ಉಪಯುಕ್ತ ಮಾಹಿತಿ

ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೇ?ಹಾಗಿದ್ದರೆ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2000!ಈಗಲೇ ಈ ಮಾಹಿತಿ ನೋಡಿ

421

ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಮೊದಲ ಕಂತಿನ ಹಣ ಆಧಾರ್ ಇಲ್ಲದೆ ಸಿಗಲಿದೆ. ಆದ್ರೆ ಎರಡನೇ ಕಂತಿನ ಹಣ ಪಡೆಯುವ ಮೊದಲು ರೈತ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಈವರೆಗೂ ಆಧಾರ್ ಕಾರ್ಡ್ ಹೊಂದಿರದ ರೈತರು ತಕ್ಷಣ ಆಧಾರ್ ಕಾರ್ಡ್ ಮಾಡಿಸಿಕೊಂಡಲ್ಲಿ ಯೋಜನೆ ಲಾಭ ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ಪಡೆಯುವುದು ದೊಡ್ಡ ಕೆಲಸವೇನಲ್ಲ. ವೆಬ್ ಸೈಟ್ ನಲ್ಲಿ ನಿಮಗೆ ಫಾರ್ಮ್ ಸಿಗಲಿದೆ. https://appointments.uidai.gov.in ವೆಬ್ ಸೈಟ್ ಗೆ ಹೋಗಿ ನೀವು ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬೇಕು. ಫಾರ್ಮ್ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದೇ ವೆಬ್ ಸೈಟ್ ನಲ್ಲಿ ಹತ್ತಿರ ಯಾವ ಯಾವ ಆಧಾರ್ ಕಾರ್ಡ್ ಸೆಂಟರ್ ಇದೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿಗೆ ಹೋಗಿ ಅರ್ಜಿ ಜೊತೆ ದಾಖಲೆ ನೀಡಿ ಆಧಾರ್ ಗೆ ಅರ್ಜಿ ಸಲ್ಲಿಸಬಹುದು.

ಆಧಾರ್ ಕಾರ್ಡ್, ಅಂಚೆ ಕಚೇರಿ ಮೂಲಕ ನಿಮ್ಮ ಮನೆಗೆ ಬರಲಿದೆ. ಒಂದು ವೇಳೆ ಅಂಚೆ ಕಚೇರಿ ಮೂಲಕ ಆಧಾರ್ ಕಾರ್ಡ್ ಮನೆಗೆ ಬರದೆ ಹೋದಲ್ಲಿ ವೆಬ್ ಸೈಟ್ ನಲ್ಲಿರುವ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬ್ರಾಹ್ಮಣ ರೂಪದಲ್ಲಿರುವ ಪಾಲಿಯ ಗಣೇಶ, ಬಲ್ಲಾಲೇಶ್ವರನನ್ನು ನೋಡಿದ್ದೀರಾ?ಇದರ ಇತಿಹಾಸವೇನು ಗೊತ್ತ.?

    ಅಷ್ಟವಿನಾಯಕ ದೇವಾಲಯಗಳಲ್ಲಿ ಪನ್ವೆಲ್‌ನಲ್ಲಿರುವ ಬಲ್ಲಾಲೇಶ್ವರ ದೇವಾಲಯವು ಪ್ರಮುಖವಾದದ್ದು, ಬ್ರಾಹ್ಮಣ ರೂಪದಲ್ಲಿರುವ ಗಣೇಶನ ವಿಶೇಷತೆ ಬಗ್ಗೆ ತಿಳಿಯಿರಿ. ಮುಂಬೈಯಲ್ಲಿರುವ ಪನ್ವೆಲ್‌ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ ನೀಲಿ ಮತ್ತು ಹಳದಿ ರಚನೆಯು ದೇವಾಲಯವನ್ನು ಹೋಲುವಂತಿಲ್ಲ, ಆದರೆ ಗಣೇಶ ಭಕ್ತರು ಮತ್ತು ನಿವಾಸಿಗಳು ಇದನ್ನು ಪನ್ವೆಲ್‌ನ ಅತ್ಯಂತ ಹಳೆಯ, ವಿಶೇಷ ಪೂಜಾ ಸ್ಥಳವೆಂದು ಪರಿಗಣಿಸಿದ್ದಾರೆ. ಮುಂಬೈಯಲ್ಲಿರುವ ಪನ್ವೆಲ್‌ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ…

  • inspirational

    ಕೇರಳದಲ್ಲಿ ಸಿಲುಕಿಕೊಂಡಿದ್ದ 177 ಯುವತಿಯರನ್ನು ತವರು ರಾಜ್ಯಕ್ಕೆ ಕಳುಹಿಸಿ ಮತ್ತೆ ಮಾನವೀಯತೆ ಮೆರೆದ ಸೋನು ಸೂದ್.

    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ…

  • ಸುದ್ದಿ

    ಅಹಮದಾಬಾದ್: ಬಿಸಿಲ ಬೇಗೆಯಿಂದ ಕಾರನ್ನು ತಂಪಾಗಿಸಲು ಮಹಿಳೆ ಮಾಡಿದ ಉಪಾಯವೇನು ಗೊತ್ತೆ?….ಇಲ್ಲಿದೆ ನೋಡಿ!

    ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ. ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ. ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ…

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಸುದ್ದಿ

    ದೇವರ ಆಶೀರ್ವಾದದಿಂದ ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ ಅಂತಹ ಕನಸು ಬರುತ್ತದೆ ಅಕಸ್ಮಾತ್ ಬಂದ್ರೆ ಅವರು ಕೋಟ್ಯಧಿಪತಿ ಆಗುವುದಂತೂ ಗ್ಯಾರಂಟಿ…ಅಷ್ಟಕ್ಕೂ ಆ ಕನಸು ಯಾವುದು.? ಇಲ್ಲಿ ಓದಿ…

    ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ  ಈ ಕನಸು ಬೀಳುತ್ತದೆ ಆದರೆ ಈ ಕನಸು ಬಿದ್ದರೆ ಮಾತ್ರ ನೀವು ಕೊಟ್ಯಧಿಪತಿ ಆಗೋದು ಅಂತೂ ಸತ್ಯ ಬಿಡಿ. ಹಾಗಾದ್ರೆ ಆ ಕನಸು ಯಾವುದು ಮತ್ತು ಈ ಕನಸು ಏಕೆ ಬೀಳುತ್ತೆ ಮತ್ತು ಯಾವ ಪುಣ್ಯ ಫಲ ಇದ್ದರೆ ಮಾತ್ರ ಈ ಕನಸು ಬೀಳುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಮರೆಯದೇ ಸಂಪೂರ್ಣ ಓದಿರಿ.  ಮನುಷ್ಯ ಅಂದಮೇಲೆ ಪ್ರತಿ ಒಬ್ಬರಿಗೆ ಸಹ ರಾತ್ರಿ ಮಲಗಿದ ಮೇಲೆ ಕನಸು ಬೀಳುತ್ತದೆ, ಕೆಲವು ಜನಕ್ಕೆ…