ಸಿನಿಮಾ

KGF ಚಿತ್ರದ ಬಗ್ಗೆ ಪುನೀತ್ ರಾಜ್ ಸೇರಿದಂತೆ ಕನ್ನಡದ ಸ್ಟಾರ್ ನಟರು ಹೇಳಿದ್ದೇನು ಗೊತ್ತಾ..!

By admin

December 22, 2018

ವಿಶ್ವಾದ್ಯಂತ ನಿನ್ನೆ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಕೇವಲ ಅಭಿಮಾನಿಗಳಿಂದ ಮಾತ್ರವಲ್ಲ ಇಡೀ ಸ್ಯಾಂಡಲ್ ವುಡ್ ಸ್ಟಾರ್ ಗಳೂ ಕೆಜಿಎಫ್ ಗೆ ಫಿದಾ ಆಗಿದ್ದಾರೆ.

ಹೌದು.. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಬಾಹುಬಲಿ ಬಳಿಕ ಭಾರಿ ಹವಾ ಸೃಷ್ಟಿಸಿರುವ ಚಿತ್ರ ಕೆಜಿಎಫ್.. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ಅಭಿನಯದ ಕೆಜಿಎಫ್ ಚಿತ್ರ ಅಬ್ಬರದ ಪ್ರಚಾರದಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

ಕೆಜಿಎಫ್ ಚಿತ್ರಕ್ಕೆ ಸಿನಿಮಾ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಕೆಜಿಎಫ್ ಸೃಷ್ಟಿಸಿರುವ ಹವಾ ನೋಡಿ ಇಡೀ ಸ್ಯಾಂಡಲ್ ವುಡ್ ಇದು ನಮ್ಮ ಕನ್ನಡ ಸಿನಿಮಾ ಎಂದು ಉದ್ಘರಿಸುತ್ತಿದೆ.

ಕನ್ನಡ ಎಂಬ ಭಾಷೆಯೊಂದಿದೆ ಎಂಬುದನ್ನೇ ತಿಳಿಯದವರೂ ಕೂಡ ಇಂದು ಕೆಜಿಎಫ್ ಎಂಬ ಕನ್ನಡ ಚಿತ್ರದ ಬಗ್ಗೆ ಮಾತನಾಡುವಂತಾಗಿದೆ. ಇದು ಕೆಜಿಎಫ್ ಚಿತ್ರದ ಗೆಲುವಲ್ಲ.

ಬದಲಿಗೆ ಕನ್ನಡ ಮತ್ತು ಕನ್ನಡ ಚಿತ್ರರಂಗದ ಗೆಲುವು. ಇದೇ ಕಾರಣಕ್ಕೆ ಇಡೀ ಸ್ಯಾಂಡಲ್ ವುಡ್ ಇಂದು ಕೆಜಿಎಫ್ ಚಿತ್ರದ ಬೆನ್ನಿಗೆ ನಿಂತಿದೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಮತ್ತು ಚಿತ್ರತಂಡದ ಕೆಲಸಕ್ಕೆಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ನಟ ಪುನೀತ್ ರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಗಣ್ಯಾತಿ ಗಣ್ಯ ಸ್ಟಾರ್ ನಟರು, ನಿರ್ದೇಶಕರು ಕೆಜಿಎಫ್ ಶುಭಕೋರಿದ್ದಾರೆ.