ಸುದ್ದಿ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಸಹ ನೀಡಬೇಕಂತೆ ಸಚಿವ ಸ್ಥಾನ..!ಏಕೆ ಗೊತ್ತಾ..?

180

ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ.

ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್‍ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ.

ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಮಂಡ್ಯ ಕಾಂಗ್ರೆಸ್‍ ನ ಸ್ಥಳೀಯ ನಾಯಕರು ಲೋಕಸಭಾ ಚುನಾವಣೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ನಿಖಿಲ್‍ ಗೆ ಹಿನ್ನೆಡೆಯಾದ್ರೆ, ಅವರನ್ನು ವಿಧಾನ ಪರಿಷತ್‍ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ಮೂಲಕ ಸಕ್ರಿಯ ರಾಜಕಾರಣದಲ್ಲಿರುವಂತೆ ಮಾಡಬೇಕು ಎಂದು ಮಂಡ್ಯದ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ.

ಈ ಚುನಾವಣೆಯಲ್ಲಿ ನಿಖಿಲ್‍ ಗೆ ಹಿನ್ನಡೆಯಾದ್ರೂ ಅದು ತಾತ್ಕಾಲಿಕ. ಹೀಗಾಗಿ ಅವರು ಮಂಡ್ಯದಲ್ಲಿ ಸಕ್ರಿಯವಾಗಿರಲು ರಾಜಕೀಯ ಸ್ಥಾನಮಾನ ನೀಡಬೇಕು ಎಂಬುದು ಸ್ಥಳೀಯ ಜೆಡಿಎಸ್‍ ನಾಯಕರ ವಾದ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ