ನಟ ಅಜಯ್ ರಾವ್ ಮತ್ತು ಸ್ವಪ್ನಾ ಇಬ್ಬರು ಮದುವೆಯಾಗಿದ್ದು 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಅಜಯ್ ರಾವ್ ಪತ್ನಿ ಸ್ವಪ್ನಾ ಹೊಸಪೇಟೆಯವರು. ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು. ಸ್ವಪ್ನಾ ಡಿಪ್ಲೋಮಾ ಪಧವಿ ಪಡೆದಿದ್ದಾರೆ. ಅಜಯ್ ರಾವ್ ‘ಎಕ್ಸ್‌ಕ್ಯೂಸ್‌ಮೀ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದರು.’ಕೃಷ್ಣನ ಲವ್ ಸ್ಟೋರಿ, ಕೃಷ್ಣನ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ ಸನ್ ಆಫ್ ಸಿಎಂ, ಸೆಕೆಂಡ್ ಹ್ಯಾಂಡ್ ಲವರ್, ಜೈ ಭಜರಂಗಬಲಿ’ ಸಿನಿಮಾಗಳಲ್ಲೂ ಕೃಷ್ಣ ನಟಿಸಿದ್ದರು.
ಕಳೆದ ವರ್ಷ ನವೆಂಬರ್ 21ಕ್ಕೆ ಅಜಯ್ ರಾವ್ ಅವರಿಗೆ ಮುದ್ದಾದ ಮಗಳು ಹುಟ್ಟಿದ್ದಳು. ಚೆರಿಷ್ಮಾ ಅಂತ ಅವಳಿಗೆ ಅಜಯ್ ರಾವ್ ದಂಪತಿ ನಾಮಕರಣ ಕೂಡ ಮಾಡಿದ್ದರು.ಮಗಳ ಹುಟ್ಟುಹಬ್ಬಕ್ಕೆ ಅಮ್ಮ ಸ್ವಪ್ನಾ ಈ ಫೋಟೋವನ್ನು ಹಂಚಿಕೊಂಡು ಶುಭ ಕೋರಿದ್ದಾರೆ, ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಚೆರಿಷ್ಮಾಗೆ ಶುಭಾಶಯ ಹರಿದುಬಂದಿದೆ.
ಚೆರಿಷ್ಮಾ ಒಂದನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ನಟ ಯಶ್, ನಟಿ ಆಶಿಕಾ ರಂಗನಾಥ್ ಮತ್ತು ಅಜಯ್ ರಾವ್ ಸ್ನೇಹಿತರು, ಸಂಬಂಧಿಕರು ಹಾಜರಿದ್ದರು. ಯಶ್ ಬೇಬಿ ಚೆರಿಷ್ಮಾಗೆ ಉಡುಗೊರೆಯನ್ನೂ ನೀಡಿದ್ದಾರೆ.
ಚೆರಿಷ್ಮಾ ಹೆಸರಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿದ್ದು ಅವಳ ಮುದ್ದಾ ಫೋಟೋ, ವಿಡಿಯೋಗಳು ಇಲ್ಲಿ ಕಾಣಸಿಗುತ್ತವೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ಚೆರಿಷ್ಮಾ ಕೃಷ್ಣನ ವೇಷ ಧರಿಸಿ ಮುದ್ದಾಗಿ ಕಾಣುತ್ತಿದ್ದಳು. ಅಷ್ಟೇ ಅಲ್ಲದೆ ಬಸವಣ್ಣನವರ ವೇಷ ಕೂಡ ಹಾಕಿದ್ದಳು.