ಉಪಯುಕ್ತ ಮಾಹಿತಿ

ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ ಮತ್ತು ಚಿನ್ನ ಕೊಳ್ಳಲು ಸಾಲಾಗಿ ನಿಂತ ಜನರು, ವರ್ಷದಲ್ಲಿ ಇದೆ ಮೊದಲು.

140

ಕಳೆದ ಮೂರೂ ನಾಲ್ಕು ತಿಂಗಳುಗಳಿಂದ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಸುದ್ದಿ ಅಂದರೆ ಅದೂ ಚಿನ್ನದ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿನ್ನದ ಬೆಲೆಯಲ್ಲಿ ಎಂದೂ ಕಾಣದ ಏರಿಕೆ ಕಂಡಿದ್ದು ಮೂರೂ ನಾಲ್ಕು ತಿಂಗಳುಗಳಿಂದ ಭಾರಿ ಸುದ್ದಿ ಮಾಡುತ್ತಿದೆ. ಇನ್ನು ಚಿನ್ನದ ಬೆಲೆಯ ಏರಿಕೆಯ ಕಾರಣ ಅದೆಷ್ಟೋ ಬಡವರು ತಮ್ಮ ಮನೆಯ ಮದುವೆ ಸಮಾರಂಭಗಳನ್ನ ಮುಂದೂಡಿದ್ದಾರೆ, ಇನ್ನು ಈ ತಿಂಗಳ ಆರಂಭದಿಂದ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದ್ದೂ ಬಡದವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಹೌದು ಕಳೆದ ಎರಡು ತಿಂಗಳ ಹಿಂದೆ ದೇಶದಲ್ಲಿ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಎಷ್ಟು ಏರಿಕೆಯಾಗಿತ್ತು ಅನ್ನುವುದು ನಿಮಗೆಲ್ಲ ಗೊತ್ತೇ ಇದೆ.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಮತ್ತು ಷೇರು ಮಾರುಕಟ್ಟೆಯಲ್ಲಿ ಆದ ದಿಡೀರ್ ಏರುಪೇರಿನ ಕಾರಣ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಪ್ರಮಾಣದ ಏರುಪೇರು ಆಗಿತ್ತು. ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಕಾರಣ ಕೂಡ ಚಿನ್ನದ ಬೆಳೀಯಲ್ಲಿ ಏರಿಕೆಯಾಗಲು ಪ್ರಮುಖ ಕಾರಣವಾಗಿತ್ತು, ಆದರೆ ಈಗ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು ಜನರು ಚಿನ್ನವನ್ನ ಖರೀದಿ ಮಾಡಲುಚಿನ್ನದ ಅಂಗಡಿಗೆ ಸಾಲು ಸಾಲಾಗಿ ಬರುತ್ತಿದ್ದಾರೆ. 

ಹೌದು ನವೆಂಬರ್ ತಿಂಗಳ ಆರಂಭದಿಂದಲೂ ಕುಸಿಯುತ್ತ ಬಂದಿರುವ ಚಿನ್ನದ ಬೆಲೆ ಈಗ 4000 ರೂಪಾಯಿಯಿಂದ ಜಾಸ್ತಿಯಾಗಿ ಇಳಿದಿದೆ, ಇನ್ನು ಚಿನ್ನದ ಬೆಲೆ ಇಷ್ಟು ಇಳಿಕೆಯಾಗಿರುವುದು ಈ ವರ್ಷದಲ್ಲಿ ಇದೆ ಮೊದಲು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇಂದು ನಮ್ಮ ಕರ್ನಾಟಕದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 3572 ರೂಪಾಯಿ ಆಗಿದೆ ಮತ್ತು 10 ಗ್ರಾಂ 35720 ರೂಪಾಯಿ ಆಗಿದೆ, ಇನ್ನು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 3751 ರೂಪಾಯಿ ಆಗಿದೆ ಮತ್ತು 10 ಗ್ರಾಂ ಗೆ 37510 ರೂಪಾಯಿ ಆಗಿದೆ.

ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾದ ಕಾರಣ ಚಿನ್ನವನ್ನ ಖರೀದಿ ಮಾಡಲು ಜನರು ಚಿನ್ನದ ಮಾರುಕಟ್ಟೆಗೆ ಸಾಲು ಸಾಲಾಗಿ ಬರುತ್ತಿದ್ದು ಚಿನ್ನದ ಖರೀಸುವ ಪ್ರಮಾಣ ತುಂಬಾ ಜಾಸ್ತಿ ಆಗಿದೆ. ಇನ್ನು ಕಳೆದ ಮೂರೂ ತಿಂಗಳ ಹಿಂದೆ 40 ಸಾವಿರದ ಗಡಿ ದಾಟಿದ್ದ ಚಿನ್ನದ ಬೆಲೆ ಈಗ 35 ಸಾವಿರದ ಗಡಿಗೆ ಬಂದು ತಲುಪಿದೆ ಮತ್ತು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 33-32 ಸಾವಿರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ ತಜ್ಞರು. ಇನ್ನು ಈ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 4500 ರೂಪಾಯಿಯಷ್ಟು ಇಳಿಕೆಯಾಗಿದ್ದು ಚಿನ್ನದ ಅಂಗಡಿಯಲ್ಲಿ ಚಿನ್ನದ ವಹಿವಾಟು ಜಾಸ್ತಿಯಾಗಿದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ