ಪ್ರಕೃತಿಯ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಕೆಲುವೊಂದಕ್ಕೆ ಉತ್ತರ ಸಿಗಲ್ಲ. ಹೀಗೆ ಉತ್ತರ ಸಿಗದ ಅದೇಷ್ಟೋ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಒಬ್ಬ ಮಹಿಳೆ ಮಾರುಕಟ್ಟೆಗೆ ಹೋಗಿ ಕ್ಯಾಪ್ಸಿಕಂ ತಂದು ಅಡುಗೆ ಮಾಡುವಾಗ ಅದನ್ನು ಕಟ್ ಮಾಡುತ್ತಿದ್ದಾಗ ಕ್ಯಾಪ್ಸಿಕಂ ಒಳಗೆ ಇದದ್ದು ಏನು ಗೊತ್ತಾ..? ಇಡೀ ಪ್ರಪಂಚವನ್ನು ಚಿಂತಿಸುವಂತೆ ಮಾಡಿದ ಆ ಘಟನೆ ನಡೆದದ್ದು ಹೇಗೆ ಗೊತ್ತಾ..? ಕೆನಡಾಗೆ ಸೇರಿದ ನಿಕೋಲೆ ಎಂಬ ಮಹಿಳೆ ರಾತ್ರಿ ಅಡುಗೆ ಮಾಡುವ ಸಲುವಾಗಿ ಹತ್ತಿರದ ಸೂಪರ್ ಮಾರ್ಕೇಟ್ ಗೆ ಹೋಗಿ ಮನೆಗೆ ಬೇಕಾದ ತರಕಾರಿ ಖರೀದಿ ಮಾಡಿ ತಂದರು. ಅದರಲ್ಲಿ ಕ್ಯಾಪ್ಸಿಕಂ ಕೂಡ ಋರೀದಿ ಮಾಡಿ ತಂದಿದ್ದರು.
ರಾತ್ರಿ ಅಡುಗೆ ಮಾಡುವ ಸಲುವಾಗಿ ನಿಕೋಲೆಯವರು ಕ್ಯಾಪ್ಸಿಕಂ ಕಟ್ ಮಾಡುತ್ತಿದ್ದಾಗ ಅದರೊಳಗೆ ಏನ್ನಿದೆ ಎಂದು ನೋಡಿ ಸಡನ್ ಆಗಿ ಕಿರುಚಾಡಿದ್ದರು ಕಾರಣ ಕ್ಯಾಪ್ಸಿಕಂ ಒಳಗೆ ಕಪ್ಪೆ ಹೇಗೆ ಬಂತು ಎಂದು ತಲೆಕೆಡಿಸಿಕೊಂಡರು. ಕಪ್ಪೆ ಕ್ಯಾಪ್ಸಿಕಂ ಒಳಗೆ ಹೋಗಲು ಯಾವುದೇ ರಂಧ್ರ ಕೂಡ ಇರಲಿಲ್ಲ. ಹಾಗಾಗಿ ಶಾಕ್ ಆದ ನಿಕೋಲೆ ತಕ್ಷಣ ಕೆನಡಾ ಕೃಷಿ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರು.
ಕ್ಯಾಪ್ಸಿಕಂ ಮತ್ತು ಕಪ್ಪೆಯನ್ನು ವಶಪಡಿಸಿಕೊಂಡ ಕೃಷಿ ಸಚಿವಾಲಯದವರು ಕಪ್ಪೆ ಕ್ಯಾಪ್ಸಿಕಂ ಒಳಗೆ ಹೇಗೆ ಹೋಯಿತು ಎಂದು ತಿಳಿಯಲು ಕಪ್ಪೆಯನ್ನು ಸಾಯಿಸಿ ಪರೀಕ್ಷೆ ಮಾಡಿದರು. ಆದರೆ ಉತ್ತರ ಮಾತ್ರ ಸಿಗಲಿಲ್ಲ. ಅಸಲಿಗೆ ಈ ಕ್ಯಾಪ್ಸಿಕಂ ಅಮೆರಿಕಾದಿಂದ ಕೆನಡಾಗೆ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಉತ್ತರ ತಿಳಿಯಲು ಇನ್ನು ತಪಾಸಣೆ ಮಾಡಲಾಗುತ್ತಿದೆ. ಇದರ ಮಧ್ಯೆ ಕೃಷಿ ವಿಜ್ಞಾನಿಗಳು ಇದಕ್ಕೆ ಕೆಲವೊಂದು ಉತ್ತರಗಳನ್ನು ಕೊಟ್ಟಿದ್ದು ತುಂಬಾ ವಿಸ್ಮಯವಾಗಿವೆ. ಕೃಷಿ ವಿಜ್ಞಾನಿಗಳ ಪ್ರಕಾರ ಯಾವುದೋ ಕೀಟ ಕಪ್ಪೆಯ ಮೊಟ್ಟೆಯನ್ನು ಕ್ಯಾಪ್ಸಿಕಂ ಒಳಗೆ ತೆಗೆದುಕೊಂಡು ಹೋಗಿರುವುದರಿಂದ ಕಪ್ಪೆ ಕ್ಯಾಪ್ಸಿಕಂ ಒಳಗೆ ಬೆಳೆದಿರಬಹುದು ಎಂದು ಹೇಳಿದ್ದಾರೆ.
ಇನ್ನು ಕೆಲವರು ಕ್ಯಾಪ್ಸಿಕಂ ಗ್ರೋ ಆಗುವ ಸಮಯದಲ್ಲಿ ಭಾರಿ ಮಳೆ ಬಿದ್ದರೆ ಕ್ಯಾಪ್ಸಿಕಂ ಕೆಳ ಬಾಗದಲ್ಲಿ ಕ್ರ್ಯಾಕ್ ಬಿಡುತ್ತದೆ. ಆಗ ಚಿಕ್ಕ ಗಾತ್ರದ ಕಪ್ಪೆ ಕ್ರ್ಯಾಕ್ ಮೂಲಕವೇ ಒಳಗೆ ಹೋಗಿ ಅಲ್ಲೇ ಬೆಳೆದಿರಬಹುದು ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಊಹೆ ಅಷ್ಟೇ. ಸ್ಪಷ್ಟ ಉತ್ತರ ಮತ್ತು ಸಂಶೋಧನೆಯಿಂದ ತಿಳಿದು ಬರಲಿದೆ. ಹೀಗೆ ನಮ್ಮ ಊಹೆಗೆ ಮಿಗಿಲಾದ ಅದೇಷ್ಟೋ ವಿಸ್ಮಯಗಳು ಪ್ರಕೃತಿಯಲ್ಲಿ ಪ್ರಕೃತಿಯಲ್ಲಿ ನಡೆಯುತ್ತಿದ್ದು ಇದಕ್ಕೆ ಉತ್ತರ ಕಂಡುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ.