ಸುದ್ದಿ

ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರಿಂದ ಡ್ರೈವಿಂಗ್ ಟೆಸ್ಟ್‌ಗೆ ನಿರ್ಬಂಧ ಮಾಡಿದ ಆರ್‌ಟಿಓ ಅಧಿಕಾರಿಗಳು…!

16

ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು.

ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ ಧರಿಸಿಕೊಂಡು ಬಂದೆ ಎಂದು ಪವಿತ್ರಾ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕಾಲೇಜು ವಿದ್ಯಾರ್ಥಿನಿ ಸುಮತಿ ಮನೆಗೆ ವಾಪಸ್ಸಾಗಿ ಬೇರೆ ಬಟ್ಟೆ ಧರಿಸಿ ಆರ್‌ಟಿಓ ಕಚೇರಿಗೆ ಬಂದಿದ್ದರು. ಅಂದು ಸುಮತಿ ಬರ್ಮುಡಾ ಹಾಗೂ ಶರ್ಟ್ ಧರಿಸಿದ್ದರು. ಹೀಗಾಗಿ ಮತ್ತೆ ಮನೆಗೆ ತೆರಳಿ ನಿಯತ್ತಾದ ಡ್ರೆಸ್ ಧರಿಸಿ ಬಂದಿದ್ದರು. ಇದಕ್ಕೂ ಮೊದಲು ಡ್ರೆಸ್ ಕುರಿತಂತೆ ಸುಮತಿ ಹಾಗೂ ಇನ್ಸ್ ಪೆಕ್ಟರ್ ಮಧ್ಯೆ ವಾಗ್ವಾದ ನಡೆದಿತ್ತು. ಇವರಿಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆಯೇ ಇನ್ಸ್ ಸ್ಪೆಕ್ಟರ್ ಸಹೋದ್ಯೋಗಿಗಳು ಸ್ಥಳದಲ್ಲಿ ಜಮಾಯಿಸಿ ಸಮಜಾಯಿಷಿ ನೀಡಿದ್ದಾರೆ.

ಲೈಸೆನ್ಸ್ ಸಿಗುವ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ಮತ್ತೆ ಮನೆಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಬಂದೆ ಎಂದು ಸುಮತಿ ತಿಳಿಸಿದ್ದಾರೆ.ಈ ಬಗ್ಗೆ ವಕೀಲ ವಿ. ಎಸ್ ಸುರೇಶ್ ಮಾತನಾಡಿ, ಡ್ರೈವಿಂಗ್ ಟೆಸ್ಟ್ ಗೆ ಇಂತದ್ದೇ ಡ್ರೆಸ್ ಹಾಕಿಕೊಂಡು ಬರಬೇಕೆಂಬ ನಿಯಮ ಕಾನೂನಿನಲ್ಲಿ ಇಲ್ಲ. ಆದರೆ ಲೈಸೆನ್ಸ್ ಸಿಗಬೇಕಾದರೆ ವ್ಯಕ್ತಿಗೆ 18 ವರ್ಷ ಆಗಿರಬೇಕು ಅಷ್ಟೇ ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ