ಜ್ಯೋತಿಷ್ಯ

ನಿಂಬೆ ಹಣ್ಣು ಮತ್ತು ಹಸಿ ಮೆಣಸಿನಕಾಯಿಯನ್ನು ಮನೆ ಮುಂದೆ ಮತ್ತು ವಾಹನಗಳ ಮುಂದೆ ಕಟ್ಟುವುದು ಏಕೆ ಗೊತ್ತಾ..?

993

ಶಾಸ್ತ್ರಗಳ ಪ್ರಕಾರ ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ ಹಸಿ ಮೆಣಸನ್ನು ಕಟ್ಟುವುದು ಕೂಡ ಇದ್ರಲ್ಲಿ ಒಂದು. ನಿಂಬೆ-ಮೆಣಸಿನಲ್ಲಿ ತಂತ್ರ-ಮಂತ್ರದ ಜೊತೆ ಮನೋವಿಜ್ಞಾನದ ಸಂಬಂಧವೂ ಅಡಗಿದೆ.

ನಿಂಬೆ ಹಣ್ಣು ಸೇರಿದಂತೆ ಹಸಿ ಮೆಣಸಿನಕಾಯಿ ಇನ್ನಿತರೇ ಅಡುಗೆಗೆ ಮಾತ್ರ ಮೀಸಲಾಗಿಲ್ಲ.ತಂತ್ರ-ಮಂತ್ರಕ್ಕೂ ಸಂಬಂಧವಿದೆ.ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನ ಖಾರದ ರುಚಿ ಕೆಟ್ಟ ದೃಷ್ಟಿಯುಳ್ಳವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಇದ್ರಿಂದಾಗಿ ಕೆಟ್ಟ ದೃಷ್ಟಿ ತಾಗುವುದಿಲ್ಲ.

ಇವೆರಡನ್ನು ನೋಡ್ತಾ ಇದ್ದಂತೆ ಮನೆ ಹಾಗೂ ಕಚೇರಿಗೆ ಬಂದವರ ಗಮನ ಅದರೆಡೆ ಹೋಗುತ್ತದೆ. ಆಗ ಅವರು ಮನೆಯನ್ನು ಸೂಕ್ಷ್ಮವಾಗಿ ನೋಡಲು ಸಾಧ್ಯವಿಲ್ಲ. ಏಕಾಗ್ರತೆ ಭಂಗವಾಗುವುದರಿಂದ ದೃಷ್ಟಿ ತಾಗುವುದಿಲ್ಲ.

ಯಾವುದೇ ವಸ್ತುವನ್ನು ಸೂಕ್ಷ್ಮವಾಗಿ, ಏಕಾಗ್ರತೆಯಿಂದ ನೋಡಿದಲ್ಲಿ ಮಾತ್ರ ದೃಷ್ಟಿ ತಗಲುತ್ತದೆ. ಆದ್ರೆ ನಿಂಬೆ ಹಣ್ಣು ಹಾಗೂ ಮೆಣಸನ್ನು ನೋಡ್ತಾ ಇದ್ದಂತೆ ಕೆಟ್ಟ ದೃಷ್ಟಿಯವರು ಬೇರೆ ಕಡೆ ಗಮನ ನೀಡುವುದಿಲ್ಲ. ಇದ್ರಿಂದ ಅವರ ಏಕಾಗ್ರತೆ ಭಂಗವಾಗುತ್ತದೆ ಎಂದು ಮನೋವಿಜ್ಞಾನ ಕೂಡ ಹೇಳುತ್ತದೆ.

ಹಾಗೆ ಈವೆರಡಕ್ಕೂ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಧನಾತ್ಮಕ ಶಕ್ತಿಯನ್ನು ಹರಡುವ ಸಾಮರ್ಥ್ಯವಿದೆ ಎಂದು ನಂಬಲಾಗಿದೆ. ನಿಂಬೆ ಮರಗಳು ವಾತಾವರಣವನ್ನು ಶುದ್ಧ ಮಾಡುವ ಜೊತೆಗೆ ಮನೆ ಮುಂದಿರುವ ನಿಂಬೆ ಮರ ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ