ಆರೋಗ್ಯ, ಉಪಯುಕ್ತ ಮಾಹಿತಿ

ಚಿಕನ್ ಪ್ರಿಯರೇ ಕೋಳಿಯ ಚರ್ಮ ತಿನ್ನುತ್ತೀರಾ..!ಹಾಗಾದ್ರೆ ತಿನ್ನುವ ಮೊದಲು ಈ ಲೇಖನ ಓದಿ..ಶೇರ್ ಮಾಡಿ…

2064

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.

ಹಾಗಾದರೆ ಇದುವರೆಗೆ ನಾವೆಲ್ಲ ತಿಳಿದಿರುವಂತೆ ಕೋಳಿಮಾಂಸದ ಚರ್ಮ ಅಷ್ಟು ಕೆಟ್ಟದಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ…

ಕೋಳಿಮಾಂಸದ ಅಂಗಡಿಗೆ ಹೋದಾಗ ಅಂಗಡಿಯವರು ಸ್ಕಿನ್ ಔಟ್ ಅಥವಾ ಸ್ಕಿನ್ ಬರ್ನ್ ಮಾಡಬೇಕೇ ಎಂದು ಕೇಳುತ್ತಾರೆ. ಇದರ ಅರ್ಥ ಚರ್ಮವನ್ನು ಉಳಿಸಬೇಕೇ ಬೇಡವೇ ಎಂದು. ಕೆಲವರು ಚರ್ಮವನ್ನು ಉಳಿಸಿ ಎಂದು ಹೇಳುತ್ತಾರೆ.

ಆಗ ಪುಕ್ಕವನ್ನು ನಿವಾರಿಸಿ ಚರ್ಮಸಹಿತ ಮಾಂಸವನ್ನು ನೀಡುತ್ತಾರೆ. ಚರ್ಮ ಬೇಡವೆನ್ನುವವರು ಇದರಲ್ಲಿ ಕೊಬ್ಬು ಇದೆ, ಇದರಲ್ಲಿ ಕೊಲೆಸ್ಟ್ರಾಲ್ ಇದೆ, ಇದು ಹೃದಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಗಳನ್ನು ನೀಡುತ್ತಾರೆ.

ವಾಸ್ತವಾಂಶ #1

ಕೊಬ್ಬಿನ ಬಗ್ಗೆ ಅರಿಯುವುದಾದರೆ ಒಂದು ಔನ್ಸ್ ನಷ್ಟು ಚರ್ಮದಲ್ಲಿ ಕೇವಲ ಎಂಟು ಗ್ರಾಂ ಅಪರ್ಯಾಪ್ತ ಕೊಬ್ಬು ಮತ್ತು ಮೂರು ಗ್ರಾಂ ಪರ್ಯಾಪ್ತ ಕೊಬ್ಬು ಇದೆ.

ವಾಸ್ತವಾಂಶ #2

ಚರ್ಮದಲ್ಲಿ ಯಾವ ಬಗೆಯ ಕೊಬ್ಬು ಇದೆ?  ಚರ್ಮವನ್ನು ಪರೀಕ್ಷಿಸಿದ ತಜ್ಞರಿಗೆ ಇದರಲ್ಲಿ ಮೋನೋ ಅಪರ್ಯಾಪ್ತ ಕೊಬ್ಬು (ಅಥವಾ ಓಲಿಕ್ ಅಮ್ಲ) ಕಂಡುಬಂದಿದೆ. ಈ ಆಮ್ಲದ ಹೆಗ್ಗಳಿಕೆ ಎಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅಂದರೆ ಇದುವರೆಗೆ ನಾವು ಹೆದರಿದಂತೆ ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕಡಿಮೆಗೊಳಿಸುತ್ತದೆ. ಅಲ್ಲದೇ ದೇಹದಲ್ಲಿ ಹಾರ್ಮೋನುಗಳ ಪ್ರಮಾಣವನ್ನೂ ನಿಯಂತ್ರಿಸುತ್ತದೆ.

 

ವಾಸ್ತವಾಂಶ #3

ಕೋಳಿಮಾಂಸ ತಿನ್ನುವವರು ಕ್ಯಾಲೋರಿಗಳ ಬಗ್ಗೆ ಭಾರೀ ಚಿಂತಾಕ್ರಾಂತರಾಗಿರುತ್ತಾರೆ. ಆದರೆ ಚರ್ಮಸಹಿತ ಮತ್ತು ಚರ್ಮರಹಿತ ಮಾಂಸದಲ್ಲಿ ಕ್ಯಾಲೋರಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಚರ್ಮಸಹಿತ ಮಾಂಸದಲ್ಲಿ ಕೆಲವೇ ಕ್ಯಾಲೋರಿಗಳು ಹೆಚ್ಚಿರುತ್ತವೆ ಅಷ್ಟೇ.

 

ವಾಸ್ತವಾಂಶ #4

ಇನ್ನೊಂದು ಉತ್ತಮ ಗುಣವೆಂದರೆ ಚರ್ಮಸಹಿತ ಮಾಂಸ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಚರ್ಮರಹಿತ ಮಾಂಸ ಎಣ್ಣೆಯನ್ನು ಹೆಚ್ಚಾಗಿ ಹೀರಿಕೊಳ್ಳುವ ಕಾರಣ ಅಡುಗೆಯ ಸಮಯದಲ್ಲಿ ಹೆಚ್ಚಿನ ಎಣ್ಣೆಯನ್ನು ಹಾಕಬೇಕಾಗುತ್ತದೆ.

ವಾಸ್ತವಾಂಶ #5

ಆದರೆ ಚರ್ಮಸಹಿತ ಮಾಂಸವನ್ನು ಹೆಚ್ಚು ತಿನ್ನಬಹುದೇ? ತಜ್ಞರ ಪ್ರಕಾರ ಇಲ್ಲ! ಏಕೆಂದರೆ ಚರ್ಮದ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಚರ್ಮದ ಪ್ರಮಾಣ ಮಿತವಾಗಿರುವುದು ತುಂಬಾ ಅಗತ್ಯ.

 

ವಾಸ್ತವಾಂಶ #6

ಚರ್ಮಸಹಿತ ಮಾಂಸ ಸೇವಿಸಿದರೆ ಕೊಂಚ ಪ್ರಮಾಣಕ್ಕೇ ತೃಪ್ತಿಯಾಗುವ ಕಾರಣ ಹೆಚ್ಚಿನ ಪ್ರಮಾಣ ಸೇವಿಸುವ ಅಗತ್ಯವಿಲ್ಲ. ಆದರೆ ಚರ್ಮರಹಿತ ಮಾಂಸ ತಿಂದರೆ ಎಷ್ಟು ತಿಂದರೂ ತೃಪ್ತಿ ಸಿಗದ ಕಾರಣ ಹೆಚ್ಚು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ.

 

ವಾಸ್ತವಾಂಶ #7

ಒಂದು ವೇಳೆ ನೀವು ಮಾಂಸವನ್ನು ಹುರಿಯುವುದಾದರೆ ಚರ್ಮ ಗರಿಗರಿಯಾಗುವಷ್ಟು ಹುರಿಯಬೇಡಿ. ಏಕೆಂದರೆ ಕಪ್ಪಗಾದ ಚರ್ಮ ಎಲ್ಲಾ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳುತ್ತದೆ ಹಾಗೂ ಕಪ್ಪಗಾದ ಭಾಗ ಇಂಗಾಲಕ್ಕೆ ಪರಿವರ್ತನೆಗೊಂಡು ಆರೋಗ್ಯಕ್ಕೆ ಮಾರಕವಾಗುತ್ತದೆ.

ಈ ನಾಣ್ಯಗಳು ನಿಮ್ಮಲ್ಲಿದೆಯಾ..!ಹಾಗಾದ್ರೆ ಈ ಕೆಳಗಿನ ವಿಡಿಯೋ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • National, News Paper, ಉಪಯುಕ್ತ ಮಾಹಿತಿ

    ಪಿಎಂ ಕಿಸಾನ್ ಸಮ್ಮನ್ ನಿಧಿಯೋಜನೆ

    ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…

  • ಸುದ್ದಿ

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಸಹ ನೀಡಬೇಕಂತೆ ಸಚಿವ ಸ್ಥಾನ..!ಏಕೆ ಗೊತ್ತಾ..?

    ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ. ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್‍ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ….

  • ಆರೋಗ್ಯ

    ಮೊಳಕೆ ಬಂದ ಹೆಸರು ಕಾಳಿನ ಲಾಭಗಳೇನು? ಈ ಅರೋಗ್ಯ ಮಾಹಿತಿ ನೋಡಿ.

    ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸೋಕೆ ಸಮಯ ಸಿಗ್ತಿಲ್ಲ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್ ಫುಡ್‍ಗಳ ಹಾವಳಿಯೇ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯಕರ ಆಹಾರಗಳು ಯಾವುದು? ಅದರ ಲಾಭಗಳೇನು..? ಎನ್ನುವ ವಿಷಯವೇ ಅನೇಕರಿಗೆ ತಿಳಿದಿಲ್ಲ. ಫಾಸ್ಟ್ ಫುಡ್ಸ್ ಗಳ ರುಚಿಗೆ ಮನಸೋತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಲ್ಲ. ಹೌದು, ಇಂತಹ ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು ತರಕಾರಿ,…

  • ಆರೋಗ್ಯ

    ಸುಮ್ಮನೆ ನೀರು ಕುಡಿಯೋದಲ್ಲ, ಇಲ್ಲಿ ಸ್ವಲ್ಪ ನೋಡಿ….

    ಜೀವ ಜಲವೆಂದೇ ಕರೆಯಲ್ಪಡುವ ನೀರು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಇರಬೇಕಾದರೆ, ನೀರು ಅತ್ಯಗತ್ಯ.

  • ಜ್ಯೋತಿಷ್ಯ

    ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಈ ನಿಯಮಗಳನ್ನು ಪಾಲನೆ ಮಾಡಿ..

    ಹಣದ ಯಾರಿಗೆ ತಾನೇ ಬೇಡ ಹೇಳಿ.ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ.ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ ಪ್ರಾಪ್ತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಣ ಮಾಡಿ. ಪ್ರತಿ ವಾರ ಮನೆ ಕ್ಲೀನ್ ಮಾಡುವಾಗ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದ್ರಿಂದ ಕೀಟಾಣುಗಳು ನಾಶವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಪ್ರತಿ…

  • ವಿಚಿತ್ರ ಆದರೂ ಸತ್ಯ

    ಈ ಚಿತ್ರಗಳನ್ನು ನೋಡಿದ್ರೆ ಪಕ್ಕಾ ಶಾಕ್ ಆಗ್ತೀರಾ! ಮುಂದೆ ನಮಗೂ ಇತರ ಕಾಲ ಬಂದರೆ?ಮಿಸ್ ಮಾಡ್ದೆ ಇದನ್ನು ನೋಡಿ…

    ನಿಮಗೆ ಒಂದು ಚಾಲೆಂಜ್ ? ಏನು ಗೊತ್ತೇ ಈ ಕೆಳಗಿನ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರಗಳಿಗೆ ಸಂಖ್ಯೆಯನ್ನು ಕೊಡಲಾಗಿದೆ. ಆ ಚಿತ್ರಕ್ಕೆ ಹೊದಿಕೊಳ್ಳುವಂತ ಕಾಮೆಂಟನ್ನು ಬರೆಯಿರಿ.