ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ ಅವರು ಬಣ್ಣ ಹಚ್ಚಲೇ ಇಲ್ಲ. ಆದ್ರೆ ಈಗ ಮತ್ತೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಲು ಬಣ್ಣ ಹಚ್ಚಲಿದ್ದಾರೆ.
ಮತ್ತೆ ತೆರೆ ಮೇಲೆ ಬರಲಿರುವ ವಿನೋದ್ ರಾಜ್
ವಿನೋದ್ ರಾಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರು ಹಾಗು ಅವರ ನೃತ್ಯವನ್ನು ಇಷ್ಟ ಪಡದವರೇ ಇಲ್ಲ. ಇನ್ನು ಅವರನ್ನು ಕನ್ನಡದ ಮೈಕಲ್ ಜಾಕ್ಸನ್ ಎಂದು ಎಲ್ಲರೂ ಕರೆಯುತ್ತಾರೆ. ಆದರೆ ಅವರು ಸಿನಿಮಾ ಕ್ಷೇತ್ರದಿಂದ ಬಲು ಬೇಗ ದೂರಾಗಿದ್ದು, ಎಲ್ಲರಿಗು ಬೇಸರದ ಸಂಗತಿಯಾಗಿತ್ತು. ಜೊತೆಗೆ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕೆಂದುಕೊಂಡರೂ ಅದು ಆಗಿರಲಿಲ್ಲ. ಆದ್ರೆ ಈಗ ಅವರು ,ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಹೌದು. ಮುಖವಾಡ’ ಎಂಬ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಚಿತ್ರತಂಡ ತಿಳಿಸಿದೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಗೆ
ಇನ್ನು ‘ಮುಖವಾಡ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಇನ್ನು ಈ ಸಿನಿಮಾದಲ್ಲಿ ಪವನ್ ತೇಜ್ ನಾಯಕನಾಗಿದ್ದು, ಶಿಲ್ಪಾ ಮಂಜುನಾಥ್ ನಾಯಕಿಯಾಗಿದ್ದಾರೆ. ಶಿಲ್ಪಾ ಈಗಾಗಲೇ ಕನ್ನಡ ಹಾಗೂ ತಮಿಳು ಸಿನಿಮಾ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಸಹದೇವ್ ಆಕ್ಷನ್ ಕಟ್ ಹೇಳುತ್ತಿದ್ದು, ಎಸ್ ಕೆ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಹಾಗಾಗಿ ಈ ಚಿತ್ರದ ಕೆಲವೊಂದು ದೃಶ್ಯಗಳಿಗೆ ವಿನೋದ್ ರಾಜ್ ನಟಿಸಬೇಕೆಂದು ಚಿತ್ರತಂಡದ ಆಸೆಯಾಗಿದೆ. ಹಾಗಾಗಿ ಚಿತ್ರತಂಡ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಅನೇಕ ವರ್ಷಗಳ ಬಳಿಕ ಮತ್ತೆ ಡಾನ್ಸ್ ರಾಜನಾದ ವಿನೋದ್ ರಾಜ್ ಅವರು ತೆರೆ ಮೇಲೆ ಬರುತ್ತಿದ್ದಾರೆ. ಇನ್ನು ಅವರು ಬಣ್ಣ ಹಚ್ಚುತ್ತಿರುವುದು ನಿಜಕ್ಕೂ ಎಲ್ಲರಿಗು ಸಂತಸದ ವಿಷಯವಾಗಿದೆ.