ಆಧ್ಯಾತ್ಮ

ಶ್ರೀ ಶಿರಡಿ ಸಾಯಿಬಾಬಾ ಅವರ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯಗಳು..!

3142

ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.

ಅಂತಹವರಲ್ಲಿ ರಾಘವೇಂದ್ರ ಸ್ವಾಮಿಗಳು, ಶಂಕರಾಚಾರ್ಯರು ಹಾಗೂ ಇನ್ನೂ ಅನೇಕ ದೇವಾಂಶ ಸಂಭೂತರು ಸೇರಿದ್ದಾರೆ.ಅಂಥಹ ದೇವಾಂಶ ಸಂಭೂತರಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ರವರು ಕೂಡ ಅಗ್ರಗಣ್ಯರು.

ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು.

ಗೋದಾವರಿ ತಟದ ಅಹಮದ್ ನಗರವು ಹಲವಾರು ಪುಣ್ಯ ಪುರುಷರಿಗೆ ಆಶ್ರಯಸ್ಥಾನವಾಗಿ ಪುಣ್ಯ ಸಂಪಾದಿಸಿದೆ. ಸಾಧು ಸಂತರು ಈ ಪ್ರದೇಶದಲ್ಲಿ ಅವತಾರವೆತ್ತಿ ಈ ಸ್ಥಳವನ್ನು ಪಾವನವಾಗಿಸಿದ್ದಾರೆ.

ಅಹಮದ್ ನಗರ ಜಿಲ್ಲೆಯ ಕೋಪರ್‌ಗಾಂವ್ ತಾಲೂಕಿನಲ್ಲಿದೆ ಶಿರಡಿ. ಗೋದಾವರಿ ನದಿ ದಾಟಿದ ತಕ್ಷಣವೇ ಮಾರ್ಗವು ನಮ್ಮನ್ನು ಶಿರಡಿ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ. ಎಂಟು ಮೈಲು ಸಾಗಿದರೆ ನಾವು ನೀಮ್‌ಗಾಂವ್ ತಲುಪುತ್ತೇವೆ. ಅಲ್ಲಿಂದ ಶಿರಡಿಯ ವೈಭವವನ್ನು ಕಣ್ಣಾರೆ ಕಾಣಬಹುದಾಗಿದೆ. ಕೃಷ್ಣಾ ನದಿ ತಟದಲ್ಲಿ ಶಿರಡಿಯಂತೆಯೇ ಗಾಣಗಾಪುರ, ನರಸಿಂಹವಾಡಿ ಮತ್ತು ಔದುಂಬರ ಮೊದಲಾದ ಇತರ ತೀರ್ಥ ಕ್ಷೇತ್ರಗಳೂ ಇವೆ.

ಶ್ರೀ ಸಾಯಿಬಾಬಾ ಅವರ ಜನ್ಮತಿಥಿ, ಜನ್ಮಸ್ಥಾನ ಮತ್ತು ಅವರ ಹೆತ್ತವರ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಬಾಬಾರಿಂದ ಮತ್ತು ಅವರ ಸಮೀಪವರ್ತಿಗಳಲ್ಲಿ ಈ ಕುರಿತು ಕೇಳಲಾಗಿತ್ತಾದರೂ, ಯಾವುದೇ ಫಲಪ್ರದ ಉತ್ತರ ದೊರೆತಿರಲಿಲ್ಲ. ಅದೇ ರೀತಿ ಸಾಯಿಬಾಬಾರನ್ನು ಸಂತ ಕಬೀರರ ಅವತಾರ ಎಂದೂ ಹೇಳುವವರಿದ್ದಾರೆ.

ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ “ಶ್ರೀ ಸಾಯಿ ಸತ್‌ಚರಿತೆ”ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು.

ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್‌ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು. (ಶಿರಡಿ ಸಾಯಿಬಾಬಾ ಅವರ ಜನನವು ಪಾಥರಿ ಗ್ರಾಮದಲ್ಲಿ 1830ರ ಡಿಸೆಂಬರ್ 27ರಂದು ಆಗಿತ್ತು ಎಂದು ಸತ್ಯ ಸಾಯಿಬಾಬಾ ಅವರು ಹೇಳಿದ್ದಾರೆ.)


ಮೂಲ
1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್‌ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.


ಮೂಲ
1858ರಿಂದ 1918ರ ಅಕ್ಟೋಬರ್ 15ರಂದು ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು.

ದೇವರಿದ್ದಾನೆ ಎಂದು ಜನತೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಅವರು ಹಲವಾರು ಪವಾಡಗಳನ್ನು ಮಾಡಿದರು. ರೋಗ ಶಮನಗೊಳಿಸಿದರು. ತಮ್ಮ ಭಕ್ತರಿಗೆ ನೈತಿಕ ಆತ್ಮಬಲ ಮತ್ತು ಭೌತಿಕ ಬಲವನ್ನು ಒದಗಿಸಿದರು. ಎಲ್ಲಾ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಲು ಶ್ರಮಿಸಿದರು. ದೇವರೊಬ್ಬನೇ, ನಾಮ ಹಲವು ಎಂಬುದನ್ನ ಜನರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದರು. ನಿಮ್ಮದೇ ಧರ್ಮ ಅನುಸರಿಸಿ, ಸತ್ಯ ದರ್ಶನವಾಗುತ್ತದೆ ಎಂದು ಬೋಧಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಫೇಸ್ಬುಕ್’ನಲ್ಲಿ ಸಿಗಲಿದೆ ನಿರುದ್ಯೋಗಿಗಳಿಗೆ ಕೆಲಸ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ. ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಿದೆ. ಉಳಿದ 5000 ಮಂದಿ ಇತರ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ….

  • govt, Sports

    ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದರೇನು?

    ಕ್ರೀಡಾ ಮತ್ತು ಕ್ರೀಡಾಕೂಟದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಅಧಿಕೃತವಾಗಿ ಕರೆಯಲ್ಪಡುವ ರಾಜೀವ್ ಗಾಂಧಿ ಖೇಲ್ ರತ್ನ, ಇದು ಭಾರತದ ಗಣರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. 1984 ರಿಂದ 1989 ರವರೆಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.  ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ. ಸ್ವೀಕರಿಸುವವರನ್ನು (ಗಳು) ಸಚಿವಾಲಯವು ರಚಿಸಿದ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ…

  • budget

    ಕರ್ನಾಟಕ ಬಜೆಟ್

    – ಉದ್ಯೋಗ ಸಿಗದವರಿಗೆ ‘ಯುವಸ್ನೇಹಿ’ ಯೋಜನೆ ಘೋಷಣೆ; – ಪದವಿ ಶಿಕ್ಷಣವನ್ನು ಪೂರೈಸಿ ಮೂರು ವರ್ಷಗಳಾದರೂ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಕ್ಕಾಗಿ ‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ. ನೀಡಲಾಗುವುದು. ತುಮಕೂರು ಜಿಲ್ಲೆಯ ಚಿಕ್ಕನಾಯಕಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಆರಂಭ -ರಾಜ್ಯದಲ್ಲಿ ಹೊಸದಾಗಿ 2 NCC  ಘಟಕ ಸ್ಥಾಪನೆ -ಖಾನಪುರ, ಆನೇಕಲ್, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು…

  • ಉಪಯುಕ್ತ ಮಾಹಿತಿ

    ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೇ?ಹಾಗಿದ್ದರೆ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2000!ಈಗಲೇ ಈ ಮಾಹಿತಿ ನೋಡಿ

    ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ….

  • ವಿಚಿತ್ರ ಆದರೂ ಸತ್ಯ

    ಇವನಿಗೆ 12ಸಾವಿರ ವರ್ಷ ಜೈಲು ಶಿಕ್ಷೆ!ಶಾಕ್ ಆಯ್ತಾ?ಈ ಲೇಖನಿ ಓದಿ…

    ಈತನಿಗೆ 12 ಸಾವಿರ ವರ್ಷ ಜೈಲು ಶಿಕ್ಷೆ!ಏನು ಕಾಮಿಡಿ ಮಾಡುತ್ತಿದ್ದೇವೆ ಅನುಸುತ್ತೆ ಆಲ್ವಾ?ಅನ್ನಿಸಲೇಬೇಕು. ಯಾಕಂದ್ರೆ ಈಗಂತೂ ಒಬ್ಬ ಮನುಷ್ಯ ಬದುಕೋದು 60 ವರ್ಷನಾ 70ವರ್ಷನಾ ಅಂತ ಗ್ಯಾರಂಟಿ ಇಲ್ಲ. ಇನ್ನೂ 12 ಸಾವಿರ ವರ್ಷ ಅಂದ್ರೆ ನಗು ಬರದೆ ಇರುತ್ತಾ!

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

    ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…