ಸುದ್ದಿ

ಆಧಾರ್ ಕಾರ್ಡ್ನಲ್ಲಿ ನಿಮ್ ಫೋಟೊ ಬದಲಾಯಿಸಬೇಕೆ….ತಕ್ಷಣ ಇದನ್ನು ಓಧಿ

87

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ. ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ.ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ ಅರ್ಜಿಯನ್ನು ಕೇಳಿ ಪಡೆಯಿರಿ. ಮತ್ತು ಆ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿನಂತರ ಅವರು ನಿಮ್ಮ ಬಯೋಮೆಟ್ರಿಕ್(ಬೆರಳಚ್ಚು ಮತ್ತು ಕಣ್ಣಿನ ಪಾಪೆ) ಸ್ಕ್ಯಾನ್ ಮಾಡಿ ಮಾಹಿತಿಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಪುನಃ ಹೊಸದಾಗಿ ಫೋಟೋ ತೆಗೆದುಕೊಳ್ಳುತ್ತಾರೆ. ಅಲ್ಲಿ ತೆಗೆದುಕೊಂಡ ಫೋಟೋವನ್ನು ತೋರಿಸುವಂತೆ ಕ್ಯಾಮರಾಮನ್ ಬಳಿ ಕೇಳಿ, ಚನ್ನಾಗಿಲ್ಲದಿದ್ದರೆ ಮತ್ತೊಮ್ಮೆ ಬೇರೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಿ.. ಇದು ಕ್ಯಾಮರಾಮ್ಯಾನ್ ನ ವರ್ತನೆಗೆ ಅವಲಂಭಿತವಾಗಿರುತ್ತದೆ.

ವಿವರಗಳನ್ನು ಪಡೆದನಂತರ ಅವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಯುಐಡಿಎಐನ ಡೇಟಾ ಸೆಂಟರ್ ಕಳುಹಿಸಲಾಗುವುದು ಮತ್ತು 2 ವಾರಗಳ ನಂತರ ನೀವು ಅದೇ 12-ಅಂಕಿಯ ವಿಶಿಷ್ಟ ಸಂಖ್ಯೆಯೊಂದಿಗೆ ಆದರೆ ಬೇರೆ ಫೋಟೋವಿರುವ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆಮೂಲಕ ಬರುತ್ತದೆ. ಅಗತ್ಯವಿದ್ದವರು ಅದರ ಅನ್ನು ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.ಆದರೆ ನೀವು ಈ ಸಂಪೂರ್ಣ ಕಾರ್ಯವಿಧಾನಕ್ಕೆ ರೂ. 15 /-ಅನ್ನು ಪಾವತಿಸಬೇಕು ಏಕೆಂದರೆ ಆಧಾರ್ ಕಾರ್ಡ್ ಗೆ ದಾಖಲಾತಿ ಮಾಡಲು ಕೇವಲ ಮೊದಲ ಬಾರಿ ಮಾತ್ರ ಉಚಿತವಾಗಿರುತ್ತದೆ.. ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಿಸಲು ಮುಂದಾದರೆ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಸೂಚನೆ:ದುರದೃಷ್ಟವಶಾತ್ ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ಆನ್ ಲೈನ್ ಇಂಟರ್ನೆಟ್ ಮೂಲಕ ಚೇಂಜ್ ಮಾಡುವುದಕ್ಕೆ ಯಾವುದೇ ಅವಾಕಾಶಗಳಿರುವುದಿಲ್ಲ. ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಆಧಾರ್ ಧಾಖಲಾತಿ ಕೇಂದ್ರಕ್ಕೆ ಭೇಟಿ ನೀಡಲೇಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆ ಮಂಟಪದಲ್ಲಿ ಈ ವರ ವಧುವಿಗೆ ಹಾರ ಹಾಕುವ ಬದಲು, ವಧು ಸ್ನೇಹಿತೆಗೆ ಮಾಲೆ ಹಾಕಿದ್ದಾನೆ.!ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ…ತಿಳಿಯಲು ಮುಂದೆ ನೋಡಿ…

    ಮದುವೆಗಳಲ್ಲಿ ಹಲವಾರು ವಿಚಿತ್ರ ಸನ್ನಿವೇಶಗಳು ನಡೆಯುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ.ಅದರಲ್ಲಿ ಕೆಲವೊಂದು ಇನ್ನೇನು ತಾಳಿ ಕಟ್ಟುವ ಸಮಯಕ್ಕೆ ಹುಡುಗಿ ಕಾಣೆಯಾಗುವುದು, ಇಲ್ಲವಾದ್ರೆ ಹುಡುಗನೇ ಇಲ್ಲದಿರುವುದು. ಅಣ್ಣನ ಮದುವೆಯಲ್ಲಿ ತಮ್ಮ ಅಣ್ಣನ ಕೈಯಿಂದ ತಾಳಿ ಕಿತ್ತುಕೊಂಡು ವಧುವಿಗೆ ಕಟ್ಟುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಇದೇ ರೀತಿ ಇಲ್ಲಿ ವರ ಮಹಾಶಯನೊಬ್ಬ ವಧುವಿಗೆ ತಾಳಿ ತಾಳಿ ಕಟ್ಟುವ ವೇಳೆ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾನೆ.ಇದನ್ನು ತಿಳಿದೇ ಮಾಡಿದ್ದಾನೋ, ತಿಳಿಯದೇ ಮಾಡಿದ್ದಾನೋ ಗೊತ್ತಿಲ್ಲ ಆ ವಿಡಿಯೋ ಮಾತ್ರ ಈಗ ಸೋಶಿಯಲ್…

  • ಸುದ್ದಿ

    ಚಳಿಗಾಲದಲ್ಲಿ ಚರ್ಮದ ಕಾಳಜಿಯನ್ನು ಎಂದಿಗೂ ನಿರ್ಲಕ್ಷಿಸಬಾರದು,ಯಾಕೆ ಗೊತ್ತಾ,?

    ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ  ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು…

  • ರಾಜಕೀಯ

    ಮುಂದಿನ ಬಾರಿಯ ಎಲೆಕ್ಷನ್ ನಲ್ಲೂ ಮೋದಿದೆ ಹವಾ…..! ಹೇಗಂತ ತಿಳಿಯಲು ಈ ಲೇಖನ ಓದಿ…

    ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಮತದಾರರ ಅಭಿಪ್ರಾಯ ಸಮೀಕ್ಷೆಯಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ 6ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(10 ಫೆಬ್ರವರಿ, 2019) ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನೀವು ಅಪರೂಪಕ್ಕೆಭೇಟಿ ಮಾಡುವ…

  • ಸುದ್ದಿ

    ಮಾತು ಮಾತಿಗೂ ಹೆಚ್ಚು ಕೋಪ ಬರುತ್ತಿದೆಯೇ ಇಲ್ಲಿದೆ ನೋಡಿ ಅದಕ್ಕೆ ಮದ್ದು..!

    ಕೆಲವರು  ಮಾತು ಮಾತಿಗೆ ಕೋಪಗೊಳ್ತಾರೆ. ಈ ಕೋಪ ಸಂಬಂಧವನ್ನು ಹಾಳು ಮಾಡುವ ಜೊತೆಗೆ ಅವ್ರ ಆರೋಗ್ಯದ ಮೇಲೂ ಪ್ರಭಾವಬೀರುತ್ತದೆ. ಕೋಪ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ.ಕೋಪವನ್ನು ನಿಯಂತ್ರಿಸಿಕೊಳ್ಳಲು ಕೆಲವರು ಅನೇಕ ಪ್ರಯತ್ನಗಳನ್ನು ಮಾಡ್ತಾರೆ. ಆದ್ರೆ ಯಾವುದೂ ಫಲ ನೀಡುವುದಿಲ್ಲ. ಕೆಲವೊಂದುವಾಸ್ತು ಉಪಾಯಗಳು ನಿಮ್ಮ ಕೋಪ ನಿವಾರಣೆಗೆ ಸಹಾಯಕವಾಗಲಿದೆ. ವಾಸ್ತು ಶಾಸ್ತ್ರದ ಪ್ರಕಾರ,ಯಾರಿಗೆ ಹೆಚ್ಚು ಕೋಪ ಬರುತ್ತದೆಯೋ ಅವ್ರು ಕೆಂಪು ಬಣ್ಣ ಬಳಕೆಯನ್ನು ಕಡಿಮೆ ಮಾಡಬೇಕು. ಮನೆಗೋಡೆ, ಬಾಗಿಲಿಗೆ ಬಣ್ಣ ಹಾಗೂ ಕಿಟಕಿ, ಬಾಗಿಲಿನ ಪರದೆ, ಕುಷನ್ ಗಳು…

  • ಸುದ್ದಿ

    ಇನ್ಮುಂದೆ ನಿಮ್ಮ ಮೊಬೈಲ್ ಕಳ್ಳತನವಾದರೆ ಸುಲಭವಾಗಿ ಹಿಂಪಡೆಯಬಹುದು,. ಇಲ್ಲಿದೆ ನೋಡಿ ಟ್ರಿಕ್ಸ್, ನೀವು ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ,..!!

    ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ … ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.  ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾ. ಕದ್ದ ಮೊಬೈಲ್‌ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರುಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು. ಮೊಬೈಲ್‌ ಬಳಕೆದಾರರು ಜಿಪಿಎಸ್‌ ಬಳಕೆ ಮಾಡಿಕೊಂಡರೆ ಒಳಿತು… ಇದರಿಂದ ಕಳವಾದ ಮೊಬೈಲ್‌ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ…