ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ಜನಸ್ನೇಹಿ ಪ್ರಯತ್ನ ಮಾಡಿದೆ.
ಪೂರ್ವ ನಿಗದಿಯಂತೆ ಪೊಲೀಸರ ತಂಡ ಸಂಜೆಯ ವೇಳೆಗೆ ಅರೆ ಬೊಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು. ಗ್ರಾಮ ಪಂಚಾಯಿತಿಯ ಸದಸ್ಯ ಸೇರಿ ದಂತೆ ಮುಖಂಡರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾತ್ರಿ 8.00 ಕ್ಕೆ ಆರಂಭವಾದ ಸಭೆ ಸುಮಾರು 12 ಗಂಟೆವರೆಗೂ ನಡೆಯಿತು. 09 ಗಂಟೆಗೆ ಎಸ್‌ಪಿ ರವಿ ಕೂಡ ಗ್ರಾಮಕ್ಕೆ ಧಾವಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಸೇವೆಗಳು ಜನರಿಗೆ ಹತ್ತಿರವಾಗಲೂ ಹೊಸ ಪ್ರಯೋಗ ಹಾಗೂ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಮೂಡಿಸುವ ಜೊತೆಗೆ ಜನರಿಗೆ ಪೊಲೀಸರ ವ್ಯವಸ್ಥೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಪೊಲೀಸರೊಂದಿಗೆ ಗ್ರಾಮಸ್ಥರು, ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 200 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಸ್ ನಿಲ್ದಾಣ, ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ನಾಗರಿಕರು ಪೊಲೀಸರನ್ನು ಕೋರಿದರು ಶಾಲೆಯ ಆವರಣದಲ್ಲಿಯೇ ಪೊಲೀಸರು ರಾತ್ರಿ ಮಲಗುವ ಮುನ್ನ ಗ್ರಾಮದ ಎಲ್ಲ ಬೀದಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸ್ ಸೇವೆಗಳು ಜನರಿಗೆ ಹತ್ತಿರವಾಗಲೂ ಹೊಸ ಪ್ರಯೋಗ ಹಾಗೂ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಮೂಡಿಸುವ ಜೊತೆಗೆ ಜನರಿಗೆ ಪೊಲೀಸರ ವ್ಯವಸ್ಥೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಪೊಲೀಸರೊಂದಿಗೆ ಗ್ರಾಮಸ್ಥರು, ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದಾರೆ.