ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್ ಬರ್ಡ್ ಎಂದು ಹೇಳಲಾಗಿದೆ. ‘ಬ್ಯಾನ್ ಬಾಯ್ ಸಹೀದ್’ ಎನ್ನುವ ಫೇಸ್‌ಬುಕ್ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
ಆದರೆ ನಿಜಕ್ಕೂ ಇದು ಹಮ್ಮಿಂಗ್ ಬರ್ಡ್ ಹೌದೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ನ್ಯೂಸ್ ರೂಮ್ ಪರಿಶೀಲನೆಗೆ ಮುಂದಾದಾಗ ಇದು ಹಮ್ಮಿಂಗ್ ಬರ್ಡ್ ಅಲ್ಲ, ಕಲಾವಿದರೊಬ್ಬರ ಕೈಚಳಕದಲ್ಲಿ ರಚನೆಯಾದ ಕಲೆ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಇದರ ಮೂಲದ ಬಗ್ಗೆ ಉತ್ತರ ಲಭಿಸಿದ್ದು, ಫೋಟೋ ವೆಬ್‌ಸೈಟ್‌ವೊಂದರಲ್ಲಿ ಇದೇ ಫೋಟೋ ಕಂಡು ಬಂದಿದೆ. ಅದರಲ್ಲಿ ‘ಮಲಿನಿಕ್ ಮಿನಿಯೇಚರ್ಸ್’ ಎಂದು ಫೋಟೋಕ್ರೆಡಿಟ್ ನೀಡಲಾಗಿದೆ.
ಇದರ ಜಾಡು ಹಿಡಿದು ಹುಡುಕ ಹೊರಟಾಗ ವೈರಲ್ ಆಗಿರುವ ಫೋಟೋದ ಕಲೆಗಾರ್ತಿ ಅಮೆರಿಕ ಮೂಲಕ ಇನಾ ಎಂದು ತಿಳಿದುಬಂದಿದೆ. ಇನಾ ತಮ್ಮಫೇಸ್‌ಬುಕ್ ಪೇಜ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಕೂಡ ಮಾಡಿದ್ದಾರೆ. ಅವರು ತಮ್ಮ ಹೆಸರು ಇನಾ. ಬಲ್ಗಾರಿಯಾ ಮೂಲದವರಾಗಿದ್ದು, ಸದ್ಯಅಮೆರಿಕದಲ್ಲಿ ನೆಲೆಸುತ್ತಿರುವುದಾಗಿಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ಜಗತ್ತಿನ ಅತಿ ಪುಟ್ಟಪಕ್ಷಿಗಳೆಂದರೆ ಹಮ್ಮಿಂಗ್‌ಬರ್ಡ್ ನಿಜ. ಅವು ಸಾಮಾನ್ಯವಾಗಿ 3-5 ಇಂಚುಸುತ್ತಳತೆ ಇರುತ್ತವೆ. ಅವುಗಳಲ್ಲಿ ಅತಿ ಚಿಕ್ಕದು 2 ಇಂಚು ಸುತ್ತಳತೆ ಹೊಂದಿದೆ. ಆದರೆ ಆದರೆ ಫೋಟೋದಲ್ಲಿರುವುದು ಹಮ್ಮಿಂಗ್‌ಬರ್ಡ್ ಅಲ್ಲ.