ಸಿನಿಮಾ, ಸುದ್ದಿ

ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತಿಯ ನಟಿ ಮಯೂರಿ.

197

ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೃಷ್ಣ ಲೀಲಾ ಸಿನಿಮಾ ಮೂಲಕ ಖ್ಯಾತ ಹೊಂದಿದ್ದ ನಟಿ ಮಯೂರಿ ಅವರು ಇಂದು ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುದಿನದ ಗೆಳೆಯ ಅರುಣ್ ಅವರ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇಂದು ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂರಿ ಸುಮಾರು 10 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಂದು ಕುಟುಂಬ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ.

ತನ್ನ ಮದುವೆ ವಿಚಾರವಾಗಿ ಮಯೂರಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ನಾನು ಮದುವೆಯಾದೆ ಎಂದು ಬರೆದು ಅವರ ಮದುವೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮೊದಲು ಕಿರುತರೆಯಲ್ಲಿ ನಟನೆಗೆ ಎಂಟ್ರಿ ಕೊಟ್ಟಿದ್ದ ಮಯೂರಿ ಅವರು ನಂತರ ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮನ ಗೆದ್ದಿದ್ದರು. ನಂತರ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ನಟ ಅಜಯ್ ರಾವ್ ಅವರ ಜೊತೆ ಅಭಿನಯಿಸಿ ಖ್ಯಾತಿಯನ್ನ ಪಡೆದಿದ್ದರು.

ಮಯೂರಿ ಮದುವೆಯಾಗಿರುವ ಅರುಣ್ ಅವರು ಐಟಿ ಉದ್ಯೋಗಿಯಾಗಿದ್ದು ಅಮೇರಿಕಾದಲ್ಲಿ ಸೆಟಲ್ ಆಗಿದ್ದರು, ಈಗ ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ, ಬಾಲ್ಯದಿಂದ ಗೆಳೆಯರಾಗಿದ್ದ ಮಯೂರಿ ಹಾಗೂ ಅರುಣ್ ಅವರು ದೀರ್ಘಕಾಲ 10 ವರ್ಷಗಳಿಂದ ಪ್ರೀತಿಯ ಬಲೆಯಲ್ಲಿದ್ದರು. ಈಗ ತಮ್ಮ ಮನೆಯವರ ಬಳಿ ತಮ್ಮ ಪ್ರೀತಿಯ ಬಗ್ಗೆ ಒಪ್ಪಿಸಿ ಮದುವೆಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಒಡೆದ ತೆಂಗಿನಕಾಯಿ ಕೆಟ್ಟಿದ್ರೆ ಏನರ್ಥ ಗೊತ್ತಾ..?

    ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ. ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ನಿಮಗೂ ಈ ಸಮಸ್ಯೆ ಕಾಡಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ…

  • ಉಪಯುಕ್ತ ಮಾಹಿತಿ

    ಕೇವಲ ಮನೆಯಲ್ಲಿರುವ ಈ ವಸ್ತುವಿನಿಂದ ಹೀಗೆ ಮಾಡಿ ಜಿರಳೆ ಮತ್ತೆ ಬರೊದಿಲ್ಲ.!

    ಮನೆಯಲ್ಲಿರುವ  ಜಿರಳೆ  ಶಾಶ್ವತವಾಗಿ ತೊಲಗಿಸಲು ಸರಳ ಮನೆಮದ್ದು. ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇಲಿ ಜಿರಳೆ ಇರುತ್ತದೆ ಇವುಗಳು ನಾನು ರೀತಿಯ ಸಾಂಕ್ರಮಿಕ ರೋಗಗಳು ತರಿಸುವಂತಹ ಕ್ರಿಮಿಗಳು ಇದ್ದೇ ಇರುತ್ತದೆ ಮನೆಯಲ್ಲಿರುವ ವಸ್ತುಗಳನ್ನು ಹಾಳುಮಾಡುವುದು ಆಹಾರ ಪದಾರ್ಥವನ್ನು ನಾಶಮಾಡುವುದು ಜಿರಳೆಗಳ ಕೆಲಸವಾಗಿದೆ. ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ…

  • ವಿಚಿತ್ರ ಆದರೂ ಸತ್ಯ

    ಈ 2 ವರ್ಷದ ಪುಟ್ಟ ಬಾಲಕಿಗೆ ಹಾವೇ ಫ್ರೆಂಡ್ಸ್..!ತಿಳಿಯಲು ಈ ಲೇಖನ ಓದಿ..

    ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

  • ಆಮೆ
    Animals, India, tourism

    ಮನುಷ್ಯನಿಲ್ಲದ ಭಾರತದಲ್ಲಿ ರಸ್ತೆಗಳನ್ನು ಪ್ರಾಣಿಗಳು ಅವರಿಸುತ್ತಿವೆ.

    ಪ್ರಕೃತಿ ತನ್ನದ್ದನ್ನು ಹೇಳಿಕೊಳ್ಳುತ್ತಿದೆ ಎಂದು ತೋರುತ್ತದೆ. ಮಾನವರು ಮಾರಣಾಂತಿಕ ಕೊರೊನಾವೈರಸ್ ಏಕಾಏಕಿ ಬಳಲುತ್ತಿದ್ದರೆ, ಪ್ರಪಂಚದಾದ್ಯಂತದ ಪ್ರಾಣಿಗಳು ರಸ್ತೆಗಳನ್ನು ಸ್ವಾಧೀನಪಡಿಸಿಕೊಂಡಿವೆ.

  • Place

    ಕೇದಾರನಾಥ ದೇವಾಲಯ

    ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ…

  • ಸುದ್ದಿ

    ಸಾರ್ವಜನಿಕರ ಮುಂದೆಯೇ ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ …!

    20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…