ದಿನಕ್ಕೊಂದು ನೀತಿ ಕಥೆ

ಬ್ರಹ್ಮದತ್ತನ ಗುಣ ಮತ್ತು ದೋಷ…..ಓದಿ ದಿನಕ್ಕೊಂದು ನೀತಿ ಕಥೆ…..

426

 ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .

ಇತ್ತ ಕಾಶಿಯಲ್ಲಿ ಬ್ರಹ್ಮದತ್ತನಿಗೆ ಸಕಲರೂ ತನ್ನ ಸದ್ಗುಣಗಳನ್ನೇ ಹಾಡಿ ಹೋಗಳತ್ತಿರುವುದನ್ನು ಕೇಳಿ ಕೇಳಿ ಒಂದು ಸಂದೇಹ ಬಂತು. ‘’ಪ್ರತಿಯೊಬ್ಬರೂ ನನ್ನನ್ನೂ ಹೊಗಳುತ್ತಾರೆ, ಕೀರ್ತಿಸುತ್ತಾರೆ. ಅಂದರೆ ನಾನು ಸರ್ವಗುಣ ಸಂಪನನ್ನೇ?ನನ್ನಲ್ಲಿ ಯಾವ ದೋಷವು ಇಲ್ಲವೇ?ಇದ್ದರೂ, ಕಂಡರೂ, ಯಾರೂ ಅದನ್ನು ನನ್ನ ದಾಕ್ಷೀಣ್ಯದಿಂದ ಹೇಳುತ್ತಿಲ್ಲವೇ?’’ ಎಂದುಕೊಂಡ.

ಯಾರಾದರೊಬ್ಬರಿಗೆ ತನ್ನಲ್ಲಿರುವ ದೋಷ ಕಾಣಿಸಬಹುದು, ಯಾರಾದರೊಬ್ಬರಿಗೆ ತನ್ನ ಕೊರತೆಯನ್ನು ಧೈರ್ಯವಾಗಿ ಆಡಿ ತೋರಿಸಬಹುದು, ಎಂದು ಅವನು ಹುಡುಕತೊಡಗಿದ. ಮೊದಲು ಅವನು ತನ್ನ ಪರಿವಾರದಲ್ಲಿ ಹುಡುಕಿದ.

ಆದರೆ ಅವರಲ್ಲಿ ಯಾರೂ ರಾಜನಲ್ಲಿ ದೋಷವಿದೆಯೆಂದು ಹೇಳಲಿಲ್ಲ ಅರಮನೆಯ ಪರಿವಾರದವರು ದೋಷ ಕಂಡವರು ಯಾರೂ ಇರಲಿಲ್ಲ. ನಗರದ ಹೊರಗೆ ವೇಷ ಮರೆಸಿಕೊಂಡು ಸಂಚಾರ ಮಾಡಿದ ಅಲ್ಲೂ ಕೂಡ ಎಲ್ಲ ಅವನ ಗುಣಗಾನ ಮಾಡಿದರೇ  ಹೊರತು, ಒಬ್ಬನಾದರೂ ರಾಜನ ನಡತೆಯಲ್ಲಿ ಈ ತಪ್ಪಿದೆ ಎಂದು ಹೇಳಲಿಲ್ಲ.

ಕಡೆಗೆ ಅವನು ಹಿಮಾಲಯಕ್ಕೆ ಹೋದ. ಆ ಗುಡ್ಡ ಗಾಡಿನ ತುಂಬಾ  ಸಂಚರಿಸಿದ. ಕಡೆಗೆ ಬೋಧಿಸತ್ವನ ಪರ್ಣಕುಟೀರ ಕಣ್ಣಿಗೆ ಬಿತ್ತು. ರಾಜ ಅಲ್ಲಿಗೆ ಹೋಗಿ ಅವನಿಗೆ ನಮಸ್ಕರಿಸಿ ಕುಳಿತುಕೊಂಡ. ಬೋಧಿಸತ್ವ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡ.

ಬೋಧಿಸತ್ವ ಆಗ ಕಾಡಿನಿಂದ ತಂದಿದ್ದ ಅರಳಿ ಹಣ್ಣುಗಳನ್ನು ತಿನ್ನುತ್ತಿದ್ದ. ಅವನ್ನೇ ರಾಜನಿಗೆ ನೀಡಿ, ‘’ಅಯ್ಯಾ, ಹಸಿದಿರುವಂತಿದೆ, ಈ ಅರಳಿ ಹಣ್ಣುಗಳನ್ನು ತಿಂದು ನೀರು ಕುಡಿ’’ ಎಂದ.

ರಾಜ ಹಾಗೇ ಮಾಡಿದ. ಆ ಅರಳಿ ಹಣ್ಣುಗಳು ಅಮೃತದಂತಿದ್ದವು. ‘’ಪೂಜ್ಯರೆ, ಈ ಹಣ್ಣುಗಳು ಇಷ್ಟೊಂದು ಮಧುರವಾಗಿರಲು ಕಾರಣವೇನು?’’ ಎಂದು ಕೇಳಿದ.

ಬೋಧಿಸತ್ವ ಹೇಳಿದ, ‘’ಈ ಪ್ರಾಂತ್ಯವನ್ನು ಆಳುತ್ತಿರುವ ರಾಜ ಧರ್ಮವನ್ನು ಮೀರದೆ, ನ್ಯಾಯದಿಂದ ನಡೆದುಕೊಳ್ಳುತ್ತಿದ್ದಾನೆ. ಅದಕ್ಕೇ ಈ ಹಣ್ಣುಗಳು ಇಷ್ಟು ಸಿಹಿಯಾಗಿವೆ.’’

‘’ಪೂಜ್ಯರೆ’’ ಬೋಧಿಸತ್ವ ಹೇಳಿದ, ‘’ಸಿಹಿ ಕೊಡುವ ಪದಾರ್ಥಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಇಡೀ ದೇಶವೇ ಸತ್ವವನ್ನು ಕಳೆದುಕೊಂಡು ನಾಶವಾಗುತ್ತದೆ.’’

ರಾಜ ತನ್ನ ಪರಿಚಯವನ್ನು ಹೇಳಿಕೊಳ್ಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದ.

ಬೋಧಿಸತ್ವನ ಹೇಳಿದ ಮಾತುಗಳನ್ನು ಪರೀಕ್ಷಿಸುವ ಮನಸ್ಸಾಯಿತು. ರಾಜ ಅಂದಿನಿಂದ ಅಧರ್ಮದಿಂದ ರಾಜ್ಯಭಾರ ಮಾಡುತ್ತ ಅನ್ಯಾಯದಿಂದ ನಡೆದುಕೊಳ್ಳತೊಡಗಿದ.

ಕೆಲವು ಕಾಲದ ನಂತರ ಮತ್ತೆ ಅವನು ಬೋಧಿಸತ್ವನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡ. ಆ ದಿನವೂ ಬೋಧಿಸತ್ವ ಅವನಿಗೆ ಅರಳಿ ಹಣ್ಣುಗಳನ್ನು ಕೊಟ್ಟ ಅದನ್ನು ಬಾಯಿಗಿಟ್ಟುಕೊಂಡ ಕೂಡಲೇ ಕಹಿಯಾಗಿ ರಾಜ ತಿನ್ನಲಾರದೆ ಉಗಿದುಬಿಟ್ಟ. ‘’ಪೂಜ್ಯರೇ, ಈ ಹಣ್ಣುಗಳನ್ನು ತಿನ್ನಲಾರದಷ್ಟು ಕಹಿಯಗಿವೆ’’ ಎಂದ.

ಬೋಧಿಸತ್ವ ಹೇಳಿದ, ‘’ಹಾಗಾದರೆ ರಾಜ ನಿಜವಾಗಲೂ ಅಧರ್ಮಿಯಗಿರಬೇಕು. ಅದರಿಂದಲೇ ಹಣ್ಣುಗಳನ್ನು ತಮ್ಮ ಸಿಹಿ ಕಳೆದುಕೊಂಡಿದೆ. ರಾಜ ಅಧಾರ್ಮಿಕನಾದರೆ ಇಡೀ ಪ್ರಜಸಮೂಹಂ ಅಧರ್ಮಚರಣೆ ಮಾಡುತ್ತ ದೇಶವೇ ದುಃಖಕ್ಕೆ ಒಳಗಾಗುತ್ತದೆ,’’

ರಾಜ ತನ್ನ ಪರಿಚಯವನ್ನು ಬಹಿರಂಗಪಡಿಸಿದ. ‘’ಪೂಜ್ಯರೇ, ನಾನೇ ಅರಳಿ ಹಣ್ಣನ್ನು ಸಿಹಿ ಮಾಡಿದೆ. ಅನಂತರ ನಾನೇ ಅದನ್ನು ಕಹಿ ಮಾಡಿದೆ. ಈಗ ಮತ್ತೆ ಸಿಹಿ ಮಾಡುತ್ತೇನೆ’’ ಎಂದು ನಮಸ್ಕರಿಸಿದ.

ಹಿಂದಿರುಗಿ ಕಾಶಿಗೆ ಹೋಗಿ ಧರ್ಮದಿಂದ ರಾಜ್ಯಭಾರ ಮಾಡಿದ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    “ಆಂಧ್ರ”ದಲ್ಲೂ “ಸುದೀಪ್‌ರ ಫ್ಯಾನ್ಸ್‌ ಕ್ಲಬ್‌” !!!

    ನಟ “ಸುದೀಪ್‌”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್‌. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್‌ರವರು ಟ್ವಿಟ್ಟರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

  • ರಾಜಕೀಯ

    ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಬಹುತೇಕ ಖಚಿತ!

    ಕೋಲಾರ:-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಹಾಗೂ ಗುಂಪುಗಾರಿಕೆ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಕೆ.ಹೆಚ್.ಮುನಿಯಪ್ಪನವರು ಬೆಂಬಲಿಗರ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ನವರು ಸಿದ್ದರಾಮಯ್ಯ ನವರಿಗೆ ಕೋಲಾರಕ್ಕೆ ಸ್ವಾಗತ ಕೋರಿದೆ. ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಯಾವ…

  • ಆಧ್ಯಾತ್ಮ

    ಸತ್ತ ನಂತರ ಅತೃಪ್ತಿ ಆತ್ಮಗಳು ಹೋಗುವದಾದ್ರೂ ಎಲ್ಲಿಗೆ ಗೊತ್ತಾ ???

    ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.

  • ಆರೋಗ್ಯ

    ಚುಕ್ಕೆ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ, ನಿಮಗೆ ತಿಳಿದಿಲ್ಲ ಇದರ ಈ ರಹಸ್ಯ.!

    ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ…

  • ಉಪಯುಕ್ತ ಮಾಹಿತಿ

    ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

    ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ. ಹೃದಯಾಘಾತದ ಸಾಧ್ಯತೆ ಜಾಮಾ…