ಉಪಯುಕ್ತ ಮಾಹಿತಿ

ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ಈ ಆಣೆಕಟ್ಟು ಒಡೆದ್ರೆ, ಈ ಭಾಗದ ನಗರಗಳು ಗ್ಯಾರಂಟಿ ಜಲಸಮಾಧಿ.!

975

ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್  ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್  ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ…

ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ ದಕ್ಷಿಣ ಭಾರತದಲ್ಲೇ ಇದೆ ಈ ಅಪಾಯಕಾರಿ ಡ್ಯಾಮ್. ಅದು ಯಾವಾಗ ಬೇಕಿದ್ದರೂ ಒಡೆದು ಹೋಗಬಹುದು.

ಈ ಡ್ಯಾಮ್ ಇರುವುದೆಲ್ಲಿ.?

ಹೀಗೆ ಮನುಕುಲದ ವಿನಾಶಕ್ಕೆ ಕಾದುಕುಳಿತ ಆಧುನಿಕ ಯಮಧರ್ಮರಾಯ ನಂತಿರುವ ಈ ಡ್ಯಾಮ್ ನಮ್ಮ ಪಕ್ಕದಲ್ಲೇ ಇರುವ ಕೇರಳ ರಾಜ್ಯದಲ್ಲಿದೆ. ಇದು  ಒಡೆದು ಹೋದರೆ ಸಂಪೂರ್ಣವಾಗಿ ಜಲಸಮಾಧಿ ಆಗುವುದು ಗ್ಯಾರಂಟಿ. ಜಲ ರಾಕ್ಷಸನಂಟಿರುವ ಈ ಡ್ಯಾಮ್ ಹೆಸರೇ ಮುಲ್ಲಪೆರಿಯಾರ್.

ಒಂದು ವೇಳೆ ಹಾಗೆ ಏನು ಹಾಗೇನಾದ್ರೂ ಆದ್ರೆ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಜಲಪ್ರಳಯವೇ ನಡೆದು ಹೋಗುತ್ತೆ. ಇದು ಗೊತ್ತಿದ್ದರೂ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ಜನರು ಮಾತ್ರ ಈ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಲಕ್ಷಾಂತರ ಜನಗಳ ಜೀವನವನ್ನು, ಬಲಿ ತೆಗೆದುಕೊಳ್ಳುವುದಕ್ಕೆ ಕೂತಿರುವ ಡ್ಯಾಮ್ ನ ಅಸಲಿ ಕಥೆ..!

ಈ ಅಣೆಕಟ್ಟು ನೂರಾರು ವರ್ಷಗಳಿಂದ ನಿರ್ಮಾಣವಾಗಿದೆ. ಇದು ಕೇರಳ ರಾಜ್ಯದಲ್ಲಿದ್ದರೂ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಾತರ ತಮಿಳುನಾಡಿನ ಜನ. ಈ ವಿಷಯದಲ್ಲಿ ನಿಮಗೆ ಒಂದು ಕನ್ಫ್ಯೂಸ್ ಆಗುತ್ತಿರುವುದು ಗ್ಯಾರೆಂಟಿ. ಏಕೆಂದರೆ ಮುಲ್ಲಪೆರಿಯಾರ್ ಡ್ಯಾಮ್ ಇರುವುದು ಕೇರಳದಲ್ಲಿ ಇದರ ನೀರನ್ನು ಬಳಸುತ್ತಿರುವುದು ತಮಿಳುನಾಡಿನ ಜನ. ಇದು ಹೇಗೆಂದು ನಿಮಗೆ ಕನ್ಫ್ಯೂಸ್ ಆಗದೆ ಇರಲ್ಲ. ಇದಕ್ಕೆ  ಮೂಲ ಕಾರಣ ಈ ಪೆರಿಯಾರ್ ನದಿ ಕೇರಳದ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಹುಟ್ಟುತ್ತದೆ. ಈ ನದಿಗೆ ಅಡ್ಡವಾಗಿ ಇಡುಕ್ಕಿ ಜಿಲ್ಲೆಯ ತೇಕಡಿ ಬಳಿ ಒಂದು ಡ್ಯಾಮನ್ನು ಕಟ್ಟಿದ್ದಾರೆ.

ತಮಿಳುನಾಡಿನಲ್ಲಿರುವುದು ಕೇವಲ 114 ಚದುರ ಕಿಲೋಮೀಟರ್!

ಹೀಗಾಗಿ ಇದಕ್ಕೆ ಮುಲ್ಲಪೆರಿಯಾರ್ ಅಣೆಕಟ್ಟು ಎಂದು ಹೆಸರಿಡಲಾಗಿದೆ. ಕೇರಳ ರಾಜ್ಯದಲ್ಲಿ ಅತಿ ಉದ್ದವಾದ ನದಿಯಾಗಿರುವ ಪೆರಿಯಾರ್, ತನ್ನ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಸುಮಾರು 244 ಕಿಲೋಮೀಟರ್ ಗಳ ವರೆಗೂ ಹರಿಯುತ್ತದೆ. ಒಟ್ಟು  5398 ಚದುರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಪೈಕಿ 5284 ಚದುರ ಕಿಲೋಮೀಟರ್ ಕೇರಳದಲ್ಲಿದ್ದರೆ, ಉಳಿದ 114 ಚದುರ ಕಿಲೋಮೀಟರ್ ಗಳಷ್ಟು ಜಲಾನಯನ ಪ್ರದೇಶ ತಮಿಳುನಾಡಿನಲ್ಲಿದೆ. ಇದು ಬರೀ 114 ಚದುರ ಕಿಲೋಮೀಟರ್ ಅಂತ ನಿಮಗೆ ಅನ್ನಿಸಬಹುದು. ಆದ್ರೆ ನಾವು ಹೇಳಿದ್ದು  ಇದು ಜಲಾನಯನ ಪ್ರದೇಶ.

ಆದರೆ ಈ ಡ್ಯಾಮ್ ನ ಸಂಪೂರ್ಣ ಲಾಭವನ್ನು ತಮಿಳುನಾಡಿನ ಜನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬ್ರಿಟಿಷರು. ಈಗಿನ ಕೇರಳ ರಾಜ್ಯ ಬ್ರಿಟಿಷರ ಕಾಲದಲ್ಲಿ ತಿರುವನಂತಪುರ ರಾಜನ ಆಳ್ವಿಕೆಯಲ್ಲಿತ್ತು. ಆಗ ಇಡೀ ತಮಿಳುನಾಡನ್ನು ಮದ್ರಾಸ್ ರಾಜ್ಯ ಎಂಬ ಹೆಸರಲ್ಲಿ ಬ್ರಿಟಿಷರು ಆಳುತ್ತಾ ಇದ್ದರು. ಇದೇ ಮದ್ರಾಸ್ ಪ್ರಾಂತ್ಯಕ್ಕೆ ನಮ್ಮ ಕರ್ನಾಟಕದ ಕೆಲವು ಭಾಗಗಳು ಕೂಡ ಸೇರಿದ್ದವು. ಹೀಗಾಗಿ ತಮಿಳುನಾಡಿನ ಜನಕ್ಕೆ ನೀರು ಕೊಡಲೆಂದು ಬ್ರಿಟಿಷರು ಈ ಮುಲ್ಲಪೆರಿಯಾರ್ ಅಣೆಕಟ್ಟನ್ನು ಆಗ ಕಟ್ಟಿದ್ದರು.

ಇವತ್ತು ಅದು ಕೇರಳಿಗರ ಪಾಲಿಗೆ ಮರಣ ಮೃದಂಗ ವಾಗಿದೆ. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅಂತ ಅಂದರೆ, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ವಿವಾದದ ಮೂಲ ಕಾರಣ ಬ್ರಿಟಿಷರು. ಅಂದಿನ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ನಡುವೆ ಸಾವಿರ 1924ರಲ್ಲಿ ಆದ ಒಪ್ಪಂದವೇ ಮೂಲ ಕಾರಣ.

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ ವಾಗಿದ್ದು 1895. ಸಮುದ್ರ ಮಟ್ಟಕ್ಕಿಂತಲೂ ಸುಮಾರು 2890 ಅಡಿ ಎತ್ತರವಿದ್ದು, ಅರಬ್ಬಿ ಸಮುದ್ರದಿಂದ ಸುಮಾರು 130 ಕಿಲೋಮೀಟರ್ ಅಂತರದಲ್ಲಿದೆ. ಈ ಡ್ಯಾಮ್ ನಲ್ಲಿ ಸುಮಾರು 13ಟಿಎಂಸಿ ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ. ಸದ್ಯಕ್ಕೆ ಡ್ಯಾಮ್ನ ಹಿತದೃಷ್ಟಿಯಿಂದ ಸೆಂಟ್ರಲ್ ವಾಟರ್ ಕಮಿಷನ್ ಆದೇಶದಂತೆ ನೀರಿನ ಸಂಗ್ರಹಣೆಯ ಮಟ್ಟವನ್ನು 142 ಅಡಿಗಳಿಗೆ ನಿಯಂತ್ರಿಸಲಾಗಿದೆ.

ಕೇವಲ 50 ವರ್ಷ ಆಯಸ್ಸು!

ಈ ಡ್ಯಾಮ್ ಕಟ್ಟಿದಾಗ ಇದರ ಆಯಸ್ಸು ಐವತ್ತು ವರ್ಷಕ್ಕೆ ಎಂದು ಹೇಳಲಾಗಿತ್ತು. ಸುಣ್ಣ ಮತ್ತು ಗಾರೆಯನ್ನು ಬಳಸಿ ಕಟ್ಟಿರುವ ಈ ಡ್ಯಾಮ್ ನ ಭವಿಷ್ಯ ಹೆಚ್ಚು ಕಾಲ ಇರುವುದಿಲ್ಲ ಎಂದು, ಸ್ವತಹ ನಿರ್ಮಾಣ ಮಾಡಿದ ಬ್ರಿಟಿಷರಿಗೆ ನಂಬಿಕೆ ಇರಲಿಲ್ಲ. ಈ ಡ್ಯಾಮ್ ಪಕ್ಕದಲ್ಲೇ ಇನ್ನೊಂದು ಚಿಕ್ಕ ಡ್ಯಾಮ್ ಇದೆ. ಈ ಮುಲ್ಲಪೆರಿಯಾರ್ ಡ್ಯಾಮ್ ನಲ್ಲಿ ಸಂಗ್ರಹಿಸಿದ ನೀರನ್ನು ಈ ಚಿಕ್ಕ ಡ್ಯಾಮ್ ಮೂಲಕ ತಮಿಳುನಾಡಿಗೆ ಬಿಡಲಾಗುತ್ತದೆ.

ಕೇವಲ ಐವತ್ತು ವರ್ಷಗಳ ಕಾಲ ಅವದಿಗೆ ಅಂತ ಕಟ್ಟಿರುವ ಈ ಡ್ಯಾಮ್, ಈಗಾಗಲೇ ನೂರಿಪ್ಪತ್ತು ನಾಲ್ಕು ವರ್ಷಗಳನ್ನು ಕಳೆದಿದೆ. ಡ್ಯಾಮ್ ನಿರ್ಮಾಣಕ್ಕೆ ಬಳಸಿರುವ ಸುರುಕಿ ಕಳಚಿ ಬೀಳುತ್ತಿದ್ದು ಯಾವಾಗ ಬೇಕಾದರೂ ಮುಲ್ಲಪೆರಿಯಾರ್ ಒಡೆದು ಹೋಗಬಹುದೆಂಬ ಆತಂಕ ಎದುರಾಗಿದೆ. ನೀವು ಒಮ್ಮೆ ಯೋಚನೆ ಮಾಡಿ, ಒಂದು ವೇಳೆ 13 ಟಿಎಂಸಿ ನೀರು ಇರುವ ಈ ಆಣೆಕಟ್ಟು ಒಡೆದು ಹೋದರೆ, ಅದರ ಪಕ್ಕದಲ್ಲಿರುವ ಜನರ ಜೀವನದ ಕಥೆ ಏನಾಗುತ್ತೆ? ಯಾವ ಮಟ್ಟದಲ್ಲಿ ವಿನಾಶ ಸಂಭವಿಸಬಹುದು. ಅದು ಜಲಪ್ರಳಯಕ್ಕೆ ಸಮವಾದ ಅಂತೆ.

ಹೀಗಾಗಿ ಕೇರಳಿಗರು ಆತಂಕಕ್ಕೀಡಾಗಿದ್ದಾರೆ. ಒಂದು ವೇಳೆ ಈ ಡ್ಯಾಮ್  ಒಡೆದು ಹೋದರೆ ಕೇರಳದ ಕೊಚ್ಚಿನ್ ಸೇರಿದಂತೆ ಹಲವು ನಗರಗಳು ಕೊಚ್ಚಿ ಹೋಗುತ್ತವೆ. ಇದು ಕೇರಳದ ಹಲವಾರು ಜನಪರ ಸಂಘಟನೆಗಳ ಆತಂಕ ಮತ್ತು ಆಂದೋಲನಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಡ್ಯಾಮಿನಿಂದ ಕೆಲವೇ ಅಂತರದಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಎರಡು ಭೂಕಂಪನ ಕೇಂದ್ರಗಳು ಪತ್ತೆಯಾಗಿರುವುದು ಜನರ ಆತಂಕಕ್ಕೆ ಮತ್ತಷ್ಟೂ ಕಾರಣವಾಗಿದೆ.

ನೀವು ಹೇಳಬಹುದು ಡ್ಯಾಮ್ ಹಳೆಯದಾಗಿದೆ, ತಾನೇ ಹೊಸದಾಗಿ ಕಟ್ಟಬಹುದು ಅಂತ. ಆದರೆ ಇಲ್ಲೇ ಇರುವುದು ಪ್ರಾಬ್ಲಮ್. ಯಾಕಂದ್ರೆ ಈ ಡ್ಯಾಮ್ ಕೇರಳ ರಾಜ್ಯದಲ್ಲಿ ಇದ್ದರೂ, ಇದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಮಾತ್ರ ತಮಿಳುನಾಡು ಮತ್ತು ಸಂಪೂರ್ಣ ಅಧಿಕಾರ ಇರುವುದು ತಮಿಳುನಾಡಿನ ರಾಜ್ಯಕ್ಕೆ ಮಾತ್ರ. ಇದಕ್ಕೆ ಮೂಲ ಕಾರಣ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದ ನಂತರ ತಮಿಳುನಾಡು ಮತ್ತು ಕೇರಳದ ನಡುವೆ ಆದ ಒಪ್ಪಂದ.

ತಮ್ಮ ರಾಜ್ಯದಲ್ಲಿರುವ ಅಣೆಕಟ್ಟಿನ ನೀರನ್ನು ತಮಿಳುನಾಡು ಬಳಸುತ್ತಿರುವುದರ ಬಗ್ಗೆ ಕೇರಳಿಗರಿಗೆ ಆಕ್ರೋಶವಿಲ್ಲ. ಆದರೆ ಡ್ಯಾಮ್ ನ ನವೀಕರಣಕ್ಕೆ ತಮಿಳುನಾಡು ಸರ್ಕಾರ ಒಪ್ಪದೇ ಇರುವುದೇ ಕೇರಳಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿ ಒಂದು ಪ್ರಶ್ನೆ ಮೂಡಬಹುದು? ಹೊಸ ಆಣೆಕಟ್ಟು  ಕತ್ತೋದಕ್ಕೆ ತಮಿಳುನಾಡಿನ ಸರ್ಕಾರ ಏಕೆ ಅಡ್ಡಿ  ಮಾಡುತ್ತಿದೆ ಎಂದು. ಇಲ್ಲಿ ಒಂದು ಪ್ರಾಬ್ಲಮ್ ತಮಿಳುನಾಡಿನ ಸರ್ಕಾರಕ್ಕಿದೆ. ಅದು ಏನ್ ಎಂದರೆ ಒಂದು ವೇಳೆ ಮುಲ್ಲಾ ಪೇರಿಯಾರ ಡ್ಯಾಮನ್ನು ನವೀಕರಣ ಮಾಡೋದಕ್ಕೆ ಅವಕಾಶ ಕೊಟ್ಟರೆ, ತಮಿಳುನಾಡಿನ ಸರ್ಕಾರದ ಕೈಯಿಂದ ಆಣೆಕಟ್ಟು ಎಲ್ಲಿ ತಪ್ಪಿ ಹೋಗುತ್ತೋ ಎಂಬ ಭಯ ತಮಿಳುನಾಡಿ.ಹೀಗಾಗಿಯೇ ತಮಿಳುನಾಡಿನ ಸರ್ಕಾರ ಯಾರಿಗೆ ಏನಾದ್ರೂ, ನಮಗೆ ಏನು? ನಾವು ಚೆನ್ನಾಗಿದ್ದರೆ ಸಾಕು. ನೀರ್ ಬಂದ್ರ ಸಾಕು ಎಂಬ ಮನಸ್ಥಿತಿಯಲ್ಲಿ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಮ್ಮ ದೇಹದ ವಿಚಿತ್ರ ಸತ್ಯಗಳು!!

    ನಮ್ಮ ದೇಹದ ವಿಚಿತ್ರ ಸತ್ಯಗಳು!! ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು, ಆದ್ದುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇ ಹದಲ್ಲೇ ಇವೆ ಇದನ್ನು ತಿಳೆದರೆ ಅಶ್ಚರ್ಯ ವೆನಿಸಬಹುದು. ಆದರೆ ಇದು ನಿಜವಾದ ಸಂಗತಿ. ಮನುಷ್ಯ ಬದುಕಿರೋವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ – ವರ್ಷ ಕ್ಕೆ25 MM ನಷ್ಟು. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ. *ನಮ್ಮದೇಹದ ನರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದರೆ ಅದರ ಉದ್ದ 75 ಕಿಲೋಮೀಟರ್ ಆಗುತ್ತದೆ. ಒಂದುದಿನಕ್ಕೆ ಸರಿ ಸುಮಾರು ಇಪ್ಪತ್ತು ಸಾವಿರ ಬಾರಿ ಉಸಿರಾಡುತ್ತೇವೆ. ನಮ್ಮಕಣ್ಣುಗಳು ಸುಮಾರು ಒಂದು ಕೋಟಿ ಬಣ್ಣಗಳನ್ನು ಗುರುತಿಸುತ್ತದೆ. ಆದರೆ ನಮ್ಮ ಮಿದುಳಿಗೆ ಅವನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇಲ್ಲ . ಮನುಷ್ಯಬದುಕಿರುವವರೆಗೂ ಅವನ ಕಿವಿ ಬೆಳಿತಾನೇ ಇರುತ್ತೆ . ವರ್ಷಕ್ಕೆ25 ಮಿಲಿ ಮೀಟರ್ ನಷ್ಟು ಬೆಳೆಯುತ್ತದೆ . ಪ್ರತಿದಿನ ನಮ್ಮ ದೇಹ ಸುಮಾರು 1 ಕೊಟಿ ಚರ್ಮ ಕಣಗಳನ್ನು ಕಳೆದುಕೊಳ್ಳುತ್ತದೆ….

  • ಮನರಂಜನೆ

    ನಾನು ಈ ಕೆಲಸ ಮಾಡಿದ್ದರೆ ಬಿಗ್ ಬಾಸ್ ಗೆಲ್ಲುತ್ತಿದ್ದೆ ಎಂದ ರ್ಯಾಪಿಡ್ ರಶ್ಮಿ..!ರಶ್ಮಿ ಲೈವ್ ನಲ್ಲಿ ಹೇಳಿದ್ದೇನು ಗೊತ್ತಾ..?

    ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.ಬಿಗ್ ಬಾಸ್ ಸೀಸನ್ ಆರರ ಸ್ಪರ್ಧಿ, ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾದ ರ್‍ಯಾಪಿಡ್ ರಶ್ಮಿ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ..  ಇನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದ ರ್ಯಾಪಿಡ್ ರಶ್ಮಿ ಟಾಪ್ 5 ಕಂಟೆಸ್ಟಂಟಾಗಿ ಎಲಿಮಿನೇಟ್ ಆಗಿ ಹೊರಬಂದಿದ್ದು ಇದೇ ಮೊದಲ…

  • ಸುದ್ದಿ

    ರಾಹುಲ್ ಗಾಂಧಿ ಇನ್ನೂ ಮಗು ಎಂದ ಮಮತಾ ಬ್ಯಾನರ್ಜಿ.!ಏಕೆ ಗೊತ್ತಾ?

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿಗೆ ಮಗು ಎಂದಿದ್ದಾರೆ.ತಮ್ಮ ಸರ್ಕಾರದ ಬಗ್ಗೆ ರಾಹುಲ್ ಗಾಂಧಿ ಮಾಡಿದ್ದ ಆರೋಪವನ್ನು ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದಾರೆ. ಕನಿಷ್ಠ ಆದಾಯ ಯೋಜನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಏನು ಅಂದುಕೊಂಡಿದ್ದರೋ ಅದನ್ನು ಹೇಳಿದ್ದಾರೆ. ಕನಿಷ್ಠ ಆದಾಯ ತೆರಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನೂ ಅವ್ರು ಮಗು. ಅವ್ರ…

  • ಸುದ್ದಿ

    ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಒಂದೇ ವರ್ಷದೊಳಗೆ ಕಳೆದುಕೊಂಡ ದೆಹಲಿ……!

    ಸುಶ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾಗುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ ಒಂದು ವರ್ಷದೊಳಗೆ ತನ್ನ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. 1998ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಅಲ್ಪ ಅವಧಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಶ್ಮಾ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟರು.  ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಈ ವರ್ಷದ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ದೀಕ್ಷಿತ್ ಹಾಗೂ ಸುಶ್ಮಾ ಸ್ವರಾಜ್ ಒಂದು ತಿಂಗಳ ಅಂತರದಲ್ಲಿ ವಿಧಿವಶರಾಗಿದ್ದಾರೆ. 1993ರಿಂದ 96ರ ತನಕ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗಿದೆ ವಿಪೀತ ಧನಲಾಭ..!ಇದ್ರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(24 ನವೆಂಬರ್, 2018) ನಿಮ್ಮ ಸ್ನೇಹಿತರ ಸಹಾಯದಿಂದಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ನಿಮ್ಮ…

  • ಆರೋಗ್ಯ

    ಈ ಅದ್ಭುತವಾದ ಗಿಡದಲ್ಲಿರುವ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ. ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ.