inspirational

ಅಂಬರೀಶ್ ಅಣ್ಣನ ಹೆಂಡತಿ ಯಾರು ಅಂತ ಮಂಡ್ಯ ಜನತೆಗೆ ಗೊತ್ತಿಲ್ವಾ? ಅಂತ ನಿಖಿಲ್ ಗೆ ಟಾಂಗ್ ಕೊಟ್ಟ ಯಶ್…

By admin

April 10, 2019

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಾ ರಣ ಭೂಮಿಯಂತಾಗಿದ್ದು ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು ಚುನಾವಣೆ ಪ್ರಚಾರ ತಾರಕಕ್ಕೇರಿದೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಕೈಗೊಂಡಿರುವ ನಟ ಯಶ್ ಅವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಟಾಂಗ್ ಕೊಟ್ಟಿದ್ದಾರೆ.

ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ. ಇದಾದ ಬಳಿಕ ಮಾತಿನ ವರಸೆ ಬದಲಿಸಿರುವ ಯಶ್, ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡತೊಡಗಿದ್ದಾರೆ.

ತಿರುಗೇಟು ನೀಡುವ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆಯೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಅಂಬರೀಶ್ ಅಣ್ಣನ ಹೆಂಡತಿ ಯಾರು ಅಂತ ಮಂಡ್ಯ ಜನತೆಗೆ ಗೊತ್ತಿಲ್ವಾ? ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಇದು ರಾಜ್ಯದ ಜನರಿಗೂ ಗೊತ್ತಿದೆ.

ಮಂಡ್ಯ ಜಿಲ್ಲೆಯ ಜನರಿಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ. ಯಶ್ ನೀಡಿದ ಒಬ್ಬರೇ ಹೆಂಡತಿ ಹೇಳಿಕೆ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ. ಅವರು ಈ ಹೇಳಿಕೆ ನೀಡಿ ಯಾರಿಗೆ ಟಾಂಗ್ ಕೊಟ್ಟಿದ್ದಾರೆ ಎಂದೆಲ್ಲಾ ಚರ್ಚೆಯಾಗಿದೆ ಎನ್ನಲಾಗಿದೆ.