inspirational

ಮತ್ತೆ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ. ಮೋದಿಗೆ ಪತ್ರ ಬರೆದ ಸೋನಿಯಾ ಗಾಂಧಿ.

97

ಇಂದು ಪೆಟ್ರೋಲ್ ಬೆಲೆ 55 ಪೈಸೆ ಹಾಗೂ ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ.

ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಸಹ ಸಮರ್ಪಕವಾಗಿಲ್ಲ ಇಂತಹ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಂಗಳವಾರವಷ್ಟೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸರಿಯಲ್ಲ, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯಿರಿ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ, ಸರ್ಕಾರ ಅದರ ಲಾಭವನ್ನು ಜನರಿಗೆ ನೀಡದೆ, ಇಂತಹ ಕಷ್ಟದ ಸಮಯದಲ್ಲಿ ಬೆಲೆ ಏರಿಸಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆದು ಜನರಿಗೆ ಬೆಲೆ ಇಳಿಕೆಯ ಲಾಭ ನೀಡಬೇಕು ಎಂದು ಆಗ್ರಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಉಗರು ಕಚ್ಚೋ ಅಭ್ಯಾಸದಿಂದ ಆಗೋ ಪರಿಣಾಮಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ. ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ. ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ…

  • ಸಿನಿಮಾ

    ಕೇವಲ 80 ದಿನಗಳ ಕಾಲ್ ಶೀಟ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

    ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…

  • ಜೀವನಶೈಲಿ

    ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಮಾಡಿದ್ರೆ, ಅದೃಷ್ಟ ತಾನಾಗೇ ನಿಮ್ಮ ಬಳಿ ಬರುವುದು..!

    ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.

  • ನೀತಿ ಕಥೆ

    ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ…

    ವಕೀಲ ನಾಗನಗೌಡ ಪಾಟೀಲರು ಪ್ರಾಮಾಣಿಕರೆಂದೇ ಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು.  ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ ಕಟ್ಟಿಸಿದರು. ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು. ಹಾಗೂ ಹೀಗೂ ಹಣ…

  • ಸುದ್ದಿ

    ಎಲ್‌ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್: ಸಬ್ಸಿಡಿ ರಹಿತ ಅಡುಗೆ ಅನಿಲ ದರ 100 ರೂ. ಇಳಿಕೆ

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರಗಳು ಗಣನೀಯವಾಗಿ ಇಳಿಕೆಯಾಗಿದೆ. ಜೊತೆಗೆ ಡಾಲರ್-ರೂಪಾಯಿ ವಿನಿಮಯ ದರದಲ್ಲಿನ ಬದಲಾವಣೆಯಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ (14.2 ಕೆಜಿ) ಇಳಿಕೆಯಾಗಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪ್ರತಿ ಸಿಲಿಂಡರ್‌ಗೆ 100.50 ರೂ.ಗೆ ಇಳಿದಿದೆ. ಜುಲೈ 1 ರಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರ 637 ರೂ.ಗಳಿಗೆ ಲಭ್ಯವಿರುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರಗಳು ಗಣನೀಯವಾಗಿ ಇಳಿಕೆಯಾಗಿದೆ. ಜೊತೆಗೆ ಡಾಲರ್-ರೂಪಾಯಿ ವಿನಿಮಯ ದರದಲ್ಲಿನ ಬದಲಾವಣೆಯಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ…

  • ಸುದ್ದಿ

    ಸದ್ಯದಲ್ಲೇ ಜೆಡಿಎಸ್‍ಗೆ ಮತ್ತೊಂದು ಬಿಗ್ ಶಾಕ್ ಕೊಡಲು ಬಿಜೆಪಿ ತಯಾರಿ…!

    ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ. ಜೆಡಿಎಸ್‍ನ ಎಲ್ಲ 23 ಶಾಸಕರನ್ನು ಒಂದೇ ಬಂಚ್‍ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ…