ರೆಸಿಪಿ

ರುಚಿ ರುಚಿಯಾದ ಬಾದುಷ ಮಾಡುವ ವಿಧಾನ ತಿಳಿಯಿರಿ…

2408

 

ಸಿಹಿ ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಬಾದುಶ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯೋಮಾನದವರು ಸಹ ಇಷ್ಟ ಪಡುತ್ತಾರೆ. ನೀವೂ ಮನೆಯಲ್ಲೇ ಬಿಸಿಯಾದ ರುಚಿಯಾದ ಬಾದುಶವನ್ನು ತಯಾರಿಸಬಹುದು. ತಿಳಿಯಲು ಮುಂದೆ ಓದಿ…

ಬೇಕಾಗುವ ಪದಾರ್ಥಗಳು…

  • ಮೈದಾಹಿಟ್ಟು – 2 ಬಟ್ಟಲು
  • ಅಡುಗೆ ಸೋಡಾ – ಚಿಟಿಕೆ
  • ಮೊಸರು- ಕಾಲು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಡಾಲ್ಡಾ (ತುಪ್ಪ) – ಅರ್ಧ ಬಟ್ಟಲು
  • ಎಣ್ಣೆ – ಕರಿಯಲು
  • ಸಕ್ಕರೆ – 1 1/2 ಬಟ್ಟಲು

ಮಾಡುವ ವಿಧಾನ…

  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು.
  • ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. ಪಾಕ ತಯಾರಾದ ಬಳಿಕ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಬೇಕು.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.
  • ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಗಾತ್ರಕ್ಕೆ ತಟ್ಟಿ, ಉಂಡೆ ಮಧ್ಯೆ ಬೆರಳಿನಿಂದ ಹಳ್ಳ ಮಾಡಬೇಕು. (ಹಳ್ಳ ಮಾಡುವುದರಿಂದ ಎಣ್ಣೆಗೆ ಹಾಕಿದಾಗ ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಸಹಾಯವಾಗುತ್ತದೆ).
  • ಎಣ್ಣೆಯನ್ನು ಬಹಳ ಕಾಯಿಸಬಾರದು. ಸ್ವಲ್ಪ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿಯೇ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು. ನಂತರ ಪಾಕಕ್ಕೆ ಇದನ್ನು ಹಾಕಿ 5 ನಿಮಿಷಗಳ ನಂತರ ತೆಗೆದರೆ ರುಚಿಕರವಾದ ಬಾದುಷ ಸವಿಯಲು ಸಿದ್ಧ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • govt

    ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ

    ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ. ಈ ಡೈರೆಕ್ಟ್‌ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ.! ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಿಮ್ಮ ಸ್ಕ್ರೀನ್‌ ಮೇಲೆ ಡಿಸ್ಪ್ಲೇ ಆಗಲಿದೆ. ಇದನ್ನು ಜಾಗರೂಕರಾಗಿ ಓದಿ ಅರ್ಜಿ ತುಂಬಿರಿ. https://drive.google.com/file/d/1-14JW0nJ2hfXT-TAHsIykVdha9D9_eZC/view ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ. ಆದರೆ, ಈ ಯೋಜನೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಗುರುವಾರ 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ…

  • ಸುದ್ದಿ

    ‘ಸೋಷಿಯಲ್ ಮೀಡಿಯಾ’ ಬಳಸುವ ಮುನ್ನಾ ಬಾರಿ ಎಚ್ಚರದಿಂದಿರಿ..!ಯಾಕೆ ಗೊತ್ತಾ?

    ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ ನಮ್ಮ ಭಾರತ. ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾ ಹಂಚಿಕೊಳ್ಳುವ ಬೇಡಿಕೆಗೆ ಸಂಬಂಧಿಸಿದಂತೆ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ…

  • ಸಂಬಂಧ

    ಈ ಲೇಖನವನ್ನು ವಿಶೇಷವಾಗಿ ಗಂಡು ಮಕ್ಕಳು ಓದಲೇಬೇಕು..!ನಿಮಗೆ ಈ ಲೇಖನ ಇಷ್ಟ ಆದ್ರೆ ಮರೆಯದೇ ಶೇರ್ ಮಾಡಿ..

    ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು. ಮೂಲ ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು. ಮೂಲ ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ…

  • ಆರೋಗ್ಯ

    ಈರುಳ್ಳಿ ಸಿಪ್ಪೆಯ ನಂಬಲೂ ಸಾಧ್ಯವಿಲ್ಲದ ಉಪಯೋಗಗಳ ನಿಮ್ಗೆ ಗೂತ್ತಾ..?ತಿಳಿಯಲು ಈ ಲೇಖನ ಓದಿ….

    ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.

  • ದೇಶ-ವಿದೇಶ

    ಭಾರತದ ಕಾಳಧನಿಕರಲ್ಲಿ ನಡುಕ ಹುಟ್ಟಿಸಿದೆ, 2018ರ ಸ್ವಿಸ್ ಬ್ಯಾಂಕ್’ನ ಈ ನಿರ್ಧಾರ ? ಮುಂದೆ ಓದಿ…..

    ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್

  • ಜ್ಯೋತಿಷ್ಯ

    ಲಕ್ಷ್ಮೀದೇವಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

      ಮೇಷ ರಾಶಿ ಭವಿಷ್ಯ (Friday, December 3, 2021) ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು…