ಲೋಕಸಭೆ ಚುನಾವಣೆ ಹತ್ತಿರುವಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದೆ. ಬಿ.ಎಸ್.ವೈ.ಗೆ ಸಂಬಂಧಿಸಿದ ಡೈರಿ ಮತ್ತು ಪೆನ್ ಡ್ರೈವ್ ನ್ನು ತನಿಖಾಧಿಕಾರಿಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಲು ಈಶ್ವರಪ್ಪ ಆಪ್ತ ವಿನಯ್ ಒಪ್ಪಿಕೊಂಡಿದ್ದಾರಂತೆ. ಆದ್ರೆ ವಿನಯ್ ಗೆ ಭದ್ರತೆ ಕೊಟ್ರೆ ಮಾತ್ರ ಪೆನ್ ಡ್ರೈವ್ ಕೊಡುವುದಾಗಿ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸರಿಗೆ ಪತ್ರ ಬರೆದಿರುವ ವಿನಯ್, ಯಡಿಯೂರಪ್ಪಗೆ ಸಂಬಂಧಿಸಿದಂತೆ ತಮ್ಮ ಬಳಿ ಪ್ರಮುಖ ಸಾಕ್ಷ್ಯಾಧಾರಗಳಿವೆ.
ಅದನ್ನು ನಾನು ನ್ಯಾಯಾಲಯದ ಮುಂದೆ ಇಡಲು ಸಿದ್ದನಿದ್ದೇನೆ. ಆದ್ರೆ ಸತ್ಯ ಬಯಲಾದ ಬಳಿಕ ನನ್ನ ಜೀವಕ್ಕೆ ಅಪಾಯವಿದೆ. ಹೀಗಾಗಿ ನನಗೆ ಭದ್ರತೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಪಿಎ ಸಂತೋಷ್ ಒಮ್ಮೆ ನನ್ನನ್ನು ಕಿಡ್ನಾಪ್ ಮಾಡಿ ವಿಫಲವಾಗಿದ್ದಾರೆ. ಈ ಕುರಿತು ವಿಷಯಗಳು ಪೆನ್ ಡ್ರೈವ್ ನಲ್ಲಿದೆ. ಈಗಾಗಲೇ ನನ್ನ ಮೇಲೆ ಒಮ್ಮೆ ಹಲ್ಲೆಯೂ ನಡೆದಿದೆ.
ಅಲ್ಲದೆ ಅಪರಿಚಿತ ವ್ಯಕ್ತಿಗಳು ನನ್ನನ್ನು ಫಾಲೋ ಮಾಡ್ತಿದ್ದಾರೆ. ಹೀಗಾಗಿ ಸಂತೋಷ್ ನನ್ನ ಮೇಲೆ ಮತ್ತೆ ಹಲ್ಲೆ ಮಾಡುವ ಅನುಮಾನವಿದೆ. ಹೀಗಾಗಿ ಪೊಲೀಸ್ ಭದ್ರತೆ ಕೊಡಿ ಅಂತಾ ಕೇಳಿರುವುದಾಗಿ ವಿನಯ್ ತಿಳಿಸಿದ್ದಾರೆ.