ಇನ್ನೇನು ಬೇಸಿಗೆ ಶುರುವಾಯಿತು. ಇಂತಹ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿ, ಫ್ರೆಶ್ ಆಗಿ ಇಟ್ಕೋಬೇಕು. ಇದಕ್ಕಾಗಿ ಕಲ್ಲಂಗಡಿ ಹಣ್ಣಿಗಿಂತ ಉತ್ತಮವಾದದ್ದು ಇನ್ಯಾವುದಿದೆ ಹೇಳಿ? ಕಲ್ಲಂಗಡಿ ಹಣ್ಣು ಟೇಸ್ಟಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿರುವವರಿಗೆ ಕಲ್ಲಂಗಡಿ ಬೆಸ್ಟ್.
ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಸೇವನೆಯಿಂದ ಪ್ರಯೋಜನ ಮತ್ತು ಪರಿಹಾರವಿದೆ. ಕ್ಯಾಲೋರಿ ಬಗ್ಗೆ ಭಯ ಬೇಡ. ಕಲ್ಲಂಗಡಿಯಲ್ಲಿ ಶೇ.94ರಷ್ಟು ನೀರಿನ ಅಂಶವಿದೆ. ಲೈಕೋಪೀನ್, ಪೊಟ್ಯಾಶಿಯಂ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳಿವೆ.
ಕಲ್ಲಂಗಡಿಯಲ್ಲಿ ಫೈಬರ್ ಅಂಶವಿರೋದ್ರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆದ್ರೆ ಕಲ್ಲಂಗಡಿಯನ್ನು ನೀವು ಯಾವ ಸಮಯದಲ್ಲಿ ತಿನ್ನುತ್ತೀರಾ ಅನ್ನೋದು ಕೂಡ ಅಷ್ಟೇ ಮಹತ್ವದ ವಿಚಾರ. ಸಂಜೆ 7 ಗಂಟೆಯ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ. ಯಾಕಂದ್ರೆ ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಮಧ್ಯಾಹ್ನ 12-1 ಗಂಟೆ ಸಮಯ ಕಲ್ಲಂಗಡಿ ಸೇವನೆಗೆ ಉತ್ತಮವಾದದ್ದು.
ಕಲ್ಲಂಗಡಿ ಜೀರ್ಣಕ್ರಿಯೆಗೆ ಹೆಚ್ಚು ಸಹಕರಿಸುವುದಿಲ್ಲ. ರಾತ್ರಿ ಸೇವಿಸಿದರೆ ಮರುದಿನ ನಿಮ್ಮ ಹೊಟ್ಟೆ ಅಪ್ಸೆಟ್ ಆಗಬಹುದು. ಕಲ್ಲಂಗಡಿಯಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ರಾತ್ರಿ ಸೇವನೆಯಿಂದ ನಿಮ್ಮ ತೂಕ ಹೆಚ್ಚಾಗಬಹುದು. ನಿದ್ರಾಹೀನತೆ ಕಾಡಬಹುದು.