ಉಪಯುಕ್ತ ಮಾಹಿತಿ

ಗರ್ಭಿಣಿಯರಿಗೆ ವರದಾನವಾಗಿರುವ ಮಾತೃಪೂರ್ಣ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲಾ ತಾಯಿಂದಿರಿಗೆ ಉಪಯೋಗವಾಗಲಿ..

532

ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಶಿಶು ಮರಣ  ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾ‍ಟಕ ಸರ್ಕಾರದ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.

ಮಾತೃಪೂರ್ಣ ಯೋಜನೆಯ ಪ್ರಮುಖ ಅಂಶಗಳು :-

ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ ಈ ಯೋಜನೆಯಡಿ,  ನೊಂದಾಯಿತ ಎಲ್ಲಾ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಿಂಗಳಿಗೆ 25 ದಿನದಂತೆ ವರ್ಷದಲ್ಲಿ 3೦೦ ದಿನ ನಿತ್ಯ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಉಚಿತ ಪೌಷ್ಟಿಕಾಂಶಯುಕ್ತ ಬಿಸಿಯೂಟ ವಿತರಿಸಲಾಗುತ್ತದೆ.

ಮಾತೃಪೂರ್ಣ ಮೆನು :-

ಈ ಯೋಜನೆಯಡಿ ನೀಡಲಾಗುವ ಬಿಸಿಯೂಟದಲ್ಲಿ ಅನ್ನ, ಸಾಂಬಾರ್, ಬೇಯಿಸಿದ ಮೊಟ್ಟೆ, ಪಲ್ಯ, 200 ಮಿಲಿ ಹಾಲು, ಶೇಂಗಾ ಚಿಕ್ಕಿ (ಮಿಠಾಯಿ) ಸೇರಿರುತ್ತದೆ. ಮೊಟ್ಟೆ ಸೇವಿಸದವರಿಗೆ ಮೊಳಕೆ ಕಾಳು ನೀಡಲಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ  ದಿನಕ್ಕೆ ಅಗತ್ಯವಿರುವ ಶೇ 4೦ ರಿಂದ 45 ರಷ್ಟು ಪ್ರೋಟೀನ್, ಕ್ಯಾಲರಿ ಮತ್ತು ಕ್ಯಾಲ್ಸಿಯಂ ಈ ಒಂದು ಹೊತ್ತಿನ ಊಟದಿಂದ ದೊರಕುತ್ತದೆ. ಜೊತೆಗೆ ಕಬ್ಬಿಣಾಂಶಯುಕ್ತ ಮಾತ್ರೆಯನ್ನು ನೀಡಲಾಗುತ್ತಿದ್ದು, ಊಟವಾದ ಬಳಿಕ ಕಡ್ಡಾಯವಾಗಿ ಸೇವಿಸುವಂತೆ ಸೂಚಿಸಲಾಗುತ್ತದೆ.

ಗರ್ಭಿಣಿಯರ ನೊಂದಣಿಯಿಂದ ಅವರಿಗೆ ಪ್ರಸವಪೂರ್ವ ಆರೈಕೆ ಸೇವೆಗಳು ದೊರಕುತ್ತದೆ. ಇಲ್ಲಿ ಹೆರಿಗೆಯ ಅನುಭವ ಹೊಂದಿರುವವರು ಮತ್ತು ಅನುಭವಿಗಳು ಒಂದೆಡೆ ಸೇರುವುದರಿಂದ ಅನುಭವ ಹಂಚಿಕೆ ಸಾಧ್ಯವಾಗುತ್ತದೆ. ಈ ವೇಳೆ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಸ್ತನ್ಯ ಪಾನದ ಮಹತ್ವ, ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು, ನಿಯಮಿತ ವೈದ್ಯಕೀಯ ತಪಾಸಣೆ, ವಿಶ್ರಾಂತಿ ಮುಂತಾದ ಅಗತ್ಯ ಮಾಹಿತಿ ನೀಡಲಾಗುತ್ತದೆ. ಪ್ರಸ್ತುತ ಗರ್ಭಿಣಿಯರು ಇರುವ ಮನೆಗೆ ಅಕ್ಕಿ, ಗೋಧಿ ಮುಂತಾದ ಧಾನ್ಯ ಪದಾರ್ಥಗಳನ್ನು ನೀಡುವ ಯೋಜನೆ ಜಾರಿಯಲ್ಲಿದೆ.

ಯೋಜನೆಯ ಉದ್ದೇಶಗಳು :-

  • ಶಿಶು ಮರಣ ಮತ್ತು ತಾಯಿಂದಿರು ಮರಣ ಹೊಂದುವ ಪ್ರಮಾಣ ತಗ್ಗಿಸುವುದು.
  • ಗರ್ಭಿಣಿಯರಲ್ಲಿ ಪೌಷ್ಟಿಕತೆ ಹೆಚ್ಚಿಸಲು.
  • ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ತಗ್ಗಿಸುವುದು.
  • ರಕ್ತಹೀನತೆ ಅಪೌಷ್ಟಿಕ ಪ್ರಮಾಣ ಕಡಿಮೆ ಮಾಡುವುದು.
  • ಗರ್ಭಿಣಿಯರ 100 ಕಬ್ಬಿಣಾಂಶದ ಮಾತ್ರೆಗಳ ಸೇವನೆ ಖಚಿತ ಪಡಿಸಿಕೊಳ್ಳುವುದು.
  • ಅಂಗನವಾಡಿ ಕೇಂದ್ರಗಳಲ್ಲಿ ತಾಯಿಂದಿರ ನೋಂದಣಿ ಹೆಚ್ಚಾಗುವಂತೆ ಮಾಡುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸೆಕೆಯನ್ನು ತಡೆಯಲಾಗದೆ ಬೆತ್ತಲೆಯಾಗಿ Scooty ಓಡಿಸಿಕೊಂಡು ರಸ್ತೆಗಿಳಿದ…!

    ಇದು ಜರ್ಮನಿಯಲ್ಲಿ ಕಂಡು ಬಂದಂತಹ ಒಂದು ಪ್ರಸಂಗ. ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಹೊರ ಹೊರಟಿದ್ದ. ಆದರೆ ಅವನಿಗೆ ಸೆಕೆ ತಡೆಯಲಾಗಲಿಲ್ಲ. ಹೀಗಾಗಿ ಉಟ್ಟ ಬಟ್ಟೆ ಕಿತ್ತೆಸೆದು ಹೆಲ್ಮೆಟ್ ಮತ್ತು ಚಪ್ಪಲಿಯನ್ನು ಧರಿಸಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ರಸ್ತೆಗಿಳಿದ. ಇದೇನು ನಡೆಯುತ್ತಿದೆ ಎಂದು ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ, ಆತನ ಮುಂದೆ ಪೊಲೀಸರು ಪ್ರತ್ಯಕ್ಷರಾದರು. ನನಗೆ ಸೆಕೆ ತಡೆಯಲಾಗಲಿಲ್ಲ, ಹೀಗಾಗಿ ಬಟ್ಟೆ ಕಿತ್ತೆಸೆದು ಬಂದೆ ಎಂದಾತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಪೊಲೀಸರು ಸಹ ಆತನನ್ನು ತಡೆಯದಾದರು. ಬಳಿಕ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ.

    ದಿನಭವಿಷ್ಯ 7ಡಿಸೆಂಬರ್, 2018 ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ ಇಂದು ನೀವು ಒಂದು ಹೃದಯ ಒಡೆಯುವುದನ್ನುತಪ್ಪಿಸುತ್ತೀರಿ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಪ್ರವಾಸಗಳು ಮತ್ತು…

  • ಆರೋಗ್ಯ

    ಅಂಜೂರ ಹಣ್ಣು ಮನುಷ್ಯನ ದೇಹಕ್ಕೆ ಎಷ್ಟೊಂದು ಲಾಭವಿದೆ ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಅಂಜೂರ ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯಾಗಿದೆ. ಇದರ ಸೇವನೆಯನ್ನು ಮಾಡೋದ್ರಿಂದ ಸಿಗುವ ಆರೋಗ್ಯಕಾರಿ ಲಾಭಗಳು ಯಾವುವು ಅನ್ನೋದು ಮುಂದೆ ನೋಡಿ.

  • ರಾಜಕೀಯ

    20ವರ್ಷ ಸೋಲೇ ಇಲ್ಲದ, ದೇಶದ ಪ್ರಾಮಾಣಿಕ ಬಡ ಮಾಜಿ ಮುಖ್ಯಮಂತ್ರಿಯ ಆಸ್ತಿ ಎಷ್ಟು ಗೊತ್ತೇ..?ಈಗ ಅವರು ಎಲ್ಲಿ ಹೇಗೆ ವಾಸವಾಗಿದ್ದಾರೆ ಗೊತ್ತೇ.?ಮುಂದೆ ಓದಿ ಶಾಕ್ ಆಗ್ತೀರಾ…

    ಬರೋಬ್ಬರಿ 20 ವರ್ಷ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಮಾಣಿಕ್ ಸರ್ಕಾರ್.ಅಂದ ಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇವರ ಹತ್ತಿರ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ.

  • ಸುದ್ದಿ

    ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೊಂದು ಗುಡ್‌ ನ್ಯೂಸ್: ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂ….!

    ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯ ಆರಂಭದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನುಜಾರಿಗೆ ತರ್ತಿದ್ದಾರೆ. ಚಿಲ್ಲರೆ ವ್ಯಾಪಾರಿಗಳ ಪಿಂಚಣಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. 60ವರ್ಷದ ನಂತ್ರ ಆರ್ಥಿಕ ಶಕ್ತಿ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಲ್ಲರೆ ವ್ಯಾಪಾರ ಹಾಗೂ ಸ್ವಂತ ವ್ಯಾಪಾರ ಮಾಡುವವರಿಗೆ ಮಾಸಿಕ 3 ಸಾವಿರ ರೂಪಾಯಿಯವರೆಗೆ ಪಿಂಚಣಿ ಸಿಗಲಿದೆ. 3 ಕೋಟಿಗೂ ಹೆಚ್ಚು ವ್ಯಾಪಾರಿಗಳು ಇದ್ರ ಲಾಭ ಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಜನರಿಗೆ ಇದನ್ನು ತಲುಪಿಸುವ ಉದ್ದೇಶವನ್ನು…

  • ಸುದ್ದಿ

    ಅಮ್ಮನಿಗೆ ವರ ಬೇಕಿದೆ, ಷರತ್ತುಗಳು ಅನ್ವಯ. ಫೇಸ್ಬುಕ್ ನಲ್ಲಿ ಮಗನ ಪೋಸ್ಟ್ ವೈರಲ್.

    ಅಮ್ಮನಿಗೆ ವರ ಬೇಕಿದೆ ಎಂದು ಯುವಕನೋರ್ವನ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದೆ. ತಾಯಿಗೆ ವರ ಹುಡುಕುತ್ತಿರುವ ಯುವಕನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ  ಮೆಚ್ಚುಗೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ ನಗರದ ಫ್ರೆಂಚ್ ಕಾಲೋನಿಯ ನಿವಾಸಿ ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ನನ್ನ ತಂದೆ ವಿಧಿವಶರಾಗಿದ್ದು, 45 ವರ್ಷದ ನನ್ನ ಅಮ್ಮ ಮನೆಯಲ್ಲಿ ಏಕಾಂಗಿ ಆಗಿರುತ್ತಾರೆ. ಮದ್ಯ ಸೇವಿಸದ ಮತ್ತು ಶುದ್ಧ ಸಸ್ಯಹಾರಿಯಾಗಿರುವ ವರ ಬೇಕಿದೆ ಎಂದು ಗೌರವ್ ಫೇಸ್‍ಬುಕ್…