ಜ್ಯೋತಿಷ್ಯ

ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶುಕ್ರನ ದೆಸೆ ಚೆನ್ನಾಗಿದೆಯೇ…

122

ಇಂದು ಶುಕ್ರವಾರ, 09/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:–

ವ್ಯವಹಾರ ವೃದ್ಧಿಗೆ ಹಣ ವಿನಿಯೋಗ ಮಾಡಲು ಸೂಕ್ತ ದಿನ. ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭ. ಶ್ರೀದೇವತಾದರ್ಶನ ಭಾಗ್ಯ ತಂದೀತು. ವೈಯಕ್ತಿಕವಾಗಿ ಯಾವುದೇ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಪ್ರಗತಿಯ ದಿನ. ಬೆಂಕಿಯ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಅಧಿಕಾರಿಗಳಿಗೆ ಅಭಿವೃದ್ಧಿ ಇರುತ್ತದೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ.

ವೃಷಭ:-

ಉತ್ತಮ ಜನರೊಂದಿಗೆ ಸಂಪರ್ಕ ಒದಗಿ ಬರುತ್ತದೆ. ಆಗಾಗ ಧನಾಗಮನದಿಂದ ಕಾರ್ಯಸಿದ್ಧಿಯಾಗುತ್ತದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಕಾರ್ಯಸಿದ್ಧಿ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ. ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಉತ್ಸಾಹ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಸರ್ಕಾರಿ ನೌಕರರಿಗೆ ಕಿರುಕುಳ ಉಂಟಾದೀತು. ಕುಟುಂಬ ಸಮೇತರಾಗಿ ಕುಲದೇವತಾ ದರ್ಶನ.

 

ಮಿಥುನ:–

ವಿದ್ಯುದುಪಕರಣಗಳ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಏರಿಳಿತ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ. ಸ್ವತಂತ್ರ ಉದ್ಯಮದಲ್ಲಿ ಯಶಸ್ಸು. ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಇರುತ್ತದೆ. ನಿಮ್ಮ ಬಗ್ಗೆ ಅನಾವಶ್ಯಕವಾಗಿ ಕಿರಿಕಿರಿಯನ್ನು ತಂದಾರು. ದೇವತಾ ಕೆಲಸಗಳಿಗಾಗಿ ಓಡಾಟ ವಿರುತ್ತದೆ. ಸಂಚಾರದಲ್ಲಿ ಜಾಗ್ರತೆ ಇರಲಿ. ಕೃಷಿ ಕ್ಷೇತ್ರದ ವ್ಯವಹಾರಗಳಿಂದ ಉತ್ತಮ ಆದಾಯ.

ಕಟಕ :-

ಕುಶಲ ಕರ್ಮಿಗಳಿಗೆ ಹೆಚ್ಚಿನ ಬೇಡಿಕೆ. ಸಂಶೋಧನೆಯಲ್ಲಿ ತೊಡಗಿದವರಿಗೆ ಉತ್ತಮ ಮಾರ್ಗದರ್ಶನ. ಗುರಿ ಸಾಧನೆಗಾಗಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಸಾಂಸಾರಿಕವಾಗಿ ಹೆಚ್ಚಿನ ಸಮಾಧಾನ ಸಿಗಲಿದೆ. ಒಳ ಸಂಗಾತಿಯ ಅವಶ್ಯಕತೆಗಾಗಿ ಪ್ರಯತ್ನಿಸಿರಿ. ಗುರಿ ಸಾಧನೆಗಾಗಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಸಾಂಸಾರಿಕವಾಗಿ ಹೆಚ್ಚಿನ ಸಮಾಧಾನ ಸಿಗಲಿದೆ. ಒಳ ಸಂಗಾತಿಯ ಅವಶ್ಯಕತೆಗಾಗಿ ಪ್ರಯತ್ನಿಸಿರಿ. ಹೊಸ ವಿಷಯಗಳನ್ನು ಕಲೆಹಾಕುವುದರಿಂದ ಬರವಣಿಗೆಯಲ್ಲಿ ವಿಳಂಬದ ಸಾಧ್ಯತೆ. ಆರ್ಥಿಕವಾಗಿ ಧನಾಗಮನದಿಂದ ಸಂತಸ.

 ಸಿಂಹ:–

ಗೊತ್ತು ಗುರಿಯಿಲ್ಲದೆ ಮುಂದುವರಿಯದಿರಿ. ಹಿಂದಿನ ಕಹಿ ಅನುಭವಗಳು ಕಾಡಲಿವೆ. ಕಚೇರಿ ಕೆಲಸಗಳ ನಿಮಿತ್ತ ದೂರದ ಪ್ರಯಾಣ. ಉದ್ಯೋಗಸ್ಥರಿಗೆ ಹೆಚ್ಚಿನ ಬಿಡುವಿನಿಂದ ಮಾನಸಿಕ ನೆಮ್ಮದಿ ದೊರಕುವುದು. ಸ್ಪೋಟಕ ವಸ್ತುಗಳಿಂದ ದೂರವಿರಿ.  ವೈವಾಹಿಕ ಸಂಬಂಧಗಳು ಕೂಡಿ ಬರಲು ಹೊಂದಾಣಿಕೆ ಅಗತ್ಯವಿದೆ. ದಿನಾಂತ್ಯ ಶುಭವಾರ್ತೆ.  ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಳ.

ಕನ್ಯಾ :-

ನೆನೆಗುದಿಗೆ ಬಿದ್ದ ವಿವಾದ ನಿರ್ಣಯ ಕಾಣಲಿದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ. ಅವಿವಾಹಿತರಿಗೆ ಯೋಗ್ಯ ಪ್ರಸ್ತಾವಗಳಿಗೆ ಸಕಾಲ. ಸದುಪಯೋಗಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಪ್ರಯತ್ನಬಲಕ್ಕೆ ಒತ್ತು ನೀಡಬೇಕು.  ಶಿಕ್ಷಕ ವೃತ್ತಿಯವರಿಗೆ ಗೌರವಾದರಗಳು ದೊರೆಯಲಿವೆ. ಲೋಹದ ವ್ಯಾಪಾರಿಗಳಿಗೆ ಲಾಭದ ನಿರೀಕ್ಷೆ.  ಸಾಂಸಾರಿಕವಾಗಿ ನೆಮ್ಮದಿ ತರಲಿದೆ.

ತುಲಾ:–

ವೃತ್ತಿರಂಗದಲ್ಲಿ ನಿಮ್ಮ ಮುನ್ನಡೆ ಸಫ‌ಲವಾದೀತು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ವಿವಿಧ ರೀತಿಯ ಧನಾಗಮನ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ. ಅಧ್ಯಯನದಲ್ಲಿ ಆಸಕ್ತಿ ವಹಿಸುವಿರಿ. ವೃತ್ತಿಯಲ್ಲಿ ಕಿರಿಕಿರಿ. ಕೆಲಸದಲ್ಲಿ ಕಾರ್ಯಬಾಹುಳ್ಯ ಸಾಧ್ಯತೆ. ಕೆಲಸದ ಒತ್ತಡದಿಂದಾಗಿ ದುಗುಡ ಉಂಟಾದೀತು. ದೇಹಾರೋಗ್ಯದಲ್ಲಿ ಗಮನ ವಿರಲಿ. ಹಿರಿಯರ ಮಾತನ್ನು ಕಡೆಗಣಿಸದಿರಿ.

ವೃಶ್ಚಿಕ :-

ವೃತ್ತಿಯಲ್ಲಿ ಯಶಸ್ಸು. ಆರೋಗ್ಯದ ಬಗ್ಗೆ ಗಮನವಿರಲಿ. ಬಡವರಿಗೆ ಧಾನ್ಯಗಳನ್ನು ದಾನ ಮಾಡುವುದರಿಂದ ಸಂತೃಪ್ತಿ. ಪ್ರೇಮ ವಿವಾಹಗಳು ಯಶ ಕಾಣುವವು. ವಂತಾದೀತು. ಸ್ತ್ರೀ ಮೂಲಕ ಅಪವಾದ ಭೀತಿ ಬರಲಿದೆ. ಪಾಟ್ನರ್‌ಶಿಪ್‌ ಕೆಲಸಗಳ ಬಗ್ಗೆ ಜಾಗ್ರತೆ ಇರಲಿ. ತಪ್ಪು ಮಾಡಿದ ಕೆಲಸಕಾರ್ಯಗಳಲ್ಲಿ ಸಂತಾಪ ಪಡು ದೇವತಾರಾಧನೆಯಿಂದ ಯಶಸ್ಸು. ಯಾವುದೇ ವಿಚಾರದಲ್ಲಿ ಸಂಶಯ ಪಡದಿರಿ.

ಧನಸ್ಸು:–

ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣ ಇರುತ್ತದೆ. ಉದ್ಯೋಗಿಗಳಿಗೆ ಇನ್ನೂ ಉತ್ತಮ ಉದ್ಯೋಗಕ್ಕಾಗಿ ಪ್ರಯತ್ನ ಮಡಿದ್ದಲ್ಲಿ ಉದ್ಯೋಗ ಲಾಭವಿದೆ. ಗೃಹ ನಿರ್ಮಾಣ, ದುರಸ್ತಿ ಕಾರ್ಯಗಳಲ್ಲಿ ಯಶಸ್ಸು. ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಕಾರ್ಯ ನಡೆಸಲಿದ್ದೀರಿ. ಹಿರಿಯರಿಗೆ ದೇವತಾದರ್ಶನ ಭಾಗ್ಯವಿದೆ.  ದಾಂಪತ್ಯ ಸಮಸ್ಯೆಗಳಿಗೆ ಹಿರಿಯರ ಸಲಹೆಯಿಂದ ಉತ್ತಮ ಪರಿಹಾರ.

ಮಕರ :-

ಆರ್ಥಿಕವಾಗಿ ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳಿ. ಆಶಾವಾದಿಗಳಾಗಿ ಮುಂದುವರಿಯ ಬೇಕು. ಸಾಂಸಾರಿಕವಾಗಿ ಹೊಂದಾಣಿಕೆ ಸಂತಸ ತರುತ್ತದೆ. ಗೃಹ ನಿರ್ಮಾಣದ ಬಗ್ಗೆ ಚಿಂತನೆ. ಬಂಧುಗಳೊಂದಿಗಿನ ಬಾಂಧವ್ಯ ಗಟ್ಟಿಗೊಳ್ಳುವುದು. ಆರ್ಥಿಕ ಸಂಪನ್ಮೂಲಗಳು ಕೂಡಿಬರಲಿವೆ. ಮಕ್ಕಳ ಸಲುವಾಗಿ ವಿದೇಶ ಪ್ರಯಾಣ. ಸಹೋದರರ ಸಹಕಾರ.  ಸಾಮಾಜಿಕ ಕಾರ್ಯಗಳಿಗೆ ಓಡಾಟವಿರುತ್ತದೆ.

ಕುಂಭ:-

ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ ಸಾಧ್ಯತೆ. ವೈಯಕ್ತಿಕ ವಿಷಯಗಳ ಬಗ್ಗೆ ಜಾಗರೂಕರಾಗಿರುವುದು ಸೂಕ್ತ. ಸಾಂಸಾರಿಕವಾಗಿ ಚೇತರಿಕೆಯ ದಿನಗಳಿವು. ನಿರ್ಧಾರಗಳ ಬಗ್ಗೆ ದುಡುಕದಿರಿ. ಆರ್ಥಿಕವಾಗಿ ಹಾಗೆ ದೇಹಾರೋಗ್ಯದ ಬಗ್ಗೆ ಸಮಾಧಾನ ಕಂಡು ಬರುತ್ತದೆ.  ಆರೋಗ್ಯದಲ್ಲಿ ವೃದ್ಧಿ. ಪ್ರಾಪ್ತ ವಯಸ್ಕರಿಗೆ ಸಂತಾನ ಭಾಗ್ಯದ ಯೋಗ. ನಿರುದ್ಯೋಗಿಗಳ ಸಮಸ್ಯೆ ಪರಿಹಾರವಾಗಲಿದೆ.

ಮೀನ:-

ರಾಜಕೀಯದವರಿಗೆ ಗೊಂದಲದ ಪರಿಸ್ಥಿತಿ ತಂದೀತು. ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಅವಸರಿಸದಿರಿ. ವ್ಯವಹಾರದಲ್ಲಿ ಉನ್ನತಿ. ಹಿತ ಶತ್ರುಗಳಿಂದ ಸಂಕಷ್ಟ. ವೈದ್ಯಕೀಯ ಚಿಕಿತ್ಸೆಗಾಗಿ ಅಧಿಕ ವೆಚ್ಚ ಭರಿಸಬೇಕಾದೀತು.  ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಸಮಾಧಾನಕರವಲ್ಲದ ವಾತಾವರಣ  ಬಂಧುಗಳ ಆಗಮನ ಸಾಧ್ಯತೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೇವಸ್ಥಾನದ ಬಳಿ ಭಿಕ್ಷೆ ಬೇಡಿದರೆ ಇಷ್ಟೊಂದು ಹಣ ಇರುತ್ತಾ.?ಬಿಕ್ಷುಕಿ ಬಳಿ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್…!

    ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಲವಾರು ರೋಗಗಳಿಗೆ ರಾಮಬಾಣ ಭೂಲೋಕದ ಈ ಅಮೃತ..!

    ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು. * ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು. * ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು. * ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ. * ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ…

  • ಜೀವನಶೈಲಿ

    ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

    ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ. ಇನ್ನು ಕೆಲವರು ಕಿವಿ ಚುಚ್ಚಿಸಲು ಮಗು ಸ್ವಲ್ಪ ದೊಡ್ದದಾಗುವವರೆಗು ಕಾಯುತ್ತಾರೆ.

  • ಸುದ್ದಿ

    ಪಿಯು ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ ಕೊಟ್ಟ ಮೋದಿ;ಏನೆಂದು ತಿಳಿಯಲು ಇದನ್ನೊಮ್ಮೆ ಓದಿ..!

    ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯ ಆರಂಭದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನು ಜಾರಿಗೆ ತರ್ತಿದ್ದಾರೆ. ಚಿಲ್ಲರೆ ವ್ಯಾಪಾರಿಗಳ ಪಿಂಚಣಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. 60 ವರ್ಷದ ನಂತ್ರ ಆರ್ಥಿಕ ಶಕ್ತಿ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಲ್ಲರೆ ವ್ಯಾಪಾರ ಹಾಗೂ ಸ್ವಂತ ವ್ಯಾಪಾರ ಮಾಡುವವರಿಗೆ ಮಾಸಿಕ 3 ಸಾವಿರ ರೂಪಾಯಿಯವರೆಗೆ ಪಿಂಚಣಿ ಸಿಗಲಿದೆ. 3 ಕೋಟಿಗೂ ಹೆಚ್ಚು ವ್ಯಾಪಾರಿಗಳು ಇದ್ರ ಲಾಭ ಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಜನರಿಗೆ…

  • ಜ್ಯೋತಿಷ್ಯ

    ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದದೊಂದಿಗೆ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ.

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ. ಸಂಪರ್ಕಿಸಿ:-9353957085 ಮೇಷ(11 ನವೆಂಬರ್, 2019) : ಧ್ಯಾನ ಮತ್ತು ಯೋಗ ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳೆರಡಕ್ಕೂ ಪ್ರಯೋಜನಕಾರಿಯಾಗುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಪ್ರೇಮಪ್ರಯಾಣ ಮಧುರವಾಗಿದ್ದರೂ ಅಲ್ಪಾವಧಿಯದ್ದಾಗಿರುತ್ತದೆ. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ…