ನೆಲಮಂಗಲದಲ್ಲಿ ನಟ ವಿನೋದ್ ರಾಜ್ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು.
ಈ ಗ್ಯಾಂಗ್ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ. ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ.ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್ಗಳು ಬ್ರ್ಯಾಂಡೆಂಡ್ ಬರೋಬ್ಬರಿ 5 ರಿಂದ 8 ಸಾವಿರ ಬೆಲೆ ಬಾಳುವಂತದ್ದಾಗಿದೆ.
ಶೂಗಳು, ಗಾಗಲ್ಸ್ ಹಾಕಿಕೊಂಡು ಹೀರೋ ರೇಂಜೆ ಗೆ ಬಿಲ್ಡಪ್ ಕೊಟ್ಟು ಐಶಾರಾಮಿ ಜೀವನ ಮಾಡುತ್ತಿದ್ದ. ಬಂಧಿತನನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಆತನ ಗ್ಯಾಂಗ್ ನ ಇತರ ಸದಸ್ಯರನ್ನು ಬಂಧಿಸಿಲು ಬಲೆ ಬೀಸಿದ್ದಾರೆ.
ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ಈ ಖದೀಮರ ಗ್ಯಾಂಗ್ ಯಾರಿಗೂ ದ್ರೋಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ವಿನೋದ್ ರಾಜ್ ಕಳೆದುಕೊಂಡಿರುವ ಹಣದ ರಿಕವರಿ ಬಗ್ಗೆ ಇನ್ನುತನಿಖೆ ನಡೆಸುತ್ತಿದ್ದಾರೆ.