ಸುದ್ದಿ

ಫುಡ್ ಡೆಲಿವರಿಗೆ ಮಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೆ ಓದಲೇಬೇಕಾದ ವಿಷಯ,.!!

By admin

October 09, 2019

ಮನೆ ಬಾಗಿಲಿಗೆ ಆಹಾರ ವಿತರಿಸುವ ಜೊಮ್ಯಾಟೋ ವಿತರಕ ವ್ಯವಸ್ಥೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ‌ ವಿಚಿತ್ರ ಆರೋಪವೊಂದು ಕೇಳಿಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.‌

ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದ್ದು ಫುಡ್ ಡೋರ್ ಸ್ಟೆಪ್ ಡೆಲಿವರಿ ಮಾಡುವ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ನಾಯಿ ಕಳ್ಳತನದ ಆರೋಪ ಕೇಳಿ ಬಂದಿದೆ.

ಪುಣೆಯ ಕಾವೇರಿ ರಸ್ತೆಯಲ್ಲಿ ವಾಸವಾಗಿರುವ ವಂದನಾ ಎಂಬಾಕೆ‌ ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು ಡೆಲಿವರಿ ಬಾಯ್ ತುಷಾರ್ ಎಂಬಾತ ಫುಡ್ ಮನೆಗೆ ಡೆಲಿವರಿ ಮಾಡಿದ್ದ. ಆದರೇ ಹಾಗೇ ಫುಡ್ ಡೆಲಿವರಿ ಮಾಡಿ ಹೋಗುವಾಗ ತುಷಾರ್ ವಂದನಾ ಅವರು ಸಾಕಿದ್ದ ದತ್ತು ಎಂಬ ನಾಯಿಮರಿಯನ್ನು ಕದ್ದೊಯ್ದಿದ್ದಾರೆ.

ತುಷಾರ್ ಬಂದು ಹೋದ ಸ್ವಲ್ಪ ಸಮಯದ ಬಳಿಕ ವಂದನಾ ನಾಯಿ ನರಿ ಇಲ್ಲದೇ ಇರೋದನ್ನು ಗಮನಿಸಿ ಸಿಸಿಟಿವಿ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ವಂದನಾ ಜೊಮ್ಯಾಟೋ ಕಂಪನಿಗೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ವಂದನಾ ಅವರ ನಾಯಿಮರಿಯನ್ನು ವಾಪಸ ಕೊಡಿಸುವ ಪ್ರಯತ್ನ ಆರಂಭಿಸಿದ್ದಾರೆ.