ಸುದ್ದಿ

11 ಕಿಮೀ‌ ಪ್ರಯಾಣ ಮಾಡಿ, ಹೆಲ್ಮೆಟ್ ತೆಗೆದು ನೋಡಿ ಶಾಕ್ ಆದ ಶಿಕ್ಷಕ. ಹೆಲ್ಮೆಟ್ ನಲ್ಲಿ ಏನಿತ್ತು.

91

ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ ಮಾಡಲು ಆಗಮಿಸಿದ್ದಾರೆ.

ಆದರೆ ಮತ್ತೊಂದು ಶಾಲೆಯ ಬಳಿ ಹೆಲ್ಮೆಟ್ ತೆಗೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಹೌದು ಹೆಲ್ಮೆಟ್ ತೆಗೆದು ನೋಡಿದಾಗ ವಿಷಕಾರಿ ಹಾವಿನ ಬಾಲ ಮಾತ್ರ ಸಿಕ್ಕಿದೆ.. ಹಾವಿನ ತಲೆ ರಂಜಿತ್ ಅವರ ತಲೆಯಿಂದ ಅಪ್ಪಚ್ವಿಯಾಗಿದೆ. ಹೌದು ಹೆಲ್ಮೆಟ್ ಒಳಗೆ ವಿಷಕಾರಿ ಹಾವೊಂದು ಸಿಕ್ಕಿಕೊಂಡಿತ್ತು.. ಅದನ್ನು ನೋಡದೆ ರಂಜಿತ್ ಹೆಲ್ಮೆಟ್ ಹಾಕಿಕೊಂಡಿದ್ದರು.. ಆದರೆ ಅವರ ಗಮನಕ್ಕೆ ಬಾರದೆ ಹಾವಿನ ತಲೆ ರಂಜಿತ್ ಅವರ ತಲೆಯಿಂದ ಅಪ್ಪಚ್ಚಿಯಾಗಿ ಸತ್ತಿದೆ.. ಬಾಲ ಮಾತ್ರ ಉಳಿದಿದೆ.. ಹೆಲ್ಮೆಟ್ ತೆರೆದು ನೋಡಿದಾಗ ಅದು ವಿಷಕಾರಿ ಹಾವಿನ ಬಾಲ ಎಂದು ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ..

ರಂಜಿತ್ ಅವರ ದೇಹದಲ್ಲಿ ವಿಷ ಸೇರಿರಬಹುದಾ ಎಂದು ಪರೀಕ್ಷೆ ಮಾಡಿಸಿದ್ದಾರೆ.. ಆದರೆ ಅದೃಷ್ಟವಶಾತ್ ಹಾವು ಕಚ್ಚಿರಲಿಲ್ಲ.. ಬದಲಾಗಿ ಅದೇ ಅಪ್ಪಚ್ಚಿಯಾಗಿ ಸತ್ತು ಹೋಗಿದೆ.. ಆನಂತರ ಮನೆಗೆ ಬಂದ ರಂಜಿತ್ ಹೆಲ್ಮೆಟ್ ಅನ್ನು ಸುಟ್ಟು ಹಾಕಿದ್ದಾರೆ. ಆತುರಾತುರವಾಗಿ ಶೂಗಳಾಗಲಿ‌ ಹೆಲ್ಮೆಟ್ ಗಳನ್ನಾಗಲಿ ಹಾಕಿಕೊಳ್ಳುವ ಮುನ್ನ ಒಳಗೇನಿದೆ ಎಂದು ಎರಡು ಸೆಕೆಂಡ್ ಗಮನಿಸಿ ನಂತರ ಬಳಸಿದರೆ ಇಂತಹ ಅನಾಹುತಗಳು ಆಗುವುದು ತಪ್ಪುತ್ತದೆ..


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಶ್ರೀಮಂತರಾಗಲು ಭಾರತದಲ್ಲಿವೆ ಅತೀ ಹೆಚ್ಚು ಹಣ ಪಡೆಯುವ ಕೆಲಸಗಳು..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ.

  • ಜ್ಯೋತಿಷ್ಯ

    ನರಸಿಂಹ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಕುಟುಂಬ…

  • ಸುದ್ದಿ

    ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!

    ನವದೆಹಲಿ: ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!ಇದು ಸಾಧ್ಯಾನಾ ಎಂದು ಮೂಗು ಮುರಿಯಬೇಡಿ.. ಖಂಡಿತಾ ಸಾಧ್ಯ. ಅದೂ ಕೂಡ ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ, ಹೌದು ಅಧ್ಯಯನವೊಂದರ ನಿಮಿತ್ತ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಣೆ ಮಾಡಿದೆ….

  • ಸುದ್ದಿ

    ಕಾರ್ನಾಡ್ ಅವರ ಕೊನೆಯ ಇಚ್ಚೆಯಂತೆ ಅಂತ್ಯಸಂಸ್ಕಾರ…….

    ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು. ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ…

  • ಆರೋಗ್ಯ

    ಕ್ಯಾರೆಟ್ ನ ಉಪಯೋಗಗಳು ಗೊತ್ತಾದ್ರೆ ಅಚ್ಚರಿ ಪಡ್ತಿರಾ.! ಈ ಮಾಹಿತಿ ನೋಡಿ.

    ಆರೋಗ್ಯ ತಜ್ಞರ ಪ್ರಕಾರ  ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಸಾಧ್ಯವಾದಷ್ಟು ತಮ್ಮ ಆಹಾರಕ್ರಮದಲ್ಲಿ ಕ್ಯಾರೆಟ್‌ನ್ನು ಸೇವಿಸಬೇಕಂತೆ. ಕ್ಯಾರೆಟ್ ಅನ್ನು ಹೆಚ್ಚಾಗಿ ಮಕ್ಕಳಿಗೆ ನೀಡಬೇಕು. ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ಅವರುಗಳಲ್ಲಿ ಮೂಳೆಗಳು ಸದೃಢಗೊಳ್ಳುತ್ತವೆ. ನಿತ್ಯದಲ್ಲೂ ಅವರಿಗೆ ಲಂಚ್ ಬಾಕ್ಸ್ಗಳಿಗೆ ಪೀಸ್ಗಳನ್ನೂ ಹಾಕಬೇಕು, ಅವರಿಗೆ 2 ದಿನೊಕೊಮ್ಮೆ ಅದರಲ್ಲಿ ಪಾಯಸ ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಚಿಕ್ಕ ತುಂಡುಗಳನ್ನು ಮಾಡಿ ಅದರ ಮೇಲೆ ಸ್ವಲ್ಪ ಉಪ್ಪು ಪೆಪ್ಪರ್/ ಮೆಣಸಿನ ಪುಡಿ ಹಾಕಿ…