ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳ ಹೆಸರಿನ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಇತ್ತು. ಬೇಬಿ ವೈಆರ್ ಎಂದೇ ಎಲ್ಲರು ಕರೆಯುತ್ತಿದ್ದರು. ಅಭಿಮಾನಿಗಳು ಸಹ ಸಾಕಷ್ಟು ಹೆಸರುಗಿಳಿಂದ್ದ ಯಶ್-ರಾಧಿಕಾ ಮುದ್ದು ಮಗಳನ್ನು ಕರೆಯುತ್ತಿದ್ದರು.
ಆದ್ರೀಗ ಬೇಬಿ ವೈಆರ್ ಗೆ ನಾಮಕರಣ ಮಾಡಲಾಗಿದೆ. ನಿನ್ನೆ(ಜೂನ್ 23) ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಲಾಗಿದೆ. ಈ ಸಮಾರಂಭಕ್ಕೆ ಕುಟುಂಬದವರು, ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಮಗಳಿಗೆ ‘ಆಯ್ರಾ ಯಶ್’ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಅಭಿಮಾನಿಗಳಲ್ಲಿ ಇದ್ದ ಕುತೂಹಕ್ಕೆ ತೆರೆ ಎಳೆದಿದ್ದಾರೆ. ಒಕ್ಕಲಿಗರ ಸಾಂಪ್ರದಾಯದ ಪ್ರಕಾರ ನಾಮಕರಣ ನೆರವೇರಿಸಲಾಗಿದೆ. ಅಂದ್ಹಾಗೆ ಆಯ್ರಾ ಅಂದ್ರೆ ಲಕ್ಷ್ಮಿ ಎನ್ನುವ ಅರ್ಥ ಬರುವ ಹಿನ್ನಲೆಯಲ್ಲಿ ಮಗಳಿಗೆ ಆಯ್ರಾ ಎಂದು ನಾಮಕಾರಣ ಮಾಡಿದ್ದಾರೆ.
ಇತ್ತೀಚಿಗಷ್ಟೆ ರಾಧಿಕಾ ಮತ್ತು ಯಶ್ ಇಬ್ಬರು, ಮಗಳಿಗೆ ಹೆಸರಿಡುವ ಸಮಯ ಬಂದಿದೆ ಮುದ್ದಾದ ಹೆಸರನ್ನು ಪೋಷಕರು ಸೂಚಿದ್ದಾರೆ. ಜೂನ್ 23ರಂದು ನಾಮಕರಣ ಮಾಡುವುದಾಗಿ ಬಹಿರಂಗ ಪಡಿಸಿದ್ರು. ಕೊನೆಗೂ ಯಶ್-ರಾಧಿಕಾ ಮಗಳಿಗೆ ಹೆಸರಿಡುವ ಮೂಲಕ ಅಭಿಮಾನಿಗಳಿದ್ದ ಕುತೂಹಕ್ಕೆ ತೆರೆ ಎಳೆದಿದ್ದಾರೆ.