ಸುದ್ದಿ

16ರ ಬಾಲಕಿಗೆ ಬಾಲ್ಯ ವಿವಾಹ ಸಂಬ್ರಮ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್……!

80

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ.

ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ.

ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ಬರಲಿದೆ ಎಂದ ವಿಜ್ಞಾನಿಗಳು..!ತಿಳಿಯಲು ಈ ಲೇಖನ ಓದಿ..

    ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ನಮ್ಮನ್ನು ಆವರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಮುಂದಿನ 30 ವರ್ಷಗಳಲ್ಲಿ ಭೂಮಿ ಮೇಲೆ ಮಂಜು ಯುಗ ಎಂಬುದು ಬರಲಿದೆ. ಮಂಜಿನ ಯುಗ ಇದು ಇತಿಹಾಸ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಫೆಬ್ರವರಿ, 2019) ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳಪುನಶ್ಚೇತನಕ್ಕೆ ಒಳ್ಳೆಯ…

  • India, Sports, ಕ್ರೀಡೆ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇಟೆಸ್ಟ್‌ಗೆ ಮಳೆ ಕಾಟ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ದಿನ ಮಳೆ ಕಾಟದಿಂದಾಗಿ ದಿನದಾಟ ಆರಂಭ ವಾಗಿಲ್ಲ ಈ ಪಂದ್ಯದಲ್ಲಿ ಜಯವನ್ನು ಸಾಧಿಸಲು ದಕ್ಷಿಣ ಆಫ್ರಿಕಾಕ್ಕೆ  122ರನ್ ಅಗತ್ಯ ಇದೆ.ಮಳೆಯಿಂದಾಗಿ ಭಾರತ ತಂಡಕ್ಕೆ ಜಯಗಳಿಸುವ ಅವಕಾಶವನ್ನು ಒದಗಿಸುತ್ತದೆ.ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 202ರನ್ ಗಳಿಸಿತು.ದಕ್ಷಿಣ ಆಫ್ರಿಕಾ 229ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 266ರನ್ಗಳಿಸಿತು.ಭಾರತ ದಕ್ಷಿಣ ಆಫ್ರಿಕಾಕ್ಕೆ 240ಗುರಿ ನೀಡಿದೆ.ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 118/2 ಗಳಿಸಿದೆ

    Loading

  • ಆಧ್ಯಾತ್ಮ

    ಪೂಜೆಗೆ ತೆಂಗಿನಕಾಯಿಯನ್ನೇ ಏಕೆ ಅರ್ಪಿಸುತ್ತಾರೆ?ಅದರ ಹಿಂದಿನ ಉದ್ದೇಶ ಏನು ಗೊತ್ತಾ ನಿಮ್ಗೆ?

    ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯು ಸನಾತನವಾಗಿದ್ದು, ನಮ್ಮ ಈ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನ ಕಾಯಿಗೆ ವಿಶೇಷವಾದ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಈ ಕಾರಣದಿಂದ ತೆಂಗಿನ ಕಾಯಿಗೆ ವಿಶೇಷ ಮಾಹತ್ವ, ಮಹಿಮೆ ಇದೆ.

  • ಸುದ್ದಿ

    884 ವರ್ಷಗಳಿಂದ ರಾಮಾನುಜಾಚಾರ್ಯರ ಮೂಲ ಶರೀರವನ್ನು ಯಾವುದೇ ರಾಸಾಯನಿಕಗಳ ಪ್ರಯೋಗವಿಲ್ಲದೆ ಸಂರಕ್ಷಿಸಿ ಇಡಲಾಗಿದೆ…!

    ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ. ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ…