ಸುದ್ದಿ

ಹೊಟ್ಟೆಯ ಬೊಜ್ಜು ಕರಗಿಸುವಂತಹ ಸುಲಭ ಉಪಾಯಗಳು,.ಇದನ್ನೊಮ್ಮೆ ಅನುಸರಿಸಿ ನೋಡಿ,.!

By admin

September 23, 2019

ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್​ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ.

ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ ಅಂಗಗಳು, ಲಿವರ್, ಜೀರ್ಣಾಂಗವ್ಯೂಹ, ಕರುಳು ಹಾಗೂ ಅದರ ಸುತ್ತ ಹಾಗೂ ಒಳಭಾಗದಲ್ಲೂ ಸಂಗ್ರಹವಾಗಿರುವ ಕೊಬ್ಬು. ಇದನ್ನು ತಿಳಿದುಕೊಳ್ಳಲು ಸರಳ ಪರೀಕ್ಷೆ ಎಂದರೆ ಸೊಂಟದ ಸುತ್ತಳತೆಯ ಪರೀಕ್ಷೆ. ಗಂಡಸರಲ್ಲಿ ಸಾಮಾನ್ಯವಾಗಿ 40 ಇಂಚಿಗಿಂತ ಜಾಸ್ತಿ ಹೊಟ್ಟೆಯ ಸುತ್ತಳತೆ ಇದ್ದಲ್ಲಿ ಇವರಿಗೆ ವಿಸರಲ್ ಫ್ಯಾಟ್ ಇದೆ ಎನ್ನಬಹುದು. ಇನ್ನು ಹೆಂಗಸರಲ್ಲಿ ಹೊಟ್ಟೆಯ ಸುತ್ತಳತೆ 30 ಇಂಚಿಗಿಂತ ಹೆಚ್ಚಿದ್ದರೆ ಹೊಟ್ಟೆಯ ಒಳ ಅಂಗಗಳಲ್ಲಿರುವ ಕೊಬ್ಬಿನ ಮಟ್ಟ ಹೆಚ್ಚಿದೆ ಎನ್ನಬಹುದು. ಇದನ್ನು ಕಡಿಮೆ ಮಾಡುವ ಪರಿಹಾರಗಳನ್ನು ತಿಳಿಯೋಣ.