ಸಿನಿಮಾ

ಆ ಆರೋಪವನ್ನು ಪ್ರೂವ್ ಮಾಡಿದ್ರೆ ಮಂಡ್ಯ ಅಲ್ಲ, ರಾಜ್ಯವನ್ನೇ ಬಿಟ್ಟು ಹೋಗ್ತೀನಿ ಎಂದು ದಳಪತಿಗಳಿಗೆ ಸವಾಲು ಹಾಕಿದ ಯಶ್.!?

By admin

April 17, 2019

ನಾನು ಜೆಡಿಎಸ್​​ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ.

ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ ಇಲ್ಲಿಯೇ ಇರಲ್ಲ, ನಿಜವಾಗ್ಲೂ ರಾಜ್ಯಾನ ಬಿಡ್ತೀನಿ..ಬರೀ ಬಾಯಿಮಾತಿಗೆ ಹೇಳೋದು ಅಲ್ಲಪ್ಪ.. ನಿಜವಾಗ್ಲೂ ಹೇಳ್ತಾ ಇದ್ದೀನಿ. ಅರ್ಥಾ ಆಗಿರೋರಿಗೆ ಅರ್ಥಾ ಆಗಿರುತ್ತೆ ಅಂತಾ ಮಾರ್ಮಿಕವಾಗಿ ನುಡಿದ್ರು.

ಈ ಮೂಲಕ ಕಳೆದ ಬಾರಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದ ಯಶ್, ಈ ಬಾರಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡರಿಗೆ ಪರೋಕ್ಷ ಟಾಂಗ್ ಕೂಡ ನೀಡಿದ್ರಾ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಇಲ್ಲಿ ಯಶ್ ಯಾರದ್ದೇ ಹೆಸರನ್ನೂ ಪ್ರಸ್ತಾಪಿಸದಿದ್ದರೂ ‘ಬರೀ ಬಾಯಿಮಾತಿಗೆ ಹೇಳೋದು ಅಲ್ಲಪ್ಪ.. ನಿಜವಾಗ್ಲೂ ಹೇಳ್ತಾ ಇದ್ದೀನಿ ಅರ್ಥಾ ಆಗಿರೋರಿಗೆ ಅರ್ಥಾ ಆಗಿರುತ್ತೆ’ ಅಂತಾ ಹೇಳಿದ್ದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

ಏಕಂದ್ರೆ ಕಳೆದ ಲೋಕಸಭೆ ಚುನಾವಣೆ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡರು, ನರೇಂದ್ರ ಮೋದಿ ಪ್ರಧಾನಿ ಆದ್ರೆ ನಾನು ರಾಜ್ಯಾನೇ ಬಿಡ್ತೀನಿ ಅಂತಾ ಘೋಷಿಸಿದ್ರು. ಇನ್ನು ಈಗಾಗಲೇ ಸಚಿವ ಹೆಚ್​.ಡಿ ರೇವಣ್ಣ ಕೂಡ, ಮತ್ತೆ ಮೋದಿ ಪ್ರಧಾನಿಯಾದ್ರೆ ರಾಜಕಾರಣ ಬಿಡ್ತೀನಿ ಅಂತಾ ಘೋಷಿಸಿದ್ದಾರೆ.