ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ ಬೀಜದಲ್ಲಿಯೂ ಸಾಕಷ್ಟು ಔಷಧಿ ಗುಣವಿದೆ. ಕೆಲವೊಂದು ಬೀಜಗಳು ನಮ್ಮ ತೂಕ ಕಡಿಮೆ ಮಾಡಲು ನೆರವಾಗುತ್ತವೆ.
*ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಬೀಜ ಕಸದ ಬುಟ್ಟಿ ಸೇರುತ್ತೆ. ಆದ್ರೆ ಕಲ್ಲಂಗಡಿ ಬೀಜ ಬಹಳ ಒಳ್ಳೆಯದು. ಹಾಲು ಅಥವಾ ನೀರಿನ ಜೊತೆ ಸೇವನೆ ಮಾಡಬಹುದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಲೀಕೊಪಿನ್ ಎಂಬ ಉತ್ಕರ್ಷಣ ನಿರೋಧಕವು ಪುರಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಅಮೈನೋ ಆಮ್ಲವು ಅರ್ಜಿನೈನ್ ಆಗಿ ಪರಿವರ್ತನೆ ಆಗುತ್ತದೆ ಇದು ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
*ಮುಖದ ಮೇಲಾಗುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ತೆಗೆದ ಎಣ್ಣೆಯನ್ನು ಲೇಪಿಸಬೇಕು.
*ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕರಿಸುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜ ವಯಸ್ಸಾಗುತ್ತಿರುವವರಲ್ಲಿನ ವೃದ್ದಾಪ್ಯ ಸಮಸ್ಯೆಗಳನ್ನು ಕಡಿಮೆ ಮಾಡಿ ಯೌವ್ವನವಾಗಿ ಕಾಣಿಸುವಂತೆ ಮಾಡುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜವನ್ನು ಹುರಿದು ಪುಡಿ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.
*ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿರುವ ಪಾಲಿ, ಮೋನೋ ಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆಮ್ಲಗಳು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.