್ರೆ ತುಂಬ ಅಗತ್ಯ ನಮ್ಗೆ. ವಿಶ್ರಾಂತಿ ನಂತರ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ದಿನವೆಲ್ಲಾ ಹುಮ್ಮಸ್ಸಿಂದ ಇರ್ತೀವಿ. ಹುರುಪಿಂದ ಕೆಲಸ ಮಾಡ್ತೀವಿ. ಆದ್ರಿಂದ ಈ ಅಭ್ಯಾಸಗಳ್ನ ಶುರು ಹಚ್ಕೊಳಿ.

ಬೆಳಿಗ್ಗೆ ಎದ್ದ ತಕ್ಷಣ  ಮೊಬೈಲ್ ನೋಡೊದ್ನ ಬಿಟ್ಬಿಡಿ :-

ಮೊಬೈಲ್ನ ಮಲ್ಗೊವಾಗ ಪಕ್ಕದಲ್ಲೇ ಇಟ್ಕೊಂಡ್ರೆ ಬೆಳಿಗ್ಗೆ ಎದ್ದಾಗ ಬೇಡ ಅಂದ್ರೂ ನೋಡ್ಬೇಕು ಅನ್ಸತ್ತೆ ಅಲ್ವಾ. ಅದ್ಕೆ ಒಂದ್ ಸಣ್ಣ ಪುಸ್ತಕನೋ ಸಣ್ಣ ಚೀಟಿಯನ್ನೋ ಇಟ್ಕೊಳಿ. ಅದ್ರಲ್ಲಿ ನಿಮ್ ಗುರಿ, ನಾಳೆ ಮಾಡ್ಬೇಕಾದ ಕೆಲ್ಸಗಳ್ನ ಬರ್ದಿಟ್ಕೊಳಿ. ಇದನ್ನ ಎದ್ದ ತಕ್ಷಣ ನೋಡಿ.

ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲ್ಸ ಇದೆ ಆದ್ರೆ ಎನ್ ಮಾಡ್ಬೇಕು ಅಂತಾನೇ ಗೊತ್ತಾಗ್ತ ಇಲ್ಲ ಅನ್ನೋ ಗೊಂದಲಕ್ಕೆ ಬೀಳ್ದೇ ನೀವ್ ಮಾಡ್ಕೊಂಡಿರೋ ನೋಟ್ಸಗಳ್ನ ನೋಡಿ, ದಿನ ಹೇಗಿರ್ಬೇಕು ಅಂತ ಪ್ಲಾನ್ ಮಾಡ್ಕೊಂಡು ದಿನ ಆರಂಭಿಸಿ.

ಎದ್ದ ತಕ್ಷಣ  ಐದ್ ಹತ್ತು ನಿಮಿಷ ಧ್ಯಾನ ಮಾಡಿ :-

ಧ್ಯಾನ ಮಾಡೊದ್ರಿಂದ ನಮ್ ಮನಸ್ಸಿಗೆ ಖುಷಿ ಸಿಗತ್ತೆ. ರೀಸರ್ಚ್ ಪ್ರಕಾರ ಧ್ಯಾನ ಮಾಡೊದ್ರಿಂದ ಪಾಸಿಟಿವ್ ಆಗಿರ್ತೀವಿ, ನಮ್ಮಲ್ಲಿರೋ ಕ್ರಿಯೀಟಿವಿಟಿ ಹೊರಬರತ್ತೆ.

ಧ್ಯಾನ ಅಂದ ತಕ್ಷಣ ಅರ್ಧ ಗಂಟೆನೋ ಒಂದ್ ಗಂಟೆನೋ ಕಷ್ಟ ಪಟ್ಟು ಕೂತ್ಕೊಬೇಕಿಲ್ಲ. 5-10 ನಿಮಿಷ ಉಸಿರಾಟ ಗಮನಿಸಿ, ಮನ್ಸನ್ನ ಕೇಂದ್ರಿಕರಿಸಿ, ಸ್ವಲ್ಪ ಹೊತ್ತು ಕೂತಿರಿ ಸಾಕು. ನಿಧಾನವಾಗಿ ಅದು 5-10 ನಿಮಿಷದಿಂದ 15-30 ನಿಮಿಷ ಆಗುತ್ತೆ, ಒಂದ್ ಗಂಟೆನೂ ಆಗ್ಬೋದು.

ನಿಮ್ಮ ಇಡೀ  ದಿನ ಹೇಗಿರ್ಬೇಕು ಅಂತ ಮನ್ಸಲ್ಲೇ ಕಲ್ಪನೆ ಮಾಡ್ಕೊಳಿ :-

ಇದೊಂತರ ಧ್ಯಾನದ ತರಾನೇ. ತುಂಬಾನೇ ಪರಿಣಾಮಕಾರಿಯಾದ ವಿಧಾನ. ಆಗೋದಕ್ಕಿಂತ ಮುಂಚೆನೇ ಹೀಗೆ ಆಗ್ಬೇಕು ಇಲ್ಲ ಹೀಗೆ ಆಗ್ಬಿಟ್ರೆ ಅದಕ್ಕೆ ಹೇಗೆ ತಯಾರಿರ್ಬೇಕು ಅನ್ನೋದನ್ನ ಕಲ್ಪನೆ ಮಾಡ್ಕೊಳ್ಳೊದು. ನನ್ನ ದಿನ ಪೂರ್ತಿ ಈ ತರಾನೇ ಇರ್ಬೇಕು ಅನ್ನೋ ಕಲ್ಪನೆ ಮಾಡ್ಕೊಂಡ್ರೆ ಅದೇ ತರ ಇರೋ ಹಾಗೆ ನೀವ್ ಪ್ರಯತ್ನಿಸ್ತೀರ.

ಉದಾಹರ್ಣೆಗೆ ಮಾಡ್ಬೇಕಾಗಿರೋ ಕೆಲ್ಸಾನ ಕಲ್ಪಿಸಿಕೊಳ್ಳಿ, ಹೇಗೆ ನಿರ್ವಹಿಸ್ತೀರ ಅಂತ ಮುಂಚೆನೇ ನಿರ್ಧರಿಸಿ. ಇದು ನಿಮಗೆ ಕೆಲಸದ ಬಗ್ಗೆ ಜವಾಬ್ದಾರಿ ಮೂಡ್ಸತ್ತೆ. ತೊಂದ್ರೆ ಇಲ್ದೇ ಕೆಲ್ಸ ಮಾಡಿ ಮುಗಿಸೋಹಾಗಾಗತ್ತೆ.

ಇಷ್ಟೇ ಸಾಕು ದಿನ ಪೂರ್ತಿ ಪಾಸಿಟಿವ್ ಆಗಿರಕ್ಕೆ. ಇದೇನು ಕಷ್ಟದ ಕೆಲ್ಸ ಅಲ್ಲ, ತುಂಬಾನೇ ಪ್ರಯೋಜವಕಾರಿ ವಿಧಾನ.

ಏನಾದ್ರೂ ಬಿಸಿ ಬಿಸಿಯಾಗಿರೋದ್ನ ಕುಡಿಯೋ ಅಭ್ಯಾಸ ಇಟ್ಕೊಳಿ :-

ಈ ಹವ್ಯಾಸ ನಿಮ್ ಮನ್ಸಿಗೂ ನಿಮ್ ದೇಹಕ್ಕೂ ಶಕ್ತಿ ಕೊಡೊವಂತದ್ದು. ಬಿಸಿ ಬಿಸಿಯಾದದ್ದು ಕುಡೀರಿ ಅಂದಾಕ್ಷಣ ಕಾಫಿ ಟೀ ಓಕೆ ನಾ ಅಂತೀರಿ ಅಲ್ವಾ? ಯಾವ್ದಾದ್ರೂ ಆಯ್ತು ಪರವಾಗಿಲ್ಲ ಬಿಸಿ ಬಿಸಿ ಇದ್ರೆ ಸಾಕು.  ಪ್ರತಿ ಗುಟುಕು ಕುಡಿಯೋವಾಗ ಅದ್ನ ಆನಂದಿಸಿ. ಬಿಸಿ ಬಿಸಿಯಾಗಿರೋದ್ರಿಂದ ಅದು ಹೊಟ್ಟೆಗೆ ಹೋಗೋದನ್ನ ಗಮನಿಸ್ಬೋದು, ಈ ಅನುಭವನ ಆಸ್ವಾದಿಸಿ.

ಹಾಸಿಗೆ ಇಂದ ಎಳೋವಾಗ ಬಲಗಡೆ ಮೊಗ್ಗಲಲ್ಲಿ ಎದ್ದು ನೆಟ್ಟಗಿ ನಿಲ್ಲಿ :-

ಬೆಳಗ್ಗೆ ಹಾಸಿಗೆ ಬಿಟ್ಟು ಬರಕ್ಕೆ ಯಾರ್ಗೂ ಮನಸ್ಸಿರಲ್ಲ. ತುಂಬ ಬೇಜಾರ್ ಮಾಡ್ಕೊಂಡು ಯಾರ್ದೋ ಕಷ್ಟಕ್ಕೆ ಏಳ್ತೀವಿ. ಒಂಚೂರ್ ಮನಸ್ಸು ಮಾಡಿ… ಬಲ್ಗಡೆಗೆ ಹೊರ್ಳಿ ಎದ್ದು ಕೂತ್ಕಳಿ. ನಿಧಾನವಾಗಿ ಎರಡೂ ಕಾಲನ್ನ ನೆಲದ ಮೇಲೆ ಇಟ್ಟು ನೇರವಾಗಿ ನಿಂತ್ಕೊಳ್ಳಿ. ಇದ್ರಿಂದ ನಿಮ್ಮ ಹೃದಯ ಮತ್ತೆ ಬೆನ್ನಿಗೆ ಒಳ್ಳೇದು.

ಬೆಳಿಗ್ಗಿನ ತಿಂಡಿ ತಿನ್ನುವದನ್ನು ಮರೆಯಬೇಡಿ :-

ಬೆಳಿಗ್ಗಿನ ತಿಂಡಿ ಅನ್ನೋದು ನಿಮ್ ದಿನದ ಅತೀ ಮುಖ್ಯವಾದ ಆಹಾರ. ವಿಪರ್ಯಾಸ ಅಂದ್ರೆ ತುಂಬಾ ಜನ್ರು ಕಾಲೇಜು ಆಫಿಸಿಗೆ ಹೋಗೋ ಆತ್ರದಲ್ಲಿ ತಿಂಡಿನ ತಿನ್ನದೇ ಇಲ್ಲ. ಟಿಂಡಿ ದಿನ ಪೂರ್ತಿ ಕೆಲ್ಸ ಮಾಡಕ್ಕೆ ಶಕ್ತಿ ಕೊಡುತ್ತೆ, ಚೈತನ್ಯದಿಂದ ಇರ್ಲಿಕ್ಕೆ ಸಹಾಯ ಮಾಡತ್ತೆ. ಅದಿಕ್ಕೆ ಇನ್ಮೇಲೆ ತಿಂಡಿ ತಿನ್ನದ್ ಮಿಸ್ ಮಾಡ್ಬೇಡಿ.

ಇನ್ಮೇಲೆ ಆದರೂ ಎದ್ದಾಗ ಈ ತರದ ಅಭ್ಯಾಸಗಳನ್ನು  ಶುರು ಹಚ್ಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಕೊನೆಗೂ ಎಲ್ಲರ ಮುಂದೆ ಕ್ಷಮೆ ಯಾಚಿಸಿದ ಗಂಡ ಹೆಂಡತಿ ನಟಿ ಸಂಜನಾ..!ಏಕೆ ಗೊತ್ತಾ..?

    ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…

  • ವಿಚಿತ್ರ ಆದರೂ ಸತ್ಯ

    ವಿಜ್ಞಾನಿಗಳಿಂದ ಕಡೆಗೊ ಬಯಲಾಯ್ತು ಉತ್ತರ; ಕೋಳಿ ಮೊದಲೋ..? ಮೊಟ್ಟೆ ಮೊದಲೋ..? ತಿಳಿಯಲು ಈ ಲೇಖನ ಓದಿ …

    ಈ ಜಗತ್ತಿನಲ್ಲಿ ಉತ್ತರ ಸಿಗದಂತಹ ಪ್ರಶ್ನೆಗಳು ಹಲವಾರಿವೆ ಅವುಗಳಲ್ಲೊಂದು ಕೋಳಿ ಮೊಟ್ಟ ಮೊದಲು ಬಂದಿದ್ದು? ಅಥವಾ ಮೊಟ್ಟೆ ಮೊಟ್ಟ ಮೊದಲು ಬಂದಿದ್ದು ? ಕೊನೆಗೂ ಇದಕ್ಕೆ ವಿಜ್ಞಾನಿಗಳಿಂದ ಉತ್ತರ ಲಭ್ಯವಾಗಿದೆ.

  • ಉಪಯುಕ್ತ ಮಾಹಿತಿ

    ಗೋವಿನ ಬಾಲದ ಕೂದಲಿನಿಂದ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ಮುಂದೇನಾಗುತ್ತೆ ನೀವೇ ನೋಡಿ.!

    ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು….

  • ಸುದ್ದಿ

    ಸರ್ಕಾರದ 100 ದಿನದ ಸಾಧನೆಯ ಪುಸ್ತಕ ನಾಳೆ ಬಿಡುಗಡೆಯಾಗಲಿದೆ,.!

     ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರ 100 ದಿನಗಳನ್ನು ಪೂರೈಸಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನೂರು ಪುಟಗಳ ಪುಸ್ತಕವನ್ನು ನವೆಂಬರ್ 5ರಂದು ಬಿಡುಗಡೆ ಮಾಡಲಾಗುತ್ತದೆ. ಮಂಗಳವಾರ ಯಡಿಯೂರಪ್ಪ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ‘100 ದಿನ 100 ಸಾಧನೆ’ ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ನವೆಂಬರ್ 2ರಂದು ಯಡಿಯೂರಪ್ಪ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ನವೆಂಬರ್ 11ರಂದು 15ಕ್ಷೇತ್ರಗಳ ಉಪ ಚುನಾವಣೆ ನೀತಿ…

  • ಸುದ್ದಿ

    ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಂತಹ ಹೆಬ್ಬುಲಿ ನಟಿ – ಅಮಲಾ ಪೌಲ್…!

    ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು…