ಆರೋಗ್ಯ

ನೈಸರ್ಗಿಕವಾಗಿ ಹೊಟ್ಟೆಯ ಬೊಜ್ಜು ಕರಗಿಸಬೇಕೇ, ಹಾಗಾದರೆ ಹೀಗೆ ಮಾಡಿ.

By admin

January 20, 2020

ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು.

ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ 40 ಡಿಗ್ರಿ ಕೋನದವರೆಗೆ ಎತ್ತಿ ತಂದು ನಿಲ್ಲಿಸಿ. ಈ ಸ್ಥಿತಿಯಲ್ಲಿ ಹತ್ತರಿಂದ ಹದಿನೈದು ಬಾರಿ ಸಾಮಾನ್ಯ ಉಸಿರಾಟ ನಡೆಸುತ್ತಾ, ಉಸಿರನ್ನು ಬಿಡುತ್ತಾ ನಿಧಾನವಾಗಿ ಎತ್ತಿದ ಕಾಲುಗಳನ್ನು ಕೆಳಗಿಳಿಸಿ. ವಿಶ್ರಮಿಸಿ. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ.

ಪ್ರಯೋಜನ: ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುತ್ತದೆ. ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಕಿಬ್ಬೊಟ್ಟೆಯ ಅಂಗಗಳು ಬಲಗೊಳ್ಳುತ್ತವೆ. ಬೆನ್ನಿನ ಸ್ನಾಯುಗಳಿಗೆ ರಕ್ತಪೂರೈಕೆಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಅಂಗಗಳಿಗೂ ವ್ಯಾಯಾಮ ದೊರಕುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ. ತೀವ್ರ ಸೊಂಟನೋವು ಇದ್ದವರು ಈ ಆಸನವನ್ನು ಅಭ್ಯಾಸ ಮಾಡುವುದು ಬೇಡ.

ಬೇರೆ ಬೇರೆ ದೇವತೆಗಳು, ಋಷಿಗಳು, ಪ್ರಾಣಿ-ಪಕ್ಷಿ ಇತ್ಯಾದಿ ಹೆಸರುಳ್ಳ ಆಸನಗಳು !!!

ಯೋಗಾಸನಗಳಲ್ಲಿ ಅಸಂಖ್ಯಾತ ಪ್ರಕಾರಗಳಿವೆ. ಪ್ರಪಂಚದಲ್ಲಿರುವ ಅಸಂಖ್ಯಾತ ವಸ್ತುಗಳ ಹೆಸರಿನಲ್ಲಿಯೂ ಆಸನಗಳಿವೆ. ನಮ್ಮ ಹಿರಿಯರು, ಜ್ಞಾನಿಗಳು ಬೇರೆ

ಬೇರೆ ಸಂಖ್ಯೆಯ ಆಸನಗಳನ್ನು ಹೇಳಿದ್ದಾರೆ. ಆಸನಗಳ ಹೆಸರು ವಿಕಾಸತತ್ತ್ವವನ್ನು ಸೂಚಿಸುವ ಅರ್ಥಗಳನ್ನು ಹೊಂದಿದೆ. ಬೇರೆ ಬೇರೆ ದೇವತೆಗಳು, ಋಷಿಗಳು, ಪ್ರಾಣಿ-ಪಕ್ಷಿಗಳ ಹೆಸರಿನಲ್ಲಿ ಆಸನಗಳ ಮಾಹಿತಿ ಹೀಗಿದೆ

ಸಸ್ಯಗಳ ಹೆಸರು: ವೃಕ್ಷಾಸನ, ಪದ್ಮಾಸನ, ತಾಡಾಸನ

ಹರಿದಾಡುವ ಪ್ರಾಣಿಗಳ ಹೆಸರು: ಭುಜಂಗಾಸನ

ನೀರಿನಲ್ಲಿ (ಜಲಚರ): ಮತ್ಸ್ಯಾಸನ, ಕೂರ್ಮಾಸನ,

ಉಭಯಚರ (ನೆಲ, ಜಲ): ಮಂಡೂಕಾಸನ, ನಕ್ರಾಸನ, ಮಕರಾಸನ

ಕ್ರಿಮಿಕೀಟಗಳ ಹೆಸರಿನಲ್ಲಿ: ವೃಶ್ಚಿಕಾಸನ (ಚೇಳು), ಶಲಭಾಸನ, (ಮಿಡತೆ, ಶಲಭ)

ಪಕ್ಷಿಗಳ ಹೆಸರಿನಲ್ಲಿ: ಕುಕ್ಕುಟಾಸನ, ಬಕಾಸನ, ಪದ್ಮ ಮಯೂರಾಸನ, ಹಂಸಾಸನ, ಕಪೋತಾಸನ, ಉಷ್ಟ್ರಾಸನ ಇತ್ಯಾದಿ

ಚತುಷ್ಪಾದ (ನಾಲ್ಕು ಕಾಲಿನ ಪ್ರಾಣಿಗಳ ಹೆಸರು): ಅಧೋಮುಖ ಶ್ವಾನಾಸನ, ಅಶ್ವಾಸನ (ಕುದುರೆ) ಸಿಂಹಾಸನ, ಗೋಮುಖಾಸನ.

ಪೌರಾಣಿಕ ವ್ಯಕ್ತಿಗಳ ಹೆಸರು: ವೀರಭದ್ರಾಸನ, ಹನುಮಾನಾಸನ

ಋಷಿಗಳ ಹೆಸರು: ಋಚೀಕಾಸನ, ದೂರ್ವಾಸಾಸನ, ವಾಮದೇವಾಸನ, ಕೌಂಡಿನ್ಯಾಸನ, ಕಪಿಲಾಸನ, ಗಾಲವಾಸನ, ಕಶ್ಯಪಾಸನ, ವಸಿಷ್ಠಾಸನ, ಭರದ್ವಾಜಾಸನ, ವಿಶ್ವಾಮಿತ್ರಾಸನ, ಘೕರಂಡಾಸನ, ಮರೀಚಾಸನ, ಅಷ್ಟಾವಕ್ರಾಸನ.

ದೇವರ ಹೆಸರು: ಕೃಷ್ಣಾಸನ, ಅನಂತಾಸನ, ಬುದ್ಧಾಸನ, ಗೋರಕ್ಷಾಸನ, ಅರ್ಧಚಂದ್ರಾಸನ, ವಿರಿಂಚ್ಯಾಸನ, (ಚತುಮುಖ ಬ್ರಹ್ಮ) ಭೈರವಾಸನ, ಸ್ಕಂಧಾಸನ.