ಮನರಂಜನೆ

ಬಿಗ್ ಬಾಸ್-5ರ ಪಟ್ಟ ಯಾರಿಗೆ.?ಕಾಮಾನ್ ಮ್ಯಾನ್ Vs ಸೆಲೆಬ್ರೆಟಿಸ್!ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ ಏನು ಗೊತ್ತಾ?ಇಲ್ಲಿದೆ ಪೂರ್ತಿ ವಿವರ,ತಿಳಿಯಲು ಮುಂದೆ ಓದಿ…

601

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ‌ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.

ಹೌದು, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸಮೀರ್ ಆಚಾರ್ಯವರನ್ನು ಎಲಿಮಿನೇಟ್ ಮಾಡುವ ಮುಖಾಂತರ ಉಳಿದ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಸಂಚಿಕೆ 5ರ ಫೈನಲ್ ತಲುಪಿದ್ದಾರೆ. ದಿವಾಕರ್,ನಿವೇದಿತಾ ಗೌಡ,ಶ್ರುತಿ ಪ್ರಕಾಶ್,ಜಯರಾಂ ಕಾರ್ತಿಕ್,ಮತ್ತು ಚಂದನ್ ಶೆಟ್ಟಿ ಈ 5 ಜನರ ಗ್ರಾಂಡ್ ಪಿನಾಲೆ ತಲುಪಿದ್ದಾರೆ.

ಬಿಗ್ ಬಾಸ್ ಸಂಚಿಕೆ 5ರ ಪಟ್ಟಕ್ಕೆ ನೆನ್ನೆಯಿಂದಲೇ ವೋಟಿಂಗ್ ಶುರುವಾಗಿದೆ.ಈ 5 ಜನರಲ್ಲಿ ದಿವಾಕರ್ ಉಳಿದಂತೆ 4 ಜನ ಸೇಲೆಬ್ರೆಟಿಗಳಾಗಿದ್ದು, ಕಾಮನ್ ಮ್ಯಾನ್ Vs ಸೇಲೆಬ್ರೆಟಿಸ್ ಇವರಲ್ಲಿ ಯಾರೂ ಗೆಲ್ಲುತ್ತಾರೆಂಬ ಕುತೂಹಲ ಜನರಲ್ಲಿ ಇಮ್ಮಡಿಗೊಂಡಿದೆ.ಹಾಗಾದ್ರೆ ವೀಕ್ಷಕರು ಹೇಳುವ ಪ್ರಕಾರ ಯಾರು ಗೆಲ್ಬೇಕು ಎಂಬ ವಿವರ ಇಲ್ಲಿದೆ ಮುಂದೆ ನೋಡಿ…

ನಿವೇದಿತಾ ಗೌಡ:-  

ನಿವೇದಿತಾ ಗೌಡ ಹುಟ್ಟಿದ್ದು ಮತ್ತು ಬೆಳೆದಿದ್ದು ಮೈಸೂರಿನಲ್ಲಿಯೇ. ಆದರೂ ಆಕೆಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಏಕೆಂದರೆ ಆಕೆ ಓದಿದ ಶಾಲೆ ಅಟಾಮಿಕ್ ಎನರ್ಜಿ ಸ್ಕೂಲಿನಲ್ಲಿ. ಶಾಲೆಯಲ್ಲಿ ಕನ್ನಡ ಇಲ್ಲದ ಕಾರಣ ಕನ್ನಡ ಬರೆಯಲು ಗೊತ್ತಿಲ್ಲ, ಶಾಲೆಯಲ್ಲಿ ಮಾತಾಡಲು ಸಹ ಇಲ್ಲದಿರುವುದರಿಂದ ಕನ್ನಡ ಆಕೆಗೆ ಮಾತಾಡಲು ತುಂಬ ಕಷ್ಟ. ಮನೆಯಲ್ಲಿ ಕನ್ನಡ, ಶಾಲಾ ಕಾಲೇಜ್ನಲ್ಲಿ ಇಂಗ್ಲಿಷ್, ಇವೆರಡು ಮಿಶ್ರಣವಾಗಿ ಇಂಗ್ಲಿಷ್ ಸ್ಟೈಲಿನ ಕನ್ನಡ ಮಾತನಾಡುತ್ತಾರೆ. ನಿವೇದಿತಾ ಈಗ ಮೈಸೂರಿನ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ವಯಸ್ಸು 18. ಬಿಗ್ಬಾಸ್ ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನ ಸ್ಪರ್ಧಿಯಾಗಿದ್ದಾರೆ.ತಂದೆ ರಮೇಶ್ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಬ್ಬ ಕಿರಿಯ ಸಹೋದರ ಇದ್ದಾನೆ.

ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ ‘ಬಿಗ್ ಬಾಸ್’ ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದು, ಟಾಪ್ 5ರಲ್ಲಿ ತಮ್ಮ ಸ್ಥಾನ ಗಳಿಸುವ ಮೂಲಕ ಮೋಡಿ ಮಾಡಿದ್ದಾರೆ.

ಜಯರಾಂ ಕಾರ್ತಿಕ್:-

ಜಯರಾಂ ಕಾರ್ತಿಕ್ ಒಬ್ಬ ನಟನಾಗಿದ್ದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ 2012-15ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ “ಸೂಪರ್‍ಸ್ಟಾರ್” ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.2014 ರಲ್ಲಿ ತೆರೆಕಂಡ  ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಸ್ಪರ್ದಿಸಿದ್ದ ಇವರು, ಈಗ ಟಾಪ್ 5 ತಲುಪುವ ಮೂಲಕ ಬಿಗ್ ಬಾಸ್ ಪಟ್ಟ ಗೆಲ್ಲುವಲ್ಲಿ ಮುನ್ನುಗ್ಗುತ್ತಿದ್ದಾರೆ.

ಚಂದನ್ ಶೆಟ್ಟಿ:-

ಚಂದನ್ ಶೆಟ್ಟಿ, ಇದು 2012ರಿಂದಲೇ ಕನ್ನಡ ಸಿನಿಮಾಗಳಲ್ಲಿ ಕೇಳುತ್ತಿದ್ದ, ಕಾಣುತ್ತಿದ್ದ ಹೆಸರು. ಹಾಡುಗಳನ್ನು ಬರೆಯುವ, ಹಾಡುವ ಮತ್ತು ಸಂಗೀತ ಸಂಯೋಜಿಸುವ ಚಂದನ್ ಶೆಟ್ಟಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರೂ ಒಂದು ಐಡೆಂಟಿಟಿ ಎಂದು ಕೊಟ್ಟಿದ್ದು ‘ಧಮ್ ಪವರ್ರೇ…’ ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಚಿತ್ರದ ಈ ಶೀರ್ಷಿಕೆ ಗೀತೆ ಬರೆದು, ಹಾಡಿದ ಚಂದನ್ ಒಮ್ಮೆಲೇ ಲೈಮ್‌ಲೈಟ್‌ಗೆ ಬಂದರು.
ಹಾಸನ ಚಂದನ್ ಹುಟ್ಟೂರಾದರೂ ಬೆಳೆದಿದ್ದು ಸಕಲೇಶಪುರದಲ್ಲಿ. ಅಲ್ಲಿ ಹೈಸ್ಕೂಲ್ ಮುಗಿಸಿ ಪುತ್ತೂರಲ್ಲಿ ಪಿಯು ಓದಿ, ಮೈಸೂರಿಗೆ ಬಂದು ಬಿಬಿಎಂ ಮುಗಿಸಿದರು. ಉದ್ಯೋಗದ ಬೆನ್ನು ಹತ್ತಿ ಕಾಲ್‌ಸೆಂಟರ್‌ನಲ್ಲಿ ಒಂದು ವರ್ಷ ಕೆಲಸವನ್ನೂ ಮಾಡಿದರು.

ಸಂಗೀತದ ಕಡೆಗೆ ಸೆಳೆಯುತ್ತಿದ್ದ ಮನಸು ಕಾಲ್‌ಸೆಂಟರ್ ಬಿಡಿಸಿತು. ಬೆಂಗಳೂರಲ್ಲಿ ಯಾವುದಾದರೂ ನೌಕರಿ ಹಿಡಿದರೆ ಸಂಗೀತವನ್ನೂ ಜೊತೆಯಲ್ಲೇ ತೂಗಿಸಿಕೊಂಡು ಹೋಗಬಹುದು ಎಂದುಕೊಂಡು ಬೆಂಗಳೂರಿಗೆ ಬಂದರು.ಕಂಡ ಕನಸು ಕೈಗೂಡಿದಂತೆ ಅರ್ಜುನ್ ಜನ್ಯ ಅವರ ಶಿಷ್ಯತ್ವವೂ ಸಿಕ್ಕಿತು. ಅವರ ಜೊತೆ ಚಂದನ್ ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ‘ಅಲೆಮಾರಿ’ ಚಿತ್ರದಲ್ಲಿ ಹಾಡುವ ಮೂಲಕ ಚಂದನ್ ಹಾಡಿನ ಬಂಡಿಯೂ ಆರಂಭವಾಯಿತು.ಹೀಗೆ ತಮ್ಮ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ಇವರು ಬಿಗ್ ಬಾಸ್’ನಲ್ಲಿ ಸ್ಪರ್ದಿಸಿ ಟಾಪ್ 5ರ ಹಂತಕ್ಕೆ ತಲುಪಿ, ಇವರು ಕೂಡ ಬಿಗ್ ಬಾಸ್ ಸಂಚಿಕೆ 5ರ ಗೆಲ್ಲುವ ಕುದುರೆ ಎಂದು ಹೇಳಲಾಗುತ್ತಿದೆ.

ಶ್ರುತಿ ಪ್ರಕಾಶ್ :-

ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್, ಬೆಳಗಾವಿಯಲ್ಲಿ ಹುಟ್ಟಿದ, ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ ‘ಬಿಗ್ ಬಾಸ್’ ಒಂದು ಒಳ್ಳೆಯ ವೇದಿಕೆಯಾಗಿದ್ದು, ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ ಕೂಡ.ಜಯರಾಂ ಕಾರ್ತಿಕ್ ಜೊತೆ ತುಂಬಾ ಸ್ನೇಹದಿಂದ ಇವರ ಮೇಲೆ, ಜಯರಾಂರವರನ್ನು ಪ್ರೀತಿಸುತ್ತಿದ್ದಾರೆಯೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.ಇವರೂ ಕೂಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಟಪ್ 5ರ ಸ್ಪರ್ದಿಯಾಗಿದ್ದು ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಸೇಲ್ಸ್ ಮ್ಯಾನ್’ ದಿವಾಕರ್ “:-

ಸೊಂಟ ನೋವು, ತಲೆನೋವು… ದೇಹದ ಯಾವುದೇ ನೋವಿರಲಿ… ನೆಗಡಿ, ಶೀತ, ಕೆಮ್ಮು.. ನಿಮಗೆ ಏನೇ ಆದರೂ… ಇವರ ಹತ್ತಿರ ಇದೆ ಔಷಧಿ. ಇವರೇ ಆಯುರ್ವೇದ ಪ್ರಾಡೆಕ್ಟ್ ಸೇಲ್ಸ್ ಮ್ಯಾನ್ ದಿವಾಕರ್. ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸ ಇಲ್ಲ. ಎಮ್ಮೆ ಮೇಯಿಸುವುದರಿಂದ ಹಿಡಿದು ಹೋಟೆಲ್ ನಲ್ಲಿ ಕೆಲಸ, ಕೂಲಿ ಕೆಲಸ, ಗಾರೆ ಕೆಲಸ ಕೂಡ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ.

ಇಷ್ಟೊಂದು ಕಷ್ಟಗಳಲ್ಲಿಯೇ ಬೆಳೆದು ಬಂದಿರುವ ಕಾಮಾನ್ ಮ್ಯಾನ್ ದಿವಾಕರ್ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಭಾಗವಹಿಸಿ, ಘಟಾನುಘಟಿ ಸೇಲೆಬ್ರೆಟಿಗಳ ಜೊತೆ ಸ್ಪರ್ದಿಸಿ ತಮ್ಮ ಪರಿಶ್ರಮದಿಂದ ಟಾಪ್ 5ರ ಹಂತ ತಲುಪಿದ್ದಾರೆ.ಬಿಗ್ ಬಾಸ್ ಪಟ್ಟ ಒಲಿಸಿಕೊಳ್ಳುವಲ್ಲಿ ಇವರು ಸೇಲೆಬ್ರೆಟಿಗಳಿಗಿಂತ ಮುಂದೆ ಇದ್ದು,ಗೆಲ್ಲುವ ನೆಚ್ಚಿನ ಸ್ಪರ್ದಿಯಾಗಿದ್ದಾರೆ.

ಜನರ ಅಭಿಪ್ರಾಯದ ಪ್ರಕಾರ ದಿವಾಕರ್’ರವರಿಗೆ ಹೆಚ್ಚಿಗೆ ವೋಟ್ ಮಾಡಿ ಗೆಲ್ಲಿಸಿ ಎಂದು ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಶುರುವಾಗಿದೆ.ನಮ್ಮ ಪ್ರಕಾರ ತುಂಬಾ ಕಷ್ಟದಿಂದಲೇ ಬಂದಿರುವ ಕಾಮನ್ ಮ್ಯಾನ್ ದಿವಾಕರ್ ಗೆದ್ದರೆ, ಅದು ಕಾಮನ್ ಮ್ಯಾನ್ ಸಿಕ್ಕ ಗೆಲುವಾಗುತ್ತದೆ.

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಪರಮೇಶ್ವರಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ನಿಮ್ಮ…

  • ಕರ್ನಾಟಕ

    ಅಮರಶಿಲ್ಪಿ ಜಕಣಾಚಾರಿ ಬಗ್ಗೆ ನಿಮ್ಗೆ ಗೊತ್ತಿಲ್ಲದ ಕೆಲವು ನಿಗೂಡ ಸತ್ಯಗಳು..!

    ಅಮರಶಿಲ್ಪಿ ರವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ.

  • ಸುದ್ದಿ

    ಚಳ್ಳಕೆರೆಯ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಪ್ರಯತ್ನ…..!

    ಒಂದೇ ಕುಟುಂಬದ ಐವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯ ನೆಹರು ಸರ್ಕಲ್ ಬಳಿ ನಡೆದಿದೆ. ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಶಿಲ್ಪಾ ಹಾಗೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಐವರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದು, ಖಾಲಿ ನಿವೇಶನದ ಹಕ್ಕು ಪತ್ರ ಮಾಡಿಕೊಡದೆ ಆರು ತಿಂಗಳಿಂದ ಸತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಓ ಪ್ರತಿಭಾ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ನಿರ್ಲಕ್ಷ್ಯಕ್ಕೆ ಮನನೊಂದು ಕುಟುಂಬ ಈ ನಿರ್ಧಾರ…

  • ಉಪಯುಕ್ತ ಮಾಹಿತಿ

    ನೀವು ಕೀ ಇಲ್ಲದೆಯೇ ಬೀಗವನ್ನು ತೆರೆಯಬಹುದು..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಕೆಲುವು ಸಮಯದಲ್ಲಿ ಬೀಗದ ಕೈ ಕಳೆದು ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?. ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈ ಬೇಕಾಗುತ್ತದೆ.

  • ಉಪಯುಕ್ತ ಮಾಹಿತಿ

    ಸಿಇಟಿ ಫಲಿತಾಂಶ ಪ್ರಕಟಣೆ: ಇಂಜಿನಿಯರಿಂಗ್‌ನಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ತಾನ…!

    ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದಲ್ಲಿಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು (ಪ್ರಥಮ) ಪಡೆದಿದ್ದಾರೆ. ಇವರು ಬೆಂಗಳೂರಿನ ಚೈತನ್ಯ ಟೆಕ್ನೋ…

  • ಸುದ್ದಿ

    ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಿರುವ ಮಹಿಳೆ ಈಗ 1 ಕೋಟಿಯ ಒಡತಿ,.! ಏಗೆ ಗೊತ್ತಾ.?

    ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ…