ಸಿನಿಮಾ

‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಎಂಟ್ರಿ! ‘ಸಂತೋಷ್’ ಯಾರಿಗೆ?

99

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ ಹುಟ್ಟುಹಾಕಿದೆ.

‘ನರ್ತಕಿ’ ದರ್ಶನ್ ಗೆ ನೆಚ್ಚಿನ ಚಿತ್ರಮಂದಿರ ಕೆ.ಜಿ.ರಸ್ತೆಯಲ್ಲಿರುವ ಚಿತ್ರಮಂದಿರಗಳ ಪೈಕಿ ನರ್ತಕಿ ಚಿತ್ರಮಂದಿರ ದರ್ಶನ್ ಗೆ ಫೆವರೆಟ್. ಇದುವರೆಗೂ ದರ್ಶನ್ ಅಭಿನಯದ ಬಹುತೇಕ ಚಿತ್ರಗಳು ಅಲ್ಲಿಯೇ ತೆರೆಕಂಡಿದೆ.

ನರ್ತಕಿಯಲ್ಲಿ 'ರಾಜಕುಮಾರ' ಸವಾರಿ!

ನರ್ತಕಿಯಲ್ಲಿ ‘ರಾಜಕುಮಾರ’ ಸವಾರಿ! ಸದ್ಯ, ‘ನರ್ತಕಿ’ ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ಯಶಸ್ವಿ ಪ್ರದರ್ಶನವಾಗುತ್ತಿದೆ. ಹೀಗಾಗಿ, ಚಾಲೆಂಜಿಂಗ್ ಸ್ಟಾರ್ ಸಿನಿಮಾಗೆ ‘ನರ್ತಕಿ’ ಸಿಗುವುದು ಬಹುತೇಕ ಅನುಮಾನ

ಸಂತೋಷ್ ಚಿತ್ರಮಂದಿರದಲ್ಲಿ 'ಹೆಬ್ಬುಲಿ'

ಸಂತೋಷ್ ಚಿತ್ರಮಂದಿರದಲ್ಲಿ ‘ಹೆಬ್ಬುಲಿ’ ಇನ್ನು ‘ನರ್ತಕಿ’ ಬಿಟ್ಟರೇ ದರ್ಶನ್ ಸಿನಿಮಾಗಳು ತೆರೆಕಾಣುವುದು ಅಲ್ಲೆ ಪಕ್ಕದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ. ಆದ್ರೆ, ಸಂತೋಷ್ ಚಿತ್ರಮಂದಿರಲ್ಲಿ ಸದ್ಯ, ಸುದೀಪ್ ಅಭಿನಯದ ‘ಹೆಬ್ಬುಲಿ’ ಪ್ರದರ್ಶನವಾಗುತ್ತಿದೆ.

‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಸಂತೋಷ್ ಚಿತ್ರಮಂದಿರದಲ್ಲಿ `ಹೆಬ್ಬುಲಿ’ 40 ದಿನಗಳನ್ನು ಪೂರೈಸಿ 50 ನೇ ದಿನದತ್ತ ದಾಪುಗಾಲಿಟ್ಟಿದೆ. ‘ಹೆಬ್ಬುಲಿ’ 50 ದಿನ ಪೂರೈಸಿದ ಬಳಿಕ ಸಂತೋಷ್‌ ಚಿತ್ರಮಂದಿರದಲ್ಲಿ ದರ್ಶನ್ ‘ಚಕ್ರವರ್ತಿ’ ಬರಲಿದ್ದಾನಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ