ಆಟೋಮೊಬೈಲ್ಸ್

ಕೈಗಾರಿಕೆಗಳಿಂದಾಗಿ ಈ ಹಳ್ಳಿಯಲ್ಲಿ ಶವ ಸಂಸ್ಕಾರವನ್ನು ಮಾಡುವುದಕ್ಕು ಜಾಗವಿಲ್ಲ…..! ತಿಳಿಯಲು ಈ ಲೇಖನವನ್ನು ಓದಿ..

223

ಇದು ಒಂದೆಡೆ ಕೆಐಡಿಬಿ ಹುಚ್ಚಾಟಕ್ಕೆ ಹಿಡಿದ ಕೈಗನ್ನಡಿಯಾದರೆ ಮತ್ತೊಂದೆಡೆ ಇದು ಮನಬಂದಂತೆ ಭೂಮಿ ಕೊಟ್ಟವರು ಈಗ ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ.
ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಜಮೀನ್ದಾರರೆನಿಸಿಕೊಂಡವರಿಗೆ ಇಂದು ತಮ್ಮ ಕುಟುಂಬದವರ ಶವಸಂಸ್ಕಾರ ಮಾಡಲು ಯೋಚಿಸಬೇಕಾದ ದುರ್ಗತಿ ಒದಗಿಬಂದಿದೆ.

ಕೈಗಾರಿಕಾ ಅಭಿವೃಧ್ದಿಗೆ ಜಮೀನು ವಶಪಡಿಸಿಕೊಳ್ಳುವಾಗ ಸಾಮಾಜಿಕ ಅವಶ್ಯಕತೆಗಳಿಗೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡದಿದ್ದರೆ ಸಾಮಾನ್ಯ ಜನತೆ ಮೇಲೆ ಯಾವ ರೀತಿ ಆಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಲಹಳ್ಳಿ ಇದೀಗ ಇಂತಹ ಸಮಸ್ಯೆಗೆ ಸಿಲುಕಿ ನರಳುತ್ತಿದಾರೆ.

ಈ ಭಾಗದಲ್ಲಿ ಕಾರ್ಖಾನೆಗಳು ಪ್ರಾರಂಭವಾದಗಿನಿಂದಲು ಗ್ರಾಮಸ್ಥರು ಹಾಗೂ ಕಾರ್ಖಾನೆಗಳ ಆಡಳಿತ ವರ್ಗದ ನಡುವೆ ಗಲಾಟೆಗಳು ನಡೆಯುತ್ತಲೇ ಇರುತ್ತದೆ. ತಮ್ಮ ಊರಿಗೆ ಕಂಪನಿ ಬರುವುದರಿಂದ ಅನುಕೂಲವಾಗುತ್ತದೆ ಎಂದು ಕಾದಿದ್ದ ಜನತೆ ಈಗ ನಿರಾಸೆಯಿಂದಿದ್ದಾರೆ.

ಅಂತಹ ಹಳ್ಳಿಗಳಲ್ಲಿ ಕಲ್ಲಹಳ್ಳಿಯೂ ಒಂದಾಗಿದ್ದು, ಕೇವಲ 250 ಕುಟುಂಬವಿರುವ ಗ್ರಾಮದಲ್ಲಿ ಹಿಂದುಳಿದ ವರ್ಗದ ಜನರೇ ಹೆಚ್ಚು. ಈ ಹಳ್ಳಿ ಇಂದು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಇದ್ದ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಂಡ ಪರಿಣಾಮ ಸ್ಮಶಾನ ಜಾಗಕ್ಕೂ ಪರದಾಡುವಂತಾಗಿದೆ. ಇರುವ 20 ಗುಂಟೆ ಜಾಗದಲ್ಲೇ ಶವಸಂಸ್ಕಾರ ಮಾಡಲಾಗುತ್ತಿದೆಯಾದರೂ, ಮಳೆಗಾಲದಲ್ಲಿ ಸ್ಮಶಾನಕ್ಕೆ ಹೋಗಲು ಸಮಸ್ಯೆಯಾಗುತ್ತಿದೆ.

ಈಗ ಇರುವ ಜಾಗ ಕಪಿಲಾ ನದಿ ದಡದಲ್ಲಿದ್ದು ಕೇವಲ 20 ಗುಂಟೆಯಷ್ಟಿದೆ. ಗ್ರಾಮದ ಎಲ್ಲ ಜನಾಂಗದವರು ಇಲ್ಲಿಯೇ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ ನದಿ ನೀರು ಹೆಚ್ಚಾದಾಗ ಶವ ಸಂಸ್ಕಾರಕ್ಕೆ ತಡೆಯಾಗುತ್ತದೆ. ಆದ್ದರಿಂದ ನಾವು ನೀಡಿರುವ ಭೂಮಿಯಲ್ಲಿ ಸರಕಾರಿ ಖರಾಬ್ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಈವರೆಗೆ ಮಾಡಿದ್ದ ಮನವಿಗೆ ಯಾರೂ ಕೂಡ ಸ್ಪಂಧಿಸಿಲ್ಲ.

ಇದರ ನಡುವೆ ಈ ಭಾಗದಲ್ಲಿರುವ ಸುಮಾರು 50ಕ್ಕೂ ಹೆಚ್ಚು ವಿವಿಧ ಕಾರ್ಖಾನೆಗಳು ಸುತ್ತಲಿನ ಪರಿಸರವನ್ನು ಸಂಪೂರ್ಣ ಹಾಳುಮಾಡಿದೆ. ಕೆಲವರು ಕಾರ್ಖಾನೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೇಗಿಲು ಬಿಟ್ಟು ಯಂತ್ರಗಳ ಹಿಂದೆ ಸಾಗಿದ್ದಾರೆ. ಇನ್ನೂ ಕೆಲವರು ಅಂಗೈಯಗಲದ ಜಾಗದಲ್ಲೇ ಜೀವನ ನಡೆಸುತ್ತಿದ್ದಾರೆ.
ಕಾರ್ಖಾನೆಗಳಿಂದ ನಿತ್ಯ ರಾಸಾಯನಿಕ ಮಿಶ್ರಿತ ನೀರು ಸಣ್ಣ ಕಾಲುವೆಯಲ್ಲಿ ಬಿಡುವುದರಿಂದ ಜಾನುವಾರು ಗಳು ಕುಡಿದು ಸಾವನ್ನಪ್ಪಿವೆ. ಆದರೆ, ಈವರೆಗೆ ಇದಕ್ಕೆ ಪರಿಹಾರವೇ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.ಹೀಗೆ ಖಾರ್ಕನೆಗಳು ಹಲ್ಲಿಗಲ್ಲನ್ನು ನಾಶ ಮಾಡುತ್ತಿದ್ದರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಭಾರತ್ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಇಂಜಿನಿಯರ್‌ ಹುದ್ದೆಗಳ ನೇಮಕ

    ; ಅರ್ಜಿ ಆಹ್ವಾನಭಾರತ್ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಪ್ರಾಜೆಕ್ಟ್‌ ಇಂಜಿನಿಯರ್ ಮತ್ತು ಟ್ರೇನಿ ಇಂಜಿನಿಯರ್‌ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.ವಿದ್ಯಾರ್ಹತೆಬಿಇ / ಬಿ.ಟೆಕ್ ವಿದ್ಯಾರ್ಹತೆಯನ್ನು ಸಿವಿಲ್‌, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್‌ ಸೈನ್ಸ್‌, ಇಲೆಕ್ಟ್ರಾನಿಕ್ಸ್‌ ಕಂಮ್ಯೂನಿಕೇಷನ್‌ , ಇಲೆಕ್ಟ್ರಾನಿಕ್ಸ್‌ ಅಂಡ್‌ ಟೆಲಿಕಂಮ್ಯೂನಿಕೇಷನ್‌ ವಿಭಾಗಗಳಲ್ಲಿ ಪಡೆದಿರಬೇಕು.ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ರೂ.500, ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ರೂ.200. ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು.ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ, ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷವನ್ನು ದಿನಾಂಕ…

  • ಕ್ರೀಡೆ

    ಮದುವೆ ಆಗಲಿದ್ದಾಳೆ ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿಯಾದ ಕನ್ನಡತಿ..ಹುಡುಗ ಯಾರು ಗೊತ್ತಾ?

    ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ. ಕನ್ನಡ ನಾಡಿನ ವೇದಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾಗಿದ್ದು ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ವೇದಾ ಅವ್ರ ಪೋಸ್ಟ್ ಅನುಸಾರ ಅವರು ಲಲಿತ್ ಚೌಧರಿ ಎಂಬ ಯುವಕನನ್ನು ವರಿಸಲಿದ್ದಾರೆ. ಆದರೆ ಆ ಯುವಕನ ಕುರಿತಂತೆಯಾಗಲಿ, ವಿವಾಹದ ದಿನಾಂಕ ಸ್ಥಳದ ಮಾಹಿತಿಯಾಗಲಿ ಇನ್ನೂ ಲಭ್ಯವಾಗಿಲ್ಲ. ಶೀಘ್ರವೇ ಈ…

  • ಉಪಯುಕ್ತ ಮಾಹಿತಿ

    ಡಿಸೆಂಬರ್ 1ರಂದು ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ..!ಹೇಗೆ ಎಂದು ತಿಳಿಯಲು ಇದನ್ನು ಓದಿ ..

    ಹೈದ್ರಾಬಾದ್ ನಲ್ಲಿ ಡಿಸೆಂಬರ್ 1ರಂದು ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹೈದ್ರಾಬಾದ್ ಗೆ ಆಗಮಿಸ್ತಿದ್ದಾರೆ.

  • ಸುದ್ದಿ

    ಬಿಗ್ ಶಾಕಿಂಗ್..ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ..ಏನಾಗಿತ್ತು..?

    ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….

  • ಸುದ್ದಿ

    ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

    ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…