ಸುದ್ದಿ

ನೀರಿನ ಕೊರತೆಯನ್ನು ನೀಗಿಸಲು 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ‘ಭಗೀರಥ’ ರೈಲು ಚನ್ನೈ ಗೆ ಆಗಮಿಸಿದೆ…!

63

ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್‌ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ.

ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.ವೆಲ್ಲೂರು ಜಿಲ್ಲೆಯ ಜೋಲಾರ್‌ ಪೇಟೆಯಿಂದ ಬರೊಬ್ಬರಿ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಶುಕ್ರವಾರ ಮಧ್ಯಾಹ್ನ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ವಿಶೇಷವಾಗಿ ರೂಪಿಸಲಾಗಿರುವ ವ್ಯಾಗನ್‌(ನೀರು ಸಂಗ್ರಹಿಸಿಕೊಳ್ಳುವ ರೈಲು) ಮೂಲಕ ತರಲಾಗುವ ಕಾವೇರಿ ನೀರು, ಚೆನ್ನೈ ನಗರದ ಜನರ ನೀರಿನ ದಾಹ ತಣಿಸಲಿದೆ. ವ್ಯಾಗನ್‌ಗಳನ್ನು ಒಳಗೊಂಡ ಎರಡು ರೈಲು ಗಾಡಿಗಳು ನಿತ್ಯ ನಾಲ್ಕು ಬಾರಿ ನೀರು ತರಲಿವೆ. ತಲಾ 50,000 ಲೀಟರ್‌ ಸಾಮರ್ಥ್ಯದ, 50 ಟ್ಯಾಂಕ್‌ ವ್ಯಾಗನ್‌ಗಳ ಮೂಲಕ ರೈಲಿನಲ್ಲಿ ನೀರು ಸಾಗಿಸಲಾಗುತ್ತದೆ. ಹೀಗೆ ಸಾಗಿಸಲಾದ ನೀರನ್ನು ವ್ಯಾಗನ್‌ಗಳಿಂದ ಶುದ್ಧೀಕರಣ ಘಟಕಕ್ಕೆ ಪೈಪ್ ಗಳನ್ನು ಅಳವಡಿಸಿ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಮೂಲಗಳ ಪ್ರಕಾರ ಈ ರೈಲು ದಿನಕ್ಕೆ 1 ಕೋಟಿ ಲೀಟರ್ ನಂತೆ ಆರು ತಿಂಗಳ ವರೆಗೂ ಚೆನ್ನೈಗೆ ತಲುಪಿಸಲಿದೆ. ಜೋಲಾರ್ ಪೇಟೆಯಿಂದ ಸುಮಾರು 215 ಕಿ.ಮೀ. ದೂರ ಸಂಚಾರ ಮಾಡಿ ಮಧ್ಯಾಹ್ನ 12ರ ವೇಳೆಗೆ ಚೆನ್ನೈ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿತು. ಅತ್ತ ರೈಲಿನಿಂದ ನೀರು ಪಂಪಿಂಗ್ ಸ್ಟೇಷನ್ ಗೆ ತಲುಪುತ್ತಿದ್ದಂತೆಯೇ ಇತ್ತ ಚೆನ್ನೈನಾದ್ಯಂತ ವಾಟರ್ ಟ್ಯಾಂಕರ್ ಗಳ ಸಮೀಪ ನೆರೆದಿದ್ದ ಜನ ಸರತಿ ಸಾಲಲ್ಲಿ ನಿಂತು ನೀರನ್ನು ಸಂಗ್ರಹಿಸಿಕೊಂಡು ಮನೆಗೆ ತೆರಳಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಜನಿಕಾಂತ್ ಈ ಮಹಿಳೆಯನ್ನು ಈಗಲೂ ಹುಡುಕುತ್ತಿದ್ದಾರಂತೆ. ಯಾಕೆ ಗೊತ್ತಾ!

    ಮಲಯಾಳಂನ ಖ್ಯಾತ ನಟ ದೇವನ್ ಅವರ ಬಳಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತನ್ನ ಹಳೆ ಪ್ರೇಮವನ್ನು ನೆನೆದು ಕಣ್ಣೀರಿಟ್ಟಿರಿಟ್ಟಿದ್ದಾರಂತೆ. ತೆರೆಯ ಮೇಲೆ ಲವರ್ ಬಾಯ್ ಅಗಿ ಮಿಂಚುತ್ತಿದ್ದ ರಜನಿ ಅವರ ನಿಜ ಜೀವನದಲ್ಲಿ ತನ್ನ ಮೊದಲ ಪ್ರೇಮ ವಿಫಲವಾಗಿತ್ತು. ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್ ಬಸ್  ಕಂಡಕ್ಟರ್ ಆಗಿದ್ದ ಸಮಯದಲ್ಲಿ ರಜನಿ, ರೂಟ್ ನಂಬರ್ 10ಎ ಬಸ್ ನಲ್ಕಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಎಂಬಿಬಿಎಸ್ ಓದುತ್ತಿರುವ ನಿರ್ಮಲಾ ಎಂಬುವವರನ್ನು ಪ್ರೀತಿಸುತ್ತಿದ್ದರು. ನಿರ್ಮಲಾ…

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…

  • ಕರ್ನಾಟಕ

    ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂಸಿಂಗ್ ಇನ್ನಿಲ್ಲ…

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ

  • ಆರೋಗ್ಯ

    ದಿನಾಲೂ ನಿಂಬೆ ರಸ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನೆಗಳು ಆಗುತ್ತೆ, ಒಮ್ಮೆ ಈ ಲೇಖನ ಓದಿ ನೋಡಿ…

    ಬೆಳಗ್ಗಿನ ಸಮಯದಲ್ಲಿ ಎದ್ದ ತಕ್ಷಣ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ! ನಿಂಬೆರಸ ಕುಡಿಯೋದ್ರಿಂದ ಸಿಗುವಂತ ಲಾಭಗಳೇನು? ಇಲ್ಲಿದೆ ನೋಡಿ… *ನಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.   *ಬಾಯಿಯ ದುರ್ವಾಸನೆ ನಿವಾರಿಸುತ್ತದೆ  ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಮುಕ್ತರಾಗಲು ನೆರವಾಗುತ್ತದೆ. *ನಿಂಬೆಯ ಅತ್ಯುತ್ತಮ…

  • ಸಿನಿಮಾ

    ಬಾಲಿವುಡ್’ನ ಸೆಕ್ಸಿ ನಟಿಯರ ಸೆಕ್ಸಿ ಲುಕ್’ಗೆ ಈ ‘ಹಾಟ್ ಯೋಗಿನಿ’ ಕಾರಣ..!ತಿಳಿಯಲು ಈ ಲೇಖನ

    ಬಾಲಿವುಡ್‍ನ ಅನೇಕ ಸ್ಟಾರ್‍ಗಳ ಚಿರಯೌವ್ವನದ ಗುಟ್ಟೇ ದೀಪಿಕಾ ಮೆಹ್ತಾ. ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ಬಿಪಾಷ ಬಸು, ದೀಪಿಕಾ ಪಡುಕೋಣೆ, ವಿದ್ಯಾಬಾಲನ್, ಪ್ರೀತಿ ಜಿಂಟಾ ಸೇರಿದಂತೆ ಅನೇಕ ತಾರೆಯರ ಯೋಗ ಗುರು ಈಕೆ. 1997ರಲ್ಲಿ ಈಕೆ ಪರ್ವತಾರೋಹಣ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿ ತನಗೆ ಎದುರಾದ ಸವಾಲನ್ನು ಎದುರಿಸಲು ಈಕೆ ಕಂಡುಕೊಂಡ ಮಾರ್ಗ ಯೋಗ.

  • ಕ್ರೀಡೆ

    “ಭಾರತವೇ ಕ್ರಿಕೆಟ್ನಲ್ಲಿ” ಗೆಲ್ಲಲಿ ಎಂದು ಪ್ರಾರ್ಥಿಸುವ ‘ಪಾಕಿಸ್ತಾನಿ ಕ್ರಿಕೆಟ್’ ಅಭಿಮಾನಿ !!! ನೀವು ನಂಬಲೇಬೇಕು?

    ಕ್ರಿಕೆಟ್ ನಮ್ಮ ಭಾರತೀಯ ಆಟವಲ್ಲದಿದ್ದರು, ಇಡೀ ಭಾರತೀಯರ ಮನ ಮನದಲ್ಲೂ ಮನೆ ಮಾಡಿದೆ. ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ