ಸುದ್ದಿ

ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡು ರಸ್ತೆ ಮಧ್ಯದಲ್ಲಿ ಅಮಾನವೀಯ ರೀತಿ ವರ್ತಿಸಿದ ಮಹಿಳೆ.

By admin

June 23, 2020

ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ.

ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯನ್ನು ಸಾರ್ವಜನಿಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪ್ರತಿನಿತ್ಯ ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರು ಮಹಿಳೆಯೊಬ್ಬರ ಜೊತೆ ನೀರು ಕೇಳಿದ್ದಾರೆ. ಈ ವೇಳೆ ಮಹಿಳೆ, ಮೂಗು ಮುಚ್ಚಿಕೊಂಡು ಸ್ವಲ್ಪ ದೂ ಇರಿ ಎಂದು ಗೇಟ್ ಹತ್ತಿರಕ್ಕೂ ಬರದಂತೆ ಹೇಳಿ, ಆ ಕಡೆಯಿಂದಲೇ ನೀರು ಕೇಳಬೇಕು ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ ಮನೆಯ ಒಳಗಡೆ ಹೋಗಿ ಒಂದು ಬಾಟಲಿಯಲ್ಲಿ ತುಂಬಿಸಿಕೊಂಡು ಬಂದು ಸ್ವಲ್ ದೂರ ಹೋಗಿ ಎಂದು ಹೇಳಿ ರಸ್ತೆ ಮಧ್ಯದಲ್ಲಿ ನೀರಿನ ಬಾಟಲಿ ಇಟ್ಟು ಬಂದಿದ್ದಾರೆ. ಅಲ್ಲದೆ ಕೂಡಲೆ ಎತ್ಕೊಂಡು ಹೋಗಿ.. ಎತ್ತಕೊಂಡು ಹೋಗಿ ಎಂದು ಹೇಳಿದ್ದಾರೆ.

ಮಹಿಳೆಯ ವರ್ತನೆಯಿಂದ ಬೇಸರಗೊಂಡ ಪೌರಕಾರ್ಮಿಕರು ಅಕ್ಕ.. ನೀರನ್ನು ಕೈಗೆ ಕೊಡಬಹುದಲ್ವ ಅಂತ ಹೇಳಿದ್ದಾರೆ. ಈ ವೇಳೆ ಮಹಿಳೆ, ಅಯ್ಯೋ ಹೋಗಿ ಪರವಾಗಿಲ್ಲ. ನಿಮ್ಮ ಕೈಗೆ ಕೊಟ್ಟರೆ ನಮಗೆ ಕೊರೊನಾ ಬರಲ್ವಾ.. ಹೋಗಿ.. ಹೋಗಿ ಎಂದು ಹೇಳಿಕೊಂಡುಇ ಮಹಿಳೆ ಒಳನಡೆದಿದ್ದಾರೆ.