ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಗೃಹ ಉಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.
1.ಏರ್ ಫ್ರೆಶ್ನೆರ್:-
ಈ ಏರ್ ಫ್ರೆಶ್ನೆರ್ ಸ್ಪ್ರೇ, ಜೆಲ್ ಹೀಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತೆ. ಮನೆ ಒಳಗೆ, ಕಾರ್ ಒಳಗೆ ಘಮ ಘಮ ಅನ್ಲಿ ಅಂತ ಸಾಮಾನ್ಯವಾಗಿ ಇದನ್ನ ಬಳಸ್ತಾರೆ. ಇದ್ರಲ್ಲಿ ನಮ್ಮ ದೇಹಕ್ಕೆ ಹಾನಿ ಮಾಡೋ ವಿಷಾದ ಅಂಶ ಇರುತ್ತೆ.
ಅದ್ರಲ್ಲಿರೋ ಪಾಥಲಾಟ್ಸ್ ಅನ್ನೋ ಪದಾರ್ಥದಿಂದ ನಮ್ಮ ಸಂತಾನೋತ್ಪತ್ತಿ ಶಕ್ತಿಯನ್ನ ಹಾಳುಮಾಡೊದಲ್ದೆ ಅಸ್ತಮಾದಂತಹ ಕಾಯಿಲೆ ಗಂಭೀರ ರೂಪ ಪಡೆಯೋಹಾಗೆ ಮಾಡುತ್ತೆ.
2.ಸುವಾಸನೆಭರಿತ ಮೇಣದ ಬತ್ತಿ:-
ಈ ಸುವಾಸನೆಭರಿತ ಮೇಣದ ಬತ್ತಿ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬದಲ್ಲಿ ಹೀಗೆ ಹಲವಾರು ಸಲ ಇದನ್ನ ಉಪಯೋಗಿಸ್ತೀವಿ. ಕೆಲವೊಬ್ರು ಬೇರೆ ಫ್ರೆಶ್ನೆರ್ಗೆ ನೋಡಿದ್ರೆ ಇದು ಸ್ವಲ್ಪ ಕಡಿಮೆ ಬೆಲೆಗೆ ಸಿಗೋದ್ರಿಂದ ಇದನ್ನ ಬಚ್ಚಲಮನೇಲೇ ಇತ್ತು ಅಲ್ಲಿನ ವಾಸನೆ ಹೋಗಿಸೋದಕ್ಕೆ ಉಪಯೋಗಿಸ್ತಾರೆ.
ಇದ್ರಲ್ಲೂ ಕೂಡ ವಿಷಪದಾರ್ಥ ಇರಬಹುದು, ಯಾಕೆ ಅಂದ್ರೆ ಬಹಳಷ್ಟು ಜನ ಇದರ ಬತ್ತಿಯನ್ನ ಸೀಸದಿಂದ ಮಾಡಿರ್ತಾರೆ., ಒಂದುಸಲ ನೋಡ್ಕೊಳೋದು ಒಳ್ಳೇದು. ಹೇಗೆ ಪರೀಕ್ಷೆ ಮಾಡೋದು ಅಂದ್ರ ? ಒಂದು ಬಿಳಿ ಪೇಪರ್ ತೊಗೊಂಡು ಆ ಕ್ಯಾಂಡೆಲ್ನ ಬತ್ತಿ ತುದಿಯಿಂದ ಒಂದು ಲೈನ್ ಬರೆದಹಾಗೆ ಮಾಡಿ, ನಿಮಗೆ ಯಾವುದೇ ಲೈನ್ ಕಾಣಿಸಲಿಲ್ಲ ಅಂದ್ರೆ ಸೀಸ ಇಲ್ಲ ಅಂತ. ಅಕಸ್ಮಾತ್ ಲೈನ್ ಕಾಣಿಸಿದ್ರೇ ಇದ್ರಲ್ಲಿ ವಿಷಪದಾರ್ಥಗಳು ಇರೋದು ಗ್ಯಾರಂಟಿ.
3.ಬಚ್ಚಲುಮನೆಯ ಕರ್ಟನ್:-
ಇತ್ತೀಚಿನ ದಿನಗಳಲ್ಲಿ ಬಚ್ಚುಲು ಮನೇಲಿ ಶವರ್ ಇದ್ದೆ ಇರುತ್ತೆ. ತುಂಬಾ ಮನೆಗಳಲ್ಲಿ ಈ ಶವರ್ನಲ್ಲಿ ಸ್ನಾನ ಮಾಡೋವಾಗ ನೀರು ಹಾರದೆ ಇರೋ ಹಾಗೆ ಕರ್ಟನ್ ಹಾಕ್ತಾರೆ. ಈ ಕರ್ಟನ್ ನಲ್ಲಿ ಪ್ಲಾಸ್ಟಿಕ್ ಹಾಗೂ PVC ಇರುತ್ತೆ. ಈ ಕಾರ್ಸಿನೋಜೆನಿಕ್ ಅನ್ನೋ ವಿಷಕಾರಿ ಪದಾರ್ಥನ ಹೊರ ಹಾಕುತ್ತೆ.
ಇದು ಪರಿಸರಕ್ಕೂ ತುಂಬಾ ಹಾನಿಮಾಡುತ್ತೆ. ಬಿಸಿ ನೀರಿನ ಶಾಖಕ್ಕೆ ಈ ವಿಷಾದ ಪದಾರ್ಥ ಹೊರಬರುತ್ತಲ್ಲ ಅದು ನಮ್ಮ ಉಸಿರಾಟ ಹಾಗೆ ಸಂತಾನೋತ್ಪತ್ತಿ ಕ್ರಿಯೆಗೆ ಹಾನಿ ಮಾಡುತ್ತೆ. ಇದರ ಬದಲು ಕಾಟನ್ ಕರ್ಟನ್ ಬಳಸೋದು ಒಳ್ಳೇದು.
4.ಕಾರ್ಪೆಟ್ ಕ್ಲೀನರ್:-
ಕಾರ್ಪೆಟ್ ಗೆ ಅಂಟಿಕೊಂಡಿರು ಕಲೆ ಹೋಗ್ಬೇಕು ಅಂತ ಈ ವಸ್ತು ತಾಯಾರಿಸೋದಕ್ಕೆ ಅತ್ಯಂತ ಹೆಚ್ಚು ಹಾನಿಕಾರಿಕ ಕೆಮಿಕಲ್ ಉಪಯೋಗಿಸಿರ್ತಾರೆ. ಪರ್ಕ್ಲೋರೆಥೈಲಿನ್ ಮತ್ತು ನಾಫ್ಥಲೀನ್ ಅನ್ನೋ ಕೆಮಿಕಲ್ ಇದ್ರಲ್ಲಿ ಇರೋದ್ರಿಂದ ಇದನ್ನ ಉಸಿರಾಡಿದಾಗ ಶ್ವಾಸಕೋಶದ ಕ್ಯಾನ್ಸರ್ ಬಾರೋ ಸಾಧ್ಯತೆ ಹೆಚ್ಚು. ಈ ನುಸಿ ಗುಳಿಗೇಲೂ ಈ ಪದಾರ್ಥ ಇರುತ್ತೆ.
ಈ ಕಾರ್ಪೆಟ್ ಕ್ಲೀನ್ ಮಾಡಕ್ಕೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಶ್ರಣ ಉಪಯೋಗಿಸಿ ನೋಡಿ. ಇದ್ರಿಂದ ಯಾವುದೇ ತೊಂದರೆ ಇರಲ್ಲ.
5.ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳು:-
ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳಲ್ಲಿ ಎಟ್ರಾಕ್ಲೋರೆಥೈಲಿನ್ ಅಥವಾ ಪರ್ಚ್ಲೋರೆಥೈಲಿನ್ ಅನ್ನೋ ಕೆಮಿಕಲ್ ಇರುತ್ತೆ. ಇದನ್ನ ಬಳಸಿ ಕ್ಲೀನ್ ಮಾಡಿರೋ ಬಟ್ಟೆ ಹಾಕ್ಕೊಂಡ್ರೆ ಹಾನಿಕಾರಕ ಕಾರ್ಸಿನೋಜೆನ್ಸ್ ನಮ್ಮ ದೇಹಕ್ಕೆ ಸುಲಭವಾಗಿ ಹೋಗುತ್ತೆ.
ಇದ್ರಿಂದ ಹಲವಾರು ರೀತಿಯ ಕ್ಯಾನ್ಸರ್ ಆಗೋ ಸಾಧ್ಯತೆ ಇರೋದ್ರಿಂದ ಡ್ರೈ ಕ್ಲೀನ್ ಮಾಡಕ್ಕೆ ಕೊಡೋದಕ್ಕೆ ಮುಂಚೆ ಈ ವಿಷಕಾರಿ ಅಂಶ ಇರೋ ವಸ್ತು ಬಳಸಬೇಡಿ ಅಂತ ಹೇಳೋದು ಒಳ್ಳೇದು.
6.ಕೀಟನಾಶಕಗಳು.
ಎಲ್ಲರೂ ಒಂದಲ್ಲ ಒಂದುಸಲ ರೈತರು ಕ್ರಿಮಿ, ಕೀಟನಾಶಕ ಸಿಂಪಡಿಸೋವಾಗ ತೊಂದರೆ ಆಗಿ ಸತ್ರು, ಯಾವುದೊ ಸಮಸ್ಯೆಗೆ ಸಿಲುಕಿ ಇದನ್ನ ಕುಡಿದು ಆತ್ಮ ಹತ್ಯೆ ಮಾಡ್ಕೊಂಡ್ರು ಅಂತ ಓದಿರ್ತೀವಿ, ಕೇಳಿರ್ತೀವಿ. ಇದು ಬರಿ ಕ್ರಿಮಿ, ಕೀಟಗಳಿಗೆ ಅಷ್ಟೆ ಅಲ್ಲ ನಮಗೂ ಹಾಗೆ ನಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಹಾನಿ ಮಾಡುತ್ವೆ.
ಇದ್ರಲ್ಲಿ ಆರ್ಗನೋಫಾಸ್ಫೇಟ್ ಕೀಟನಾಶಕಗಳು, ಪೆರೆಥೆರಿನ್ ಮತ್ತು ಕಾರ್ಬಮೆಟ್ಗಳು ಇರುತ್ತೆ , ಇವುಗಳು ತುಂಬಾನೇ ಅಪಾಯಕಾರಿ ಮತ್ತು ಮನುಷ್ಯರಿಗೆ ಕ್ಯಾನ್ಸರ್ ತರೋ ಸಾಧ್ಯತೆ ಹೆಚ್ಚು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ.
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು.ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆಗ ಅಂಬರೀಶ್ ಯಶ್ಗೆ ಗಡ್ಡ ತೆಗೆಯುವಂತೆ ಅಂಬರೀಶ್ ವಾರ್ನ್ ಮಾಡಿದ್ದರು. ಯಶ್ ಸದಾ ಕ್ಲೀನ್ ಶೇವ್ ಲುಕ್ನಲ್ಲಿ ಇರುತ್ತಿದ್ದರು. ಆದರೆ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಶ್ಗೆ ಬೇಜಾರಾಗಿ ಹೋದಲ್ಲಿ ಬಂದಲ್ಲಿ ಯಶ್ಗೆ…
ಕೆಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು.
ಹೆಚ್.ಡಿ. ರೇವಣ್ಣ ಅವರ ಕುಟುಂಬ ವೃಕ್ಷ (Family Tree) 🌳 ಹೆಚ್.ಡಿ. ರೇವಣ್ಣ ಕುಟುಂಬ ಹೆಚ್.ಡಿ. ದೇವೇಗೌಡ (ಭಾರತದ ಮಾಜಿ ಪ್ರಧಾನಮಂತ್ರಿ) │ ┌─────────────────────┴──────────────────────┐ │ │ ಹೆಚ್.ಡಿ. ರೇವಣ್ಣ (ವಿಧಾಯಕ) ಹೆಚ್.ಡಿ. ಕುಮಾರಸ್ವಾಮಿ (ಮಾಜಿ ಸಿಎಂ) │ │ │ ಅನಿತಾ ಕುಮಾರಸ್ವಾಮಿ (ಪತ್ನಿ) │ │ │ ನಿಖಿಲ್ ಕುಮಾರಸ್ವಾಮಿ (ನಟ ಹಾಗೂ ರಾಜಕಾರಣಿ) │ ಭಾವನಿ ರೇವಣ್ಣ (ಪತ್ನಿ) │ ┌────────────────────┬────────────────────────┐ │ │ ಪ್ರಜ್ವಲ್ ರೇವಣ್ಣ ಡಾ. ಸೂರಜ್ ರೇವಣ್ಣ (ಮಾಜಿ…
ಹಾರ ಹಾಕುವ ವಧುವಿಗೆ ಸಹಾಯ ಮಾಡಲು ಹೋಗಿ ವಧುವಿನ ಕೈಯಿಂದ ಕಪಾಳಕ್ಕೆ ಮೋಕ್ಷ ಮಾಡಿಸಿಕೊಂಡ ಬಾವ..!