ಸಿನಿಮಾ

ಬಾಡಿಗೆ ಮನೆಯನ್ನು ಖಾಲಿ ಮಾಡಲು ಕೋರ್ಟ್ ನಲ್ಲಿ ಸಮಯ ಕೇಳಿದ ಯಶ್ ತಾಯಿ.!ಈ ಸುದ್ದಿ ನೋಡಿ..

By admin

March 23, 2019

ರಾಕಿಂಗ್ ಸ್ಟಾರ್ ಯಶ್ ಕುಟುಂಬ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಮಾರ್ಚ್ 31ರೊಳಗೆ ಖಾಲಿ ಮಾಡಬೇಕಾಗಿತ್ತು. ಆದರೆ ಇದೀಗ ಯಶ್ ಅವರ ತಾಯಿ ಪುಷ್ಪಾ, ಇನ್ನೂ ಆರು ತಿಂಗಳ ಕಾಲ ಇದೇ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದ್ದು, ಅಲ್ಲಿ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇನ್ನು 6 ತಿಂಗಳೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ತಮಗೆ ಈಗ ವಾಸಿಸುತ್ತಿರುವ ಬಾಡಿಗೆ ಮನೆಯಲ್ಲಿ ಆರು ತಿಂಗಳು ವಾಸ್ತವ್ಯ ಮುಂದುವರೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಪುಷ್ಪಾ ಕೋರಿದ್ದಾರೆ.

ಮನೆ ಮಾಲೀಕ ಡಾ. ಎಂ. ಮುನಿಪ್ರಸಾದ್ ಹಾಗೂ ಬಾಡಿಗೆದಾರರಾದ ಯಶ್ ಕುಟುಂಬದ ನಡುವೆ ವ್ಯಾಜ್ಯ ತಲೆದೋರಿದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ 25 ಲಕ್ಷ ರೂಪಾಯಿಗಳನ್ನು ಠೇವಣಿಯಾಗಿರಿಸಿಕೊಂಡಿದ್ದಲ್ಲದೆ 2019 ರ ಮಾರ್ಚ್ 31 ರೊಳಗೆ ಮನೆ ಖಾಲಿ ಮಾಡುವಂತೆ ಯಶ್ ಕುಟುಂಬಕ್ಕೆ ಆದೇಶಿಸಿತ್ತು.