ಸುದ್ದಿ

ಮದ್ವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

By admin

December 02, 2019

ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ. 

ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದರು. ಹೀಗೆ ಹಲವು ತಿಂಗಳು ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಬಾಲಕೃಷ್ಣ, ಒಂದು ದಿನ ತನ್ನ ಪರಿಚಯಸ್ಥರಿಗೆ ಮೆಸೇಜ್ ಮಾಡಿದ್ದಾನೆ. ತನಗೆ ಮದುವೆಯಾಗಬೇಕು, ಹುಡುಗಿ ಹುಡುಕಿ ಎಂದು ಸಂದೇಶದಲ್ಲಿ ತಿಳಿಸಿದ್ದನು. ಇತ್ತ ಗುರುವಾರ ಉತ್ತರಪ್ರದೇಶದ ಬಿಜೋರಿ ಗ್ರಾಮಕ್ಕೆ ಬಂದು ಭೇಟಿಯಾಗುವಂತೆ ಬಾಲಕೃಷ್ಣ, ಮಾಧವಿ ಅಗ್ನಿಹೋತ್ರಿಯವರನ್ನು ಆಹ್ವಾನಿಸಿದ್ದಾನೆ. ಹಾಗೆಯೇ ಭೇಟಿಗೆ ಬಂದ ಮಾಧವಿ, ಆರೋಪಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಂತೆಯೇ ತಂಡಕ್ಕೆ ಸೂಚನೆ ನೀಡಿದರು. ಹಾಗೆಯೇ ತಂಡ ಆತನನ್ನು ಅರೆಸ್ಟ್ ಮಾಡಿತು. ಶುಕ್ರವಾರ ಪೊಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.