ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ.
ತೂಕ ಹೆಚ್ಚಿಸಬೇಕಾದವರಿಗೆ ಸೀತಾಫಲ ಬಹಳ ಒಳ್ಳೆಯದು. ಜೇನುತುಪ್ಪ ಮತ್ತು ಸೀತಾಪಹಲದ ಮಿಶ್ರಣವನ್ನು ನಿಯಮಿತವಾಗಿ ಸೇವಿಸಿದಾಗ ಅಗತ್ಯವಾದ ತೂಕ ಮತ್ತು ಹೆಚ್ಚು ಅಗತ್ಯವಿರುವ ಕ್ಯಾಲೊರಿಗಳನ್ನು ದೇಹಕ್ಕೆ ಸೇರಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಆರೋಗ್ಯಕರ ಚರ್ಮ ಮತ್ತು ಕೂದಲು, ರಕ್ತದೊತ್ತಡವನ್ನು ನಿಯಂತ್ರಿಸಲು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತಹೀನತೆಗೆ ಚಿಕಿತ್ಸೆಗೆ ಇದು ಬಹಳ ಉಪಕಾರಿ. ಈ ಹಣ್ಣಿನಲ್ಲಿರುವ ಜೀವರಕ್ಷಕ ಪೋಷಕಾಂಶಗಳಿಗೆ ಸ್ಥೂಲದೇಹ ನಿವಾರಕ, ಮಧುಮೇಹ ನಿವಾರಕ ಮತ್ತು ಕ್ಯಾನ್ಸರ್ ನಿವಾರಕ ಗುಣಗಳಿವೆ. ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೀತಾಫಲ ಅದ್ಭುತವಾದ ಆರೈಕೆಯನ್ನು ನೀಡುತ್ತದೆ. ಸೀತಾಫಲದಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಹಾಗೂ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ದೇಹದ ತೂಕ ಅಗತ್ಯಕ್ಕೂ ಕಡಿಮೆ ಇದ್ದರೆ ಸೀತಾಫಲದ ನಿಯಮಿತ ಸೇವನೆ ತೂಕವನ್ನು ಹೆಚ್ಚಿಸಲು ನೆರವಾಗುತ್ತದೆ.
ಸೀತಾಫಲದಲ್ಲಿರುವ ಮೆಗ್ನಿಶಿಯಂ ಅಂಶ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಹೃದಯಾಘಾತ ಹಾಗು ಕಾರ್ಡಿಯಲ್ ಅರೆಸ್ಟ್ ಹೀಗೆ ಹೃದಯಕ್ಕೆ ಸಂಬಂಧಪಟ್ಟ ಎಲ್ಲಾ ಭಯಾನಕ ತೊಂದರೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಸೀತಾಫಲದ ನಿಯಮಿತ ಸೇವನೆಯಿಂದ ತ್ವಚೆಯ ಸೆಳೆತ ಹೆಚ್ಚುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ. ಪರಿಣಾಮವಾಗಿ ನೆರಿಗೆ ಮೂಡುವ ಮತ್ತು ಕಲೆಗಳು ಬೀಳುವ ಸಾಧ್ಯತೆ ಉಡುಗುತ್ತದೆ. ಇದಕ್ಕೆಲ್ಲಾ ಇದರಲ್ಲಿರುವ ವಿಟಮಿನ್ ಸಿ ಕಾರಣ. ಇದು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ಹಾಗೂ ಕಲೆಯಿಲ್ಲದ ತ್ವಚೆಯನ್ನು ಪಡೆಯಲು ನೆರವಾಗುತ್ತದೆ. ಹೇಳುತ್ತಾ ಹೋದರೆ ಈ ಅದ್ಬುತ ಸೀತಾಫಲದ ಬಗ್ಗೆ ದೊಡ್ಡ ಪುಸ್ತಕವನ್ನೇ ಬರೆಯಬಹುದು, ಹೀಗಾಗಿ ಈ ವಿಷಯ ನಿಮ್ಮವರಿಗೂ ತಿಳಿಸಿ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ವಾಪಸ್ ಪಡೆಯಲು ಯಾರು ಬಯಸುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಕೈತುಂಬ ಸಂಪಾದನೆ ಮಾಡುವ ಬಗ್ಗೆ ಆಲೋಚನೆ ಮಾಡ್ತಾರೆ. ಕಡಿಮೆ ಹಣ ಹೂಡಿ ಹೆಚ್ಚು ಲಾಭ ಪಡೆಯಲು ಬಯಸುವವರಿಗೆ ಎಲ್ಐಸಿ ಹೊಸ ಪಾಲಿಸಿಯೊಂದನ್ನು ಶುರು ಮಾಡಿದೆ. ಎಲ್ಐಸಿ ಈ ಪ್ಲಾನ್ ನಲ್ಲಿ ಪ್ರತಿ ದಿನ 121 ರೂಪಾಯಿ ಹಣ ಹೂಡಿದ್ರೆ 25 ವರ್ಷಗಳ ನಂತ್ರ 27 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಮಗಳ ಮದುವೆಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಎಲ್ಐಸಿ…
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.
ಒಳ್ಳೆ ಹುಡುಗ ಪ್ರಥಮ್ ರವರು ಪ್ರೇಮ ಪತ್ರವನ್ನು ಬರೆದಿದ್ದಾರೆ. ಯಾರಿಗೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಪ್ರಥಮ್ ರವರು ಲೈವ್ ನಲ್ಲಿ ತಮ್ಮ ಬಿಗಬಾಸ್ ಗೆಳತಿ “ಸಂಜನವ”ರಿಗೆ ಪ್ರೇಮ ಪತ್ರವನ್ನು ಬರೆದಿದ್ದಾರೆ.
ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ…
ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ ! ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಂಚೆ ವೈರಿಗಳು ಯೋಚಿಸಬೇಕಾದದ್ದು ಏನು ಗೊತ್ತಾ..? ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ…
ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ವಾಲೆಟ್ ಮತ್ತು ಜನಪ್ರಿಯ ಆನ್ಲೈನ್ ಪಾವತಿ ವ್ಯವಸ್ಥೆ ‘ಗೂಗಲ್ ಪೇ’ ಅಪ್ಲಿಕೇಶನ್ಗೆ ಇದೀಗ ಬಯೋಮೆಟ್ರಿಕ್ ಭದ್ರತೆಯನ್ನು ಪರಿಚಯಿಸಲಾಗಿದೆ. ಆಂಡ್ರಾಯ್ಡ್ 10 ನೊಂದಿಗೆ ಗೂಗಲ್ ಪರಿಚಯಿಸಿದ ಬಯೋಮೆಟ್ರಿಕ್ ಭದ್ರತೆ ವೈಶಿಷ್ಟ್ಯವನ್ನು ಗೂಗಲ್ ಪೇ ಅಪ್ಲಿಕೇಶನ್ನ ಇತ್ತೀಚಿನ 2.100 ಆವೃತ್ತಿಯಲ್ಲಿ ತರಲಾಗಿದ್ದು, ಇದು ಫಿಂಗರ್ಪ್ರಿಂಟ್ ಮತ್ತು ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಆನ್ಲೈನ್ ವಹಿವಾಟುಗಳನ್ನು ರಕ್ಷಿಸಲು ಅನುವು ಮಾಡಿಕೊಡಲಿದೆ. ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರು ಈ ಹಿಂದೆ ತಮ್ಮ ವಹಿವಾಟುಗಳನ್ನು ಭದ್ರಪಡಿಸಿಕೊಳ್ಳಲು…