ಉಪಯುಕ್ತ ಮಾಹಿತಿ

ವೋಟರ್ ಕಾರ್ಡ್ ನಿಮ್ಮಲ್ಲಿ ಇಲ್ಲವೇ?ಚಿಂತೆ ಬೇಡ!ವೋಟರ್ ಐಡಿ ಇಲ್ಲದಿದ್ದರೂ ವೋಟ್ ಹಾಕೋದು ಹೇಗೆ ಗೊತ್ತಾ?

By admin

March 11, 2019

ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಚುನಾವಣೆ ಹತ್ತಿರ ಬರ್ತಿದ್ದಂತೆ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಜೊತೆ ಮತದಾರರು ತಯಾರಿ ಶುರು ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನೂ ತನ್ನ ಹಕ್ಕು ಚಲಾಯಿಸಬೇಕಾಗುತ್ತದೆ. ಆದ್ರೆ ಅನೇಕರು ವೋಟರ್ ಐಡಿ ಇಲ್ಲ ಎನ್ನುವ ಕಾರಣಕ್ಕೆ ಮತದಾನ ಮಾಡಲು ಹೋಗುವುದಿಲ್ಲ.

ಸಾಮಾನ್ಯವಾಗಿ ವೋಟರ್ ಐಡಿ ಹಾಗೂ ಸ್ಲಿಪ್ ಮತದಾನಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದ್ರೆ ಚಿಂತೆ ಬೇಡ. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಸಾಕು. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಚುನಾವಣಾ ಅಧಿಕಾರಿ ಬಳಿ ಹೋಗಿ ನಿಮ್ಮ ಗುರುತಿನ ದಾಖಲೆಗಳನ್ನು ನೀಡಬೇಕು.

ಪಾಸ್ ಪೋರ್ಟ್, ಚಾಲನಾ ಪರವಾನಿಗೆ, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆ ಗುರುತಿನ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ನೀಡಬೇಕು. ಬ್ಯಾಂಕ್ ಪಾಸ್ಬುಕ್, ಎಂಎನ್ಆರ್ಇಜಿಎ ಕಾರ್ಡ್, ಆರೋಗ್ಯ ವಿಮೆ ಕಾರ್ಡ್, ಚುನಾವಣಾ ಆಯೋಗ ನೀಡಿರುವ ಮತದಾರರ ಸ್ಲಿಪ್ ನೀಡಬೇಕು.

ಮತದಾರರ ಸ್ಲಿಪ್ ನೀವು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಬಹುದು. ನಿಮ್ಮ ಹೆಸ್ರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದಾದ್ರೆ ನೀವು ಮತ ಚಲಾವಣೆ ಮಾಡಲು ಸಾಧ್ಯವಿಲ್ಲ.